(ಸಿಟಿಡಿ ೨೨ ಇಮ್ಮಡಿಶ್ರೀ) ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಬುಧವಾರ ಆಯೋಜಸಿದ್ದ ಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಇಮ್ಮಡಿ ಶ್ರೀ, ಮಲ್ಲಿಕಾರ್ಜುನ್, ಡಿ.ಸಿ.ಮೋಹನ್, ಇ. ಮಂಜುನಾಥ್, ಕಾಳಘಟ್ಟ ಹನುಮಂತಪ್ಪ, ಎಚ್. ಆಂಜನೇಯ, ವೈ. ಪ್ರಕಾಶ್, ದಾವಣಗೆರೆ ರಾಜು ಇದ್ದರು. 
ಚಿತ್ರದುರ್ಗ

ಜ್ಞಾನಾಮೃತ ಎಷ್ಟೇ ಅತಿಯಾದರೂ ವಿಷವಾಗದು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅನಿಸಿಕೆ
  • ಭೋವಿ ಗುರುಪೀಠದಲ್ಲಿ ಜ್ಞಾನ ಸಂಭ್ರಮ ಕಾರ್ಯಕ್ರಮ
  • ಜ್ಞಾನ ಸಂಭ್ರಮ ಕಾರ್ಯಕ್ರಮ
ಚಿತ್ರದುರ್ಗ: ಅತಿಯಾದರೆ ಅಮೃತವೂ ವಿಷವಾಗುತ್ತದೆ, ಆದರೆ ಜ್ಞಾನಾಮೃತ ಎಷ್ಟೇ ಅತಿಯಾದರೂ ವಿಷವಾಗದು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಗುರುಪೀಠದಲ್ಲಿ ಬುಧವಾರ ಆಯೋಜಿಸಿದ್ದ ಜ್ಞಾನ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಜ್ಞಾನಾಮೃತ ಸ್ವಿಕರಿಸಿದವರು ಯಾವುದಾದರೂ ಕ್ಷೇತ್ರದಲ್ಲಿ ಶಾಶ್ವತವಾಗಿ ಕಾರ್ಯನಿರ್ವಹಿಸಿ ಅಮರರಾಗುತ್ತಾರೆ. ಇದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಉತ್ತಮ ಉದಾಹರಣೆ ಎಂದು ತಿಳಿಸಿದರು.
ಉದ್ಯೋಗಕ್ಕಾಗಿ ಶಿಕ್ಷಣವೆಂಬುದು ಸಲ್ಲದು. ಶಿಕ್ಷಣ ಮನುಷ್ಯನಲ್ಲಿ ವಿವೇಕ ಮತ್ತು ಪ್ರಜ್ಞಾವಂತಿಕೆ ಬೆಳೆಸುವ ಶಕ್ತಿಯಾಗಿದೆ. ಜಗತ್ತಿನಲ್ಲಿ ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ, ನಾವು ಆ ಕೆಲಸವನ್ನು ಹೇಗೆ ಭಾವಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂಬುದು ಮುಖ್ಯ ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡಿ, ಇಲಾಖೆ ವಿದ್ಯಾರ್ಥಿಗಳಿಗೆ ಒದಗಿಸುವ ಸೌಲಭ್ಯಗಳ ಕುರಿತು ವಿವಿರಿಸಿದರಲ್ಲದೆ, ಉತ್ತಮ ಸಂಸ್ಕಾರ, ಆದರ್ಶ ಗುಣಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್‌ಜೆಎಸ್ ಸಂಸ್ಥೆ ಕಾರ್ಯದರ್ಶಿ ಡಿ.ಸಿ. ಮೋಹನ್, ಗೌನಹಳ್ಳಿ ಗೋವಿಂದಪ್ಪ ಮಾತನಾಡಿದರು. ಎಸ್‌ಜೆಎಸ್ ಸಂಸ್ಥೆ ನಿರ್ದೇಶಕರಾದ ಇ. ಮಂಜುನಾಥ್, ಕಾಳಘಟ್ಟ ಹನುಮಂತಪ್ಪ, ಎಚ್. ಆಂಜನೇಯ, ವೈ. ಪ್ರಕಾಶ್, ದಾವಣಗೆರೆ ರಾಜು ಇದ್ದರು.