ಸಾಂಕೇತಿಕ ಚಿತ್ರ 
ಚಿತ್ರದುರ್ಗ

ಸರ್ಜರಿಗೆ ಮುಂದಾದ ಕಾರಾಗೃಹ ಇಲಾಖೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ೪ ವರ್ಷಕ್ಕಿಂತ ಹೆಚ್ಚು ಒಂದೇ ಕಡೆ ಇರುವವರ ಪಟ್ಟಿ ಕೊಡುವಂತೆ ಸೂಚನೆ
  • ಡಿಸಿ, ಎಸ್‌ಪಿಗೂ ಹೈ ಪವರ್ ಕಮಿಟಿಯಲ್ಲಿ ಸ್ಥಾನ
  • ಜಿಲ್ಲಾ ಸಂದರ್ಶಕರ ಮಂಡಳಿ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಲವು ಕೈದಿಗಳಿಗೆ ರಾಜಾತಿಥ್ಯ ದೊರೆಯುತ್ತಿರುವ ಸುದ್ದಿ ಬಹಿರಂಗವಾದ ಬೆನ್ನಲ್ಲೇ ಕಾರಾಗೃಹ ಇಲಾಖೆ, ೪ ವರ್ಷಗಳಿಗಿಂತ ಅಽಕ ಕಾಲ ಒಂದೇ ಜೈಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಕೇಡರ್ ಅಽಕಾರಿ ಹಾಗೂ ಸಿಬ್ಬಂದಿಯ ಮಾಹಿತಿ ಕೇಳಿದೆ.
ಮೂಲವೊಂದರ ಪ್ರಕಾರ ಮೇಜರ್ ಸರ್ಜರಿ ವಿಚಾರದಲ್ಲಿರುವ ಇಲಾಖೆ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹಲವು ಅಽಕಾರಿ ಗಳು, ಸಿಬ್ಬಂದಿಯನ್ನು ವರ್ಗಾಯಿಸುವ ಯೋಚನೆ ನಡೆಸಿದೆ. ಜೈಲುಗಳಲ್ಲಿ ನಿಷೇಽತ ವಸ್ತುಗಳು, ಅಕ್ರಮಗಳಿಗೆ ಅವಕಾಶ ಕೊಡಬಾರದೆಂಬ ಇರಾದೆಯಿಂದ ಅಽಕಾರಿಗಳು, ಸಿಬ್ಬಂದಿಗೆ ಬಿಸಿ ಮುಟ್ಟಿಸಲು ಇಲಾಖೆ ನಿರ್ಧರಿಸಿದೆ. ಸೂಚಿಸಿದ ವರ್ಷಗಳಿಗಿಂತ ಹೆಚ್ಚಿನ ಕಾಲ ಸೇವೆ ಸಲ್ಲಿಸಿದವರ ಪಟ್ಟಿಯನ್ನು ತಕ್ಷಣ ಸಲ್ಲಿಸುವಂತೆ ನಿರ್ದೇಶಿಸಿದೆ.
ಕೈದಿಗಳಿಗೆ ಮೊಬೈಲ್, ಮದ್ಯ, ಗಾಂಜಾ ಪೂರೈಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ೩ ವರ್ಷಗಳ ಹಿಂದೆ ಜಿಲ್ಲಾ ರಕ್ಷಣಾಽಕಾರಿ ಅಧ್ಯಕ್ಷತೆಯಲ್ಲಿ ಎಎಸ್‌ಪಿ, ಐಎಸ್‌ಡಿ ಡಿವೈಎಸ್‌ಪಿ ಹಾಗೂ ಜೈಲು ಅಽÃಕ್ಷಕರ ಒಳಗೊಂಡ ಆಂತರಿಕ ಭದ್ರತಾ ಸಲಹಾ ಸಮಿತಿ ರಚಿಸಲಾಗಿದೆ. ಈ ಸಮಿತಿ ಭದ್ರತೆ ಮತ್ತಿತರ ವಿಚಾರಗಳನ್ನು ಪರಿಶೀಲಿಸಬೇಕಿದೆ. ಜೈಲುಗಳಲ್ಲಿ ಸೌಲಭ್ಯಗಳ ಸುಧಾರಣೆ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಽಕಾರಿ ಅಧ್ಯಕ್ಷತೆಯ ಜಿಲ್ಲಾ ಸಂದರ್ಶಕರ ಮಂಡಳಿಯೂ ಇದೆ. ಜಿಲ್ಲಾ ಮಟ್ಟದಲ್ಲಿ ಎಸ್‌ಪಿ, ಡಿಸಿ ಅವರ ಮೇಲಿರುವ ಈ ಹೊಣೆಗಾರಿಕೆಯೊಂದಿಗೆ ಸರ್ಕಾರ ಈಚೆಗೆ ರಚಿಸಿರುವ ಕಾರಾಗೃಹ ಇಲಾಖೆ ಎಡಿಜಿಪಿ ನೇತೃತ್ವದ ಉನ್ನತಮಟ್ಟದ ಸಮಿತಿ ಸದಸ್ಯರನ್ನಾಗಿ ಮಾಡಲು ನಿರ್ದೇಶಿಸಿದೆ ಎನ್ನಲಾಗಿದೆ. ಎಸ್‌ಪಿ, ಡಿಸಿ ಕಾಲ ಕಾಲಕ್ಕೆ ಜೈಲುಗಳನ್ನು ಪರಿಶೀಲಿಸಿ ಸಮಿತಿಗೆ ವರದಿ ಸಲ್ಲಿಸಬೇಕಿದೆ.
ಸಿಬ್ಬಂದಿ ಕೊರತೆ
ರಾಜ್ಯದಲ್ಲಿ ಎಂಟು ಕೇಂದ್ರ ಕಾರಾಗೃಹಗಳು, ೨೧ ಜಿಲ್ಲಾ, ಒಂದು ಬಯಲು ಕಾರಾಗೃಹ ಹಾಗೂ ೨೪ ಸಬ್ ಜೈಲುಗಳಿವೆ. ಅಂದಾಜು ಮೂರೂವರೆ ಸಾವಿರ ಸಿಬ್ಬಂದಿ ಇದ್ದಾರೆ. ವಿಚಾರಣಾಽÃನ ಹಾಗೂ ಸಜಾಸಹಿತ ಅಂದಾಜು ೧೫೫೦೦ ಕೈದಿಗಳು ವಿವಿಧ ಕಾರಾಗೃಹಗಳಲ್ಲಿ ಇದ್ದಾರೆ. ಆದರೆ ಮುಖ್ಯವಾಗಿ ವಾರ್ಡರ್‌ಗಳ ಸಂಖ್ಯೆ ಶೇ.೫೦ ಕೊರತೆ ಇದೆ ಎಂದು ತಿಳಿದು ಬಂದಿದೆ.
ನೇಮಕವಿಲ್ಲ, ಪುರಸ್ಕಾರವೂ ಇಲ್ಲ
ಕಳೆದ ಐದು ವರ್ಷಗಳಿಂದ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯಾಗಿಲ್ಲ. ಈ ಹಿಂದೆ ನೇಮಕವಾದ ೩೦೦ ಕ್ಕೂ ಹೆಚ್ಚು ಅಽಕಾರಿ, ಸಿಬ್ಬಂದಿ ಪೊಲೀಸ್ ಮತ್ತಿತರ ಇಲಾಖೆಗಳಿಗೆ ಹೊಸದಾಗಿ ನೇಮಕವಾಗಿದ್ದಾರೆ. ಇನ್ನು ಅಮಾನತು, ವಜಾ ಆದಂತಹವರ ಕರ್ತವ್ಯದ ಹೊರೆಯೂ ಈಗಿರುವವವರ ಮೇಲೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.
೨೦೨೧ರ ನಂತರದಲ್ಲಿ ನಗದು ಪುರಸ್ಕಾರ, ಪ್ರೋತ್ಸಾಹವೂ ಇಲ್ಲವಾಗಿದೆ. ಹೊಸ ಮ್ಯಾನ್ಯೂವಲ್ ಪ್ರಕಾರ ಆರು ಜನರಿಗೆ ಒಬ್ಬ ವಾರ್ಡರ್ ನೇಮಕವಾಗಬೇಕಿದೆ. ಹಿಂದೆ ಮಂಜೂರಾದ ಹುದ್ದೆಗಳು ಭರ್ತಿಯಾದರೂ ಒಂದಿಷ್ಟು ಸುಧಾರಣೆ ಸಾಧ್ಯವೆಂಬ ಮಾತಿದೆ.
ಭದ್ರತಾ ಸಲಕರಣೆ: ರಾಜ್ಯದ ಹಲವು ಜೈಲುಗಳಿಗೆ ಹೊಸದಾಗಿ ತಪಾಸಣೆ ಉಪಕರಣಗಳು ಸರಬರಾಜು ಆಗುತ್ತಿವೆ. ಎಚ್‌ಎಚ್‌ಎಂಡಿ, ಡಿಎಫ್‌ಎಂಡಿ, ಡಿಎಸ್‌ಎಂಡಿ, ಸ್ಕ್ಯಾನರ್ ಮೊದಲಾದ ಭದ್ರತಾ ಉಪಕರಣಗಳನ್ನು ಅಗತ್ಯವಿರುವೆಡೆ ಪೂರೈಸಲಾಗುತ್ತಿದೆ.