ಚಿತ್ರದುರ್ಗದ ಎಸ್‌ಜೆಎಂ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಇಸ್ರೋ ತಾಂತ್ರಿಕ ಅಽಕಾರಿ ಎಂ.ಜೆ. ಶಿವರಾಜ್, ಡಾ. ಬಸವಕುಮಾರ ಸ್ವಾಮೀಜಿ, ಶಾಂತವೀರ ಮುರುಘ ರಾಜೇಂದ್ರ ಸ್ವಾಮೀಜಿ ಇತರರು ಇದ್ದರು. 
ಚಿತ್ರದುರ್ಗ

ನಿರಂತರ ಶ್ರಮದಿಂದ ಗುರಿ ತಲುಪಲು ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಇಸ್ರೋ ತಾಂತ್ರಿಕ ಅಽಕಾರಿ ಎಂ.ಜೆ. ಶಿವರಾಜ್ ಅಭಿಮತ
  • ಎಸ್‌ಜೆಎಂ ಪಾಲಿಟೆಕ್ನಿಕ್‌
  • ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ
ಚಿತ್ರದುರ್ಗ: ಹೊಸ ಹೊಸ ಆವಿಷ್ಕಾರಗಳೊಂದಿಗೆ ಜಗತ್ತಿನಲ್ಲಿ ಮುಂದಡಿ ಇಡುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಜ ನ ಪಡೆದುಕೊಳ್ಳಬೇಕು ಎಂದು ಇಸ್ರೋ ತಾಂತ್ರಿಕ ಅಽಕಾರಿ, ಎಸ್‌ಜೆಎಂ ಪಾಲಿಟೆಕ್ನಿಕ್ ಹಳೆಯ ವಿದ್ಯಾರ್ಥಿ ಎಂ.ಜೆ. ಶಿವರಾಜ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಎಸ್‌ಜೆಎಂ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ `ಪಾಲಿಫೆಸ್ಟ್-೨೦೨೬'ರಲ್ಲಿ ಮಾತನಾಡಿದರು.
ಗುರಿ ತಲುಪಲು ನಿರಂತರ ಶ್ರಮ ಅಗತ್ಯ. ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವವಿದ್ದರೆ ವಿಜ್ಞಾನ, ತಂತ್ರಜ್ಞಾನದ ಸದು ಪಯೋಗ ಸಾಧ್ಯವಿದೆ. ಜ್ಞಾನಾರ್ಜನೆಗೆ ಮೊಬೈಲ್ ಶೇ.೬ರಷ್ಟು ನೆರವಾದರೆ. ಉಳಿದೆಲ್ಲವೂ ಮನರಂಜಿಸುವ ಚಟುವಟಿಕೆಗಳ ವೀಕ್ಷಣೆಗೆ ಬಳಕೆ ಆಗುತ್ತಿದೆ ಎಂದರು.
ಅAದುಕೊAಡಿದ್ದನ್ನು ಸಾಽಸಿದರೆ ಯಶಸ್ವಿ ವ್ಯಕ್ತಿಗಳಾಗಬಹುದು. ದೇಶದ ಅತ್ಯುನ್ನತ ಬಾಹ್ಯಾಕಾಶ ಸಂಸ್ಥೆಯಲ್ಲಿ ತಾಂತ್ರಿಕ ಅಽಕಾ ರಿಯಾಗಿದ್ದೇನೆ. ನಾನು ಇಲ್ಲಿ ವಿದ್ಯಾರ್ಥಿಯಾಗಿದ್ದೆ. ಅನೇಕ ಸಂದರ್ಶನಗಳನ್ನೂ ಎದುರಿಸಿz್ದೆÃನೆ. ದೃಢ ನಿರ್ಧಾರ, ಅಚಲ ನಂಬಿ ಕೆ ಮತ್ತು ವಿಶ್ವಾಸಗಳಿದ್ದರೆ ಯಾವುದೂ ಕಷ್ಟವಲ್ಲ ಎಂದರು.
ಶ್ರೀ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಓದು ಮೊಟಕುಗೊಳಿಸದೆ ಗುರಿ ಸಾಽಸಬೇಕು. ಕಲಿತ ಸಂಸ್ಥೆಯನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 
ಸದಸ್ಯ ಎಸ್.ಎನ್. ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ೩ ವರ್ಷದ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿದರೆ ಸಾಲದು. ಲ್ಯಾಟರಲ್ ಎಂಟ್ರಿ ಮೂಲಕ ಇಂಜಿನಿಯರಿAಗ್ ಕಾಲೇಜಿಗೆ ಪ್ರವೇಶ ಪಡೆದು ಉನ್ನತ ವ್ಯಾಸಂಗ ಮಾಡಬೇಕು. ಮಹತ್ವದ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಎಸ್‌ಜೆಎA ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ. ಗುಡಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಪ್ರಸ್ತುತ ಬೇಡಿಕೆ ಮತ್ತು ಅನಿ ವಾರ್ಯವಾಗಿ ಕೌಶಲ ರೂಢಿಸಿಕೊಳ್ಳುವುದು ಅಗತ್ಯವಿದೆ. ಪದವಿ ಜತೆಗೆ ಕೌಶಲವೂ ಇರಬೇಕು ಎಂದು ತಿಳಿಸಿದರು.
ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್, ಸಮ್ಮುಖ ವಹಿಸಿದ್ದ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘ ರಾ ಜೇಂದ್ರ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್.ವಿ. ರವಿಶಂಕರ್ ಮಾತನಾಡಿದರು. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ, ಪ್ರಮಾಣ ಪತ್ರ ವಿತರಿಸಲಾಯಿತು.