ಕಸಾಪ ಜಿಲ್ಲಾ ಘಟಕ ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎಂ.ಆರ್.ಮAಜುನಾಥ್ ಉದ್ಘಾಟಿಸಿದರು. ಕೆ.ಎಂ. ಶಿವಸ್ವಾಮಿ, ಡಾ.ವಿ.ಎಲ್.ಪ್ರಶಾಂತ್, ಡಾ. ಚೌಳೂರು ಲೋಕೇಶ್, ರೂಪೇಶ್‌ಶೆಟ್ಟಿ, ಸಿ. ರಂಗನಾಯ್ಕ ಇದ್ದರು. 
ಚಿತ್ರದುರ್ಗ

ನಿರಂತರ ಶ್ರಮದಿಂದ ಜ್ಞಾನ, ಯಶಸ್ಸು ಗಳಿಸಲು ಸಾಧ್ಯ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ ಎಂ.ಆರ್. ಮಂಜುನಾಥ್ ಅನಿಸಿಕೆ
  • ಕನ್ನಡ ವಿಷಯದಲ್ಲಿ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಸಾಪ ಜಿಲ್ಲಾ ಘಟಕದಿಂದ ಪುರಸ್ಕಾರ
  • ಕನ್ನಡ ಭಾಷೆ
ಚಿತ್ರದುರ್ಗ: ಕನ್ನಡ ಭಾಷೆಯಲ್ಲಿ ಸಾಧನೆ ತೋರಿದವರಿಗೆ ಉಳಿದ ಭಾಷೆಗಳು ಕಠಿಣಿವಾಗುವುದಿಲ್ಲ ಎಂದು ಡಿಡಿಪಿಐ ಎಂ.ಆರ್.ಮAಜುನಾಥ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕಗಳೊAದಿಗೆ ಉತ್ತೀರ್ಣರಾದ ಜಿಲ್ಲೆಯ ವಿದ್ಯಾರ್ಥಿಗಳಿಗೆ ನಗರದ ಎಸ್‌ಎಂಎಸ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಕುವರ, ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಸ್ತಿನ ಅಧ್ಯಯನ, ನಿರಂತರ ಪರಿಶ್ರಮದಿಂದ ಎಂಥ ಕಠಿಣ ಪರೀಕ್ಷೆಗಳನ್ನು ಎದುರಿಸುವ ಧೈರ್ಯ ದೊರಕುತ್ತದೆ. ಕನ್ನಡ ನಮ್ಮ ಮಾತೃ ಭಾಷೆ. ಮಾತೃಭಾಷೆಯಲ್ಲಿ ಉತ್ತಮ ಜ್ಞಾನವಿದ್ದರೆ ಉಳಿದ ವಿಷಯಗಳಲ್ಲಿ ಅದ್ಭುತ ಸಾಧನೆ ಮಾಡಬಹುದು. ಕನ್ನಡದ ವಿಷಯದಲ್ಲಿ ಪ್ರೌಢಹಂತದಲ್ಲೇ ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.
ಕನ್ನಡದಲ್ಲಿ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ ವಾಗಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಯೊಂದಿಗೆ ಇನ್ನೊಬ್ಬರನ್ನು ಸನ್ಮಾನಿಸುವ ಹಂತಕ್ಕೆ ಬೆಳೆಯಬೇಕು ಎಂದು ಸಾಧಕ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಕನ್ನಡಭಾಷೆ ಇಂಗ್ಲೀಷ್‌ಗಿAಲೂ ಕಠಿಣ. ಆದರೆ, ಮಾತೃಭಾಷೆಯಾದ್ದರಿಂ ದ ಸಾಧನೆ ಮಾಡಲು ಸಾಧ್ಯವಾಗಿದೆ. ಕನ್ನಡ ಪ್ರೇಮ ಹೀಗೇ ಮುಂದುವರಿಯಲಿ. ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗು ತ್ತದೆ.
ಶಿಕ್ಷಣದ ಮುಂದಿನ ಹಂತಗಳಲ್ಲಿ ಯಾವ ಭಾಷೆಯಲ್ಲಾದರೂ ಜ್ಞಾನ ಪಡೆಯಿರಿ. ಕನ್ನಡವನ್ನು ಬಳಸಿ, ಉಳಿಸಬೇಕು. ಮಾತೃ ಭಾಷೆಯಲ್ಲಿ ಸಾಧನೆ ಮಾಡಿದವರಿಗೆ ಸಾಹಿತ್ಯ ಪರಿಷತ್ ಜಿಲ್ಲಾ ಮಟ್ಟದಲ್ಲಿ ಪುರಸ್ಕರಿಸುತ್ತದೆ ಎಂದರು.
ಕನ್ನಡ ವಿಷಯ ಪರಿವೀಕ್ಷಕ ಸಿ. ರಂಗನಾಯ್ಕ ಮಾತನಾಡಿ, ಕನ್ನಡ ವಿಷಯದಲ್ಲಿ ಈ ಬಾರಿ ಜಿಲ್ಲೆಯಲ್ಲಿ ೧೯೬ ವಿದ್ಯಾರ್ಥಿಗಳು ೧೨೫ಕ್ಕೆ ೧೨೫ ಅಂಕಗಳನ್ನು ಪಡೆದಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಕನ್ನಡ ಬೆಳೆಸುವ ರಾಯಭಾರಿಗಳಾಗಬೇಕು ಎಂದು ತಿಳಿಸಿದರು.
ಪರಿಷತ್‌ನ ಚಿತ್ರದುರ್ಗ ತಾಲೂಕು ಅಧ್ಯಕ್ಷ ಡಾ.ವಿ.ಎಲ್.ಪ್ರಶಾಂತ್, ಇಂಡಿಯಾನ ಎಸ್‌ಜೆಎಂ ಹಾರ್ಟ್ ಸೆಂಟರ್ ಕಾರ್ಯ ನಿರ್ವಾಹಕ ಅಽಕಾರಿ ರೂಪೇಶ್‌ಕುಮಾರ್ ಶೆಟ್ಟಿ ಮಾತನಾಡಿದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ. ಚೌ ಳೂರು ಲೋಕೇಶ್ ಇತರರು ಇದ್ದರು. ನೂರಕ್ಕೂ ಹೆಚ್ಚು ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.