ಚಿತ್ರದುರ್ಗದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಡಾ.ಬಿ. ರಾಜಶೇಖರಪ್ಪ, ಯಶೋಧಾ ರಾಜಶೇಖರಪ್ಪ, ಡಾ.ಬಿ.ಬಿ. ಭರತ್ ಇತರರು ಇದ್ದರು.
- ಡಾ.ಬಸವಕುಮಾರ ಸ್ವಾಮೀಜಿ ಕಳವಳ
- ಎಸ್‌ಜೆಎಂಐಟಿಯಲ್ಲಿ ಕನ್ನಡ ರಾಜ್ಯೋತ್ಸವ
- ರಾಜ್ಯದ ಏಕೀಕರಣದ ರೂವಾರಿ ಮಾಜಿ ಸಿಎಂ ಎಸ್. ನಿಜಲಿಂಗಪ್ಪ
ಚಿತ್ರದುರ್ಗ: ತಿಳಿವಳಿಕೆ ಕೊರತೆಯಿಂದ ಕನ್ನಡ ಭಾಷೆ ಮೂಲೆಗುಂಪಾಗುತ್ತಿದೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಪಾಲಕರು ಮಕ್ಕಳಿಗೆ ಒಂದರಿAದ ೧೦ನೇ ತರಗತಿವರೆಗೆ ಓದಿಸುವ ಮೂಲಕ ಕನ್ನಡದ ಮಹತ್ವ ತಿಳಿಸಬೇಕು. ವಚನ, ದಾಸ ಸಾಹಿತ್ಯಗಳಿಂದಲೂ ಕನ್ನಡಕ್ಕೆ ಕೊಡುಗೆ ಇದೆ. ರಾಜ್ಯದ ಏಕೀಕರಣದ ರೂವಾರಿ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರಿಗೆ ಶ್ರೀ ಜಯದೇವ ಜಗದ್ಗುರು ಪ್ರೇರಣೆಯಾಗಿದ್ದರು ಎಂದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡದ ಲಿಪಿ ಅ ತ್ಯಂತ ಸುಂದರವಾಗಿದೆ. ಕನ್ನಡ ದ್ರಾವಿಡ ಮಹಾಕುಟುಂಬಕ್ಕೆ ಸೇರಿದ ಭಾಷೆಯಾಗಿದೆ. ಕನ್ನಡದ ಪ್ರಾಚೀನತೆ ಕುರಿತಂತೆ ಅನೇಕ ಸಂಶೋಧನೆಗಳಾಗಿವೆ ಎಂದರು.
ಯಶೋದಾ ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಪಿ.ಬಿ. ಭರತ್ ಮಾತನಾಡಿದರು. ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಕೆ.ಆರ್. ಕÊಷ್ಣಾರೆಡ್ಡಿ, ಡಾ.ಎಸ್.ಪಿ. ಶಿವಕುಮಾರ್, ಡಾ.ಟಿ.ವಿ. ಅರವಿಂದ, ಡಾ.ಎಚ್.ಜೆ. ಲೋಕೇಶ್, ಡಾ.ಎ.ಎಂ. ರಾಜೇಶ್, ಡಾ.ಎಸ್. ಚೇತನ್, ಡಾ.ಇ. ನಿರಂಜನ್, ಪ್ರೊ.ಎ.ಪಿ. ಶಶಿಧರ್, ಡಾ.ಕೆ. ಕುಮಾರಸ್ವಾಮಿ, ಎಂ. ಪಲ್ಲವಿ, ಕೆ.ಆರ್. ಸಾಗರ್ ಇದ್ದರು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಆಕಾಂಕ್ಷಾ ಪ್ರಾರ್ಥಿಸಿ ದರು. ಕೆ.ಪಿ. ಸ್ಪಂದನಾ ಸ್ವಾಗತಿಸಿ, ದಿವ್ಯಾ ವಂದಿಸಿದರು. ರುಚಿತಾ ನಿರೂಪಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.