ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ `ಕನ್ನಡ ಸಾಹಿತ್ಯ ವಿಮರ್ಶೆ'ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಥೆಗಾರ ಲೋಕೇಶ್ ಅಗಸನಕಟ್ಟೆ ಉದ್ಘಾಟಿಸಿದರು. ಪ್ರೊ.ಜೆ. ಕರಿಯಪ್ಪ ಮಾಳಿಗೆ, ಪ್ರೊ. ತಾರಿಣಿ ಶುಭದಾಯಿನಿ ಇತರರು ಇದ್ದರು.
- ಕಥೆಗಾರ ಲೋಕೇಶ್ ಅಗಸನಕಟ್ಟೆ ಅನಿಸಿಕೆ
- ಕನ್ನಡ ಸಾಹಿತ್ಯ ವಿಮರ್ಶೆ ಕುರಿತು ವಿಶೇಷ ಉಪನ್ಯಾಸ
ಚಿತ್ರದುರ್ಗ: ಕನ್ನಡ ಸಾಹಿತ್ಯದ ವಿಮರ್ಶೆ ಅಧ್ಯಯನಕ್ಕೆ ಇಂಗ್ಲಿಷ್ ಜ್ಞಾನ ಅಗತ್ಯ ಎಂದು ಕಥೆಗಾರ ಲೋಕೇಶ್ ಅಗಸನಕಟ್ಟೆ ಹೇ ಳಿದರು. ಕಾಲೇಜು ಶಿಕ್ಷಣ ಇಲಾಖೆ, ಐಕ್ಯೂಎಸಿ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ನಗರದ ಸರ್ಕಾರಿ ಕಲಾಕಾ ಲೇಜಿನಲ್ಲಿ ಶನಿವಾರ ಆಯೋಜಿಸಿದ್ದ `ಕನ್ನಡ ಸಾಹಿತ್ಯ ವಿಮರ್ಶೆ'ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು.
ಸಾಹಿತ್ಯ ವಿಮರ್ಶೆಗೆ ಹಲವು ತಾತ್ವಿಕ ಗ್ರಹಿಕೆಗಳಿರುತ್ತವೆ. ಸಾಹಿತ್ಯ ಕೃತಿಯಲ್ಲಿರುವ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ ಅದರ ಮೌಲ್ಯ ನಿರ್ಧರಿಸುವ ಜಾಣೆ್ಮ ವಿಮರ್ಶಕರಿಗೆ ಇರಬೇಕು. ಕÊತಿಗಳು ಹಲವು ಭಿನ್ನ ಭಿನ್ನ ಅನುಭವ ನೀಡುತ್ತವೆ. ಸಾಹಿತ್ಯ ಮತ್ತು ವಿಮರ್ಶೆ, ಈ ಎರಡರಲ್ಲೂ ಚಲನಶೀಲತೆ ಗುಣವಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೃತಿಯಲ್ಲಿರುವ ವಸ್ತು ಹಾಗೂ ಸಮಾಜ ನಿಷ್ಠೆಯನ್ನರಿತು ವಿಮರ್ಶೆಯ ಸ್ವರೂಪ ಗ್ರಹಿಸಬೇಕು ಎಂದರು.
ಪ್ರಾಚಾರ್ಯ ಪ್ರೊ.ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಸಮಾಜಮುಖಿಯಾದ ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಸ್ಥಳೀಯ ಚರಿತ್ರೆ ಮತ್ತು ಬರಹಗಾರರ ಸಾಹಿತ್ಯ ಕುರಿತು ವಿಶೇಷ ಅಧ್ಯಯನ ನಡೆಸಿ ಪ್ರಬಂಧ ರಚಿಸಬೇಕು. ಸ್ನಾತಕೋತ್ತರ ಪದವಿ ಕಲಿಕೆ ಜತೆ ವ್ಯಾಪಕ ಕ್ಷೇತ್ರಕಾರ್ಯ ನಡೆಸಿ ಕಲೆ, ಸಂಸ್ಕೃತಿ ಮತ್ತು ಅಲಕ್ಷಿತ ಕಲಾವಿದರು ಹಾಗೂ ತತ್ವ ಪದಗಳನ್ನು ಸಂಗ್ರಹಿಸುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ಪದವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಐಕ್ಯೂಎಸಿ ಸಮಿತಿ ಸಂಚಾಲಕಿ ಪ್ರೊ. ತಾರಿಣಿ ಶುಭದಾಯಿನಿ ಮಾತನಾಡಿ, ಬೌದ್ಧಿಕ ವಿಕಾಸಕ್ಕೆ ಪೂರಕವಾದ ವಿಚಾರ ಸಂಕಿರಣಗಳನ್ನು ಕಾಲೇಜಿನಲ್ಲಿ ಪ್ರತಿ ತಿಂಗಳು ಏರ್ಪಡಿಸಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪ್ರಾಧ್ಯಾಪಕರಿಗೆ ಸಲಹೆ ನೀಡಿದರು. ಸ್ನಾತಕೋತ್ತರ ಪದವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೆ. ಚಿತ್ತಯ್ಯ, ಉಪನ್ಯಾಸಕ ಜಿ.ಎಸ್. ಯಶೋಧರ ಮಾತನಾಡಿದರು.