- JDS
- Silver Jubilee
- ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ
ಚಿತ್ರದುರ್ಗ: ಬೆಂಗಳೂರಿನ ಜೆಪಿ ಭವನದಲ್ಲಿ ನ.೨೨ರಂದು ಜಾತ್ಯತೀತ ಜನತಾದಳ ಪಕ್ಷದ ರಜತ ಮಹೋತ್ಸವ ಆಚರಿಸ ಲಾಗುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ. ಜಯಣ್ಣ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಜೆಡಿಎಸ್ ಸ್ಥಾಪನೆಯಾಗಿ ೨೫ ವರ್ಷಗಳಾಗಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿದ್ದಾರೆ.
ರಜತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಪಕ್ಷವನ್ನು ಕ್ರಿಯಾಶೀಲವಾಗಿ ಇಡಲು ಶ್ರಮಿಸುತ್ತಿರುವ ದೇವೇಗೌಡರು, ಕುಮಾರಸ್ವಾಮಿ ಅವರಿಗೆ ನಾವೆಲ್ಲರೂ ಸಾಥ್ ನೀಡಬೇಕಿದೆ. ಮಂದಿನ ದಿನಗಳಲ್ಲಿ ಸಂಘಟನೆ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುವುದು. ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರು ಸಿದ್ಧರಾಗ ಬೇಕಿದೆ ಎಂದರು.
ಜೆಡಿಎಸ್ ಎನ್‌ಡಿಎ ಮೈತ್ರಿಕೂಟದಲ್ಲಿದೆ. ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದAತೆ ೨೦೨೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ಗೆಲುವು ಸಿಗಲಿದೆ. ಬಿಜೆಪಿ ಜತೆ ಮೈತ್ರಿ ಮುಂದುವರಿಯಲಿದೆ. ವಿವಿಧ ಚುನಾವಣೆಗಳನ್ನು ಎದುರಿಸಿ ಅಽಕಾರ ಹಿಡಿಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮುಖಂಡ ರವೀಂದ್ರ ಮಾತನಾಡಿ, ಜೆಡಿಎಸ್ ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟಂಥ ಪಕ್ಷವಾಗಿದೆ. ನಮ್ಮ ಪಕ್ಷ ರೈತರ ಪರವಾಗಿದೆ. ೨೫ ವರ್ಷದ ಆಚರಣೆಯನ್ನು ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲೂ ಆಚರಿಸಲಾ ಗುವುದು. ರಾಜ್ಯದಲ್ಲಿ ಜನ ವಿರೋಽ ಸರ್ಕಾರವಿದೆ. ಜನರ ಸಮಸ್ಯೆ ಪರಿಹರಿಸುವ ಬದಲು ಅಽಕಾರಕ್ಕಾಗಿ ಕಾಂಗ್ರೆಸ್ಸಿನಲ್ಲಿ ಕಿತ್ತಾಟ ನಡೆದಿದೆ ಎಂದರು.
ಡಿ. ಗೋಪಾಲಸ್ವಾಮಿ ನಾಯಕ್, ಪ್ರತಾಪ್‌ಜೋಗಿ, ಮಂಜುನಾಥ್, ಗಣÉÃಶ್, ಪರಮೇಶ್ವರಪ್ಪ, ಹನುಮಂತಪ್ಪ, ವೀರೇಶ್, ತಿಪ್ಪೇಸ್ವಾಮಿ, ಮಂಜಣ್ಣ, ಶಂಕರ್ ವೀರಭದ್ರಪ್ಪ, ರಮೇಶ್‌ಕುಮಾರ್, ಶೇಖರ್‌ಮೂರ್ತಿ, ಚಿದಾನಂದ ಮತ್ತಿತರ ಪಕ್ಷದ ಪ್ರಮುಖರು ಇದ್ದರು.