Kannada: ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು. 
ಚಿತ್ರದುರ್ಗ

Kannada: ಕನ್ನಡಕ್ಕೆ ಹಿಂದಿ, ಇಂಗ್ಲಿಷ್ ಮೆಟ್ಟಿ ನಿಲ್ಲುವ ಶಕ್ತಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಚಾರ್ಯ ಡಾ. ಸಿ. ಶಿವಲಿಂಗಪ್ಪ ಪ್ರತಿಪಾದನೆ
  • ಮಾತೃಭಾಷೆಯಾದ ಕನ್ನಡವನ್ನು ಪ್ರೀತಿಸಬೇಕು
  • ಕನ್ನಡ ರಾಜ್ಯೋತ್ಸವವು ಮನೆತನದ ಹಬ್ಬವಾಗಬೇಕು

ಚಳ್ಳಕೆರೆ:ಸಂಸ್ಕೃತಭಾಷೆಯನ್ನೇ ತನ್ನೊಳಗೆ ಜೀರ್ಣಿಸಿಕೊಂಡುಬೆಳೆದಿರುವ ಕನ್ನಡ ಭಾಷೆಗೆ ಹಿಂದಿಮತ್ತು ಇಂಗ್ಲಿಷ್‌ನಂತಹ ಭಾಷೆಗಳನ್ನುದಿಟ್ಟವಾಗಿ ಮೆಟ್ಟಿ ನಿಲ್ಲುವಶಕ್ತಿ ಇದೆ ಎಂದು ನಿವೃತ್ತಪ್ರಾಚಾರ್ಯ ಡಾ.ಸಿ.ಶಿವಲಿಂಗಪ್ಪಅವರು ಪ್ರತಿಪಾದಿಸಿದರು.

ತಾಲೂಕಿನ ನಗರಂಗೆರೆಗ್ರಾಮದಲ್ಲಿ ಭಾನುವಾರ ಕನ್ನಡಹಿತರಕ್ಷಣಾ ವೇದಿಕೆಯಿಂದಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವಕಾರ್ಯಕ್ರಮವನ್ನು ಉದ್ಘಾಟಿಸಿಅವರು ಮಾತನಾಡಿದರು.

ಮಾತೃಭಾಷೆಪ್ರೀತಿಸಿ

"ಪ್ರತಿಯೊಬ್ಬರೂತಮ್ಮ ಕುಟುಂಬ ಮತ್ತು ಕರುಳಸಂಬಂಧವನ್ನು ಪ್ರೀತಿಸುವಂತೆಮಾತೃಭಾಷೆಯಾದ ಕನ್ನಡವನ್ನುಪ್ರೀತಿಸಬೇಕು.ನೋವು ಮತ್ತುಸಂತೋಷಕ್ಕೆ ಭಾಷೆಯೇ ಧನಿಯಾಗಬೇಕು.ಕನ್ನಡ ಭಾಷೆಗೆಧಕ್ಕೆಯಾದಾಗ ಹೋರಾಟ ಮಾಡುವ ಮನೋಭಾವಬೆಳೆಸಿಕೊಳ್ಳಬೇಕು.ದೈನಂದಿನವ್ಯಾವಹಾರಿಕ ಭಾಷೆಯಲ್ಲಿಕನ್ನಡವನ್ನು ಕಡ್ಡಾಯವಾಗಿಬಳಸಬೇಕು,"ಎಂದು ಡಾ.ಸಿ.ಶಿವಲಿಂಗಪ್ಪಅವರು ಜನತೆಗೆ ತಿಳಿ ಹೇಳಿದರು.

ರಾಜ್ಯೋತ್ಸವಬದ್ಧತೆ

ಪತ್ರಕರ್ತ ಹಾಗೂಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿಮಾತನಾಡಿ, ಗ್ರಾಮೀಣಭಾಗದಲ್ಲಿ ಕನ್ನಡಕ್ಕಾಗಿ ಒಗ್ಗೂಡಿಸಂಭ್ರಮದಿಂದ ರಾಜ್ಯೋತ್ಸವಆಚರಿಸುತ್ತಿರುವುದು ಸಮಾಜಕ್ಕೆಮಾದರಿಯಾಗಿದೆ."ಜಾತ್ರೆ,ಉತ್ಸವಗಳು ಕೇವಲಪರಂಪರೆಯಾದರೆ,ಕನ್ನಡ ರಾಜ್ಯೋತ್ಸವವುಮನೆತನದ ಹಬ್ಬವಾಗಬೇಕು.ಇದು ಸಾಂಕೇತಿಕಆಚರಣೆಯಾಗದೆ,ಬದುಕಿನ ಬದ್ಧತೆಆಗಬೇಕು," ಎಂದುಒತ್ತಿ ಹೇಳಿದರು.ಮುಂದಿನ ಪೀಳಿಗೆಯಾದಯುವ ಸಮುದಾಯಕ್ಕೆ ನಾಡ ಅಭಿಮಾನವನ್ನುಬಿತ್ತಬೇಕು ಎಂದರು.

ದೇವಾಲಯನಿರ್ಮಾಣಕ್ಕೆ ₹16ಲಕ್ಷ ರೂ.

ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಜೀವ ಮೂರ್ತಿಅವರು, ಪ್ರಸ್ತುತಸಮಾಜದಲ್ಲಿ ಕನ್ನಡ ಜಾಗೃತಿಅತ್ಯಗತ್ಯ.ಪ್ರತಿಯೊಬ್ಬರಿಗೂಸ್ವಯಂ ಪ್ರೇರಿತ ಭಾಷಾಭಿಮಾನಇರಬೇಕು ಎಂದರು.

ಈ ಸಂದರ್ಭದಲ್ಲಿಅವರು ಗ್ರಾಮದಲ್ಲಿ ಅಪೂರ್ಣವಾಗಿರುವದೇವಾಲಯಗಳ ನಿರ್ಮಾಣ ಕಾರ್ಯಕ್ಕೆ₹15 ಲಕ್ಷರೂ ಮತ್ತು ಎಸ್ಸಿ ಕಾಲನಿಯ ದೇವತಾಕಾರ್ಯಕ್ಕೆ ₹1ಲಕ್ಷ ರೂ.ಸೇರಿ ಒಟ್ಟು₹16 ಲಕ್ಷರೂ. ಹಣನೀಡುವುದಾಗಿ ಘೋಷಣೆ ಮಾಡಿದರು.ಅಲ್ಲದೆ,ಪ್ರತಿ ವರ್ಷವೂಕನ್ನಡ ರಾಜ್ಯೋತ್ಸವ ಆಚರಣೆಗೆಧನ ಸಹಾಯ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿಗ್ರಾಪಂ ಅಧ್ಯಕ್ಷೆ ಮಂಗಳಮ್ಮ,ನೃತ್ಯ ನಿಕೇತನಸಂಸ್ಥೆಯ ಯು.ಎಸ್.ವಿಷ್ಣು ಮೂರ್ತಿರಾವ್, ಅಜ್ಮಿತ್ವುಲ್ಲಾ, ಬೋರಣ್ಣ,ರುದ್ರಣ್ಣ,ದ್ಯಾಮಣ್ಣ,ಬಿ.ಸಿ.ವೆಂಕಟೇಶ್‌ಮೂರ್ತಿ,ಗುತ್ತಿಗೆದಾರಜಗದೀಶ್, ಸಂಜೀವಪ್ಪ,ಎಂ.ಎಸ್.ಮೃತ್ಯುಂಜಯ,ಮತ್ತಿತರರುಉಪಸ್ಥಿತರಿದ್ದರು.ಈ ವೇಳೆ ಆಶಾಕಾರ್ಯಕರ್ತೆಯರು,ಗ್ರಾಪಂ ಪಂಚಾಯತಿಸ್ವಚ್ಛತಾ ಸಿಬ್ಬಂದಿ ಮತ್ತು ಆಟೋಚಾಲಕರನ್ನು ಸನ್ಮಾನಿಸಲಾಯಿತು.