ಚಿತ್ರದುರ್ಗದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮನೋಹರ ಮಠದ್, ಬಿ. ಚಂದ್ರಹಾಸ್, ರೇಣುಕಾ ಕೆ.ಜಯಲಕ್ಷಿ÷್ಮÃ, ಚಂದ್ರಮ್ಮ, ಕಾರ್ತಿಕ್ ಇತರರಿದ್ದರು. 
ಚಿತ್ರದುರ್ಗ

ಸಂಸ್ಕೃತಿ ಮರೆಯುತ್ತಿರುವುದು ವಿಷಾದನೀಯ

ಪ್ರಮುಖ ಮುಖ್ಯಾಂಶಗಳು

  • ಮನೋಹರ ಮಠದ್ ಅಭಿಮತ
  • ಸಾಮೂಹಿಕ ಸತ್ಯನಾರಾಯಣ ಪೂಜಾ ಕರ‍್ಯಕ್ರಮ
  • ಸಂಪ್ರದಾಯ
ಚಿತ್ರದುರ್ಗ: ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ನಾವು ಮರೆಯುತ್ತಿದ್ದೇವೆ ಎಂದು ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ್ ವಿಷಾದಿಸಿದರು.
ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಸಂಸ್ಥೆ, ಬಿ.ಸಿ.ಟ್ರಸ್ಟ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದೇಶಿ ಸಂಸ್ಕೃತಿಗೆ ನಾವು ಮಾರು ಹೋಗಿದ್ದರೆ, ಅವರು ನಮ್ಮ ಸಂಸ್ಕೃತಿ ಅನುಸರಿಸುತ್ತಿದ್ದಾರೆ. ಸೂಕ್ತ ಉಡುಪು ಧರಿಸಿ ದೇವಾಲಯಗಳಿಗೆ ಬರುವಂತೆ ಬೋರ್ಡ್ ಹಾಕುವ ಪರಿಸ್ಥಿತಿ ಇದೆ ಎಂದರು.
ನಾವು ನಮ್ಮ ಪಾಲಿನ ಕೆಲಸವನ್ನು ಮಾಡಬೇಕು. ಪ್ರತಿ-Àಲ ಭಗವಂತ ನೀಡುತ್ತಾನೆ. ಹೆಚ್ಚಿನದಕ್ಕೆ ಆಸೆ ಪಡಬಾರದು. ನಮ್ಮ ಬದುಕು ಮಾದರಿಯಾಗಿರಬೇಕು. ಗೊತ್ತಿಲ್ಲದೆ ಮಾಡಿದ ತಪ್ಪುಗಳಿಗೆ ಪರಿಹಾರವಾಗಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಕಳೆದುಕೊಳ್ಳಬಹುದು. ಆದರೆ ಪುಣ್ಯ ಕ್ಷೇತ್ರಗಳಲ್ಲಿಯೇ ತಪ್ಪು ಮಾಡಿದಾಗ ಅದಕ್ಕೆ ಪರಿಹಾರ ಸಿಗದೆಂದು ಎಚ್ಚರಿಸಿದರು.
ಬಿಸಿ ಟ್ರಸ್ಟ್ ಯೋಜನಾಽಕಾರಿ ಬಿ.ಚಂದ್ರಹಾಸ್ ಮಾತನಾಡಿ, ನಮ್ಮ ಸಂಘ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದರು. ಬಡಾವಣೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇಣುಕಾ ಕರ‍್ಯಕ್ರಮ ಉದ್ಘಾಟಿಸಿದರು. ಪೂಜಾ ಸಮಿತಿ ಅಧ್ಯಕ್ಷೆ ಕೆ.ಜಯಲಕ್ಷಿ÷್ಮÃ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯರು ಪ್ರಾರ್ಥಿಸಿದರು. ಸಂಯೋಜನಾಽಕಾರಿ ಚಂದ್ರಮ್ಮ ಸ್ವಾಗತಿಸಿದರು. ಕಾರ್ತಿಕ್ ನಿರೂಪಿಸಿದರು.