ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಡಾ.ಬಿ.ಎಂ.ಗುರುನಾಥ್, ಚೆಲುವರಾಜ್, ರಾಜೇಶ್, ಬಿ.ಆರ್. ಗಾಯತ್ರಿ, ಎಂ.ಎನ್. ಪುಷ್ಪವಲ್ಲಿ, ಶಾಂತಕುಮಾರ್, ನಾಗರಾಜ್ ಬೇದ್ರೆ ಇದ್ದರು. 
ಚಿತ್ರದುರ್ಗ

ಚಿತ್ರ ಕಲಾವಿದರ ಕೃತಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಗುರುನಾಥ್ ಅಭಿಪ್ರಾಯ
  • ದುರ್ಗದಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
  • ಚಿತ್ರ ಕಲಾವಿದರದು ಸವಾಲಿನ ಕೆಲಸ

ಚಿತ್ರದುರ್ಗ :

ಸಾವಿರ ಪದಗಳಲ್ಲಿ ವಿಶ್ಲೇಷಿಸಬಹುದಾದುದನ್ನು ಒಂದು ಚಿತ್ರ ತಿಳಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಗುರುನಾಥ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಎಂ.ಕೆ.ಹಟ್ಟಿ ಎಸ್‌ಜೆಎಂ ವಸತಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಾವಿದ ಜವಳಿ ಶಾಂತಕುಮಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಮಾತನಾಡಿದರು.
ಸಾವಿರಾರು ಪದಗಳಲ್ಲಿ ತಿಳಿಸುವುದನ್ನು ಒಂದು ಛಾಯಾಚಿತ್ರ/ಚಿತ್ರ ಹೇಳುತ್ತದೆ ಎಂದಾದರೆ ಚಿತ್ರಕಲೆಗೆ ಎಂಥ ಶಕ್ತಿ ಇದೆ ಎಂಬುದನ್ನು ಅರಿಯಬಹುದು. ಚಿತ್ರ ಕಲಾವಿದರ ಶ್ರಮ ಮತ್ತು ಶ್ರದ್ಧೆ ಅತ್ಯಂತ ಪ್ರಶಂಸನೀಯ. ಕಲಾವಿದರ ಕೃತಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಮುರುಘಾ ಮಠದ ಸಿಇಒ ಚೆಲುವರಾಜ್ ಮಾತನಾಡಿ, ಚಿತ್ರ ಕಲಾವಿದರದು ಸವಾಲಿನ ಕೆಲಸ. ಅವರು ಎಲೆಮರೆಯ ಕಾಯಿ ಯಂತೆ ಕೆಲಸ ನಿರ್ವಹಿಸುತ್ತಾರೆ. ಇವತ್ತಿನ ಎಐ ಯುಗದಲ್ಲಿ ವÊತ್ತಿಪರ ಚಿತ್ರಕಲಾವಿದರಿಗೆ ಧೈರ್ಯ ಅತ್ಯಂತ ಪ್ರಮುಖವಾಗಿದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಽಕಾರಿ ರಾಜೇಶ್ ಕಲಾಕೃತಿಗಳ ಕ್ಯಾಟ್‌ಲಾಗ್ ಬಿಡುಗಡೆಗೊಳಿಸಿದರು. ಶಾಲೆ ಪ್ರಾಚಾರ್ಯೆ ಬಿ.ಆರ್. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಏನ್.ಎಂ. ಪುಷ್ಪವಲ್ಲಿ, ಚಿತ್ರ ಕಲಾವಿದರಾದ ಜವಳಿ ಶಾಂತಕುಮಾರ, ನಾಗರಾಜ್‌ಬೇದ್ರೆ ಇದ್ದರು.
ಕೆ.ಎಸ್. ದೀಪ್ತಿ ಪ್ರಾರ್ಥಿಸಿದರು. ಆಶಾರಾಣಿ ಸ್ವಾಗತಿಸಿ, ಶಿಲ್ಪಾ ವಂದಿಸಿದರು. ಶಿಕ್ಷಕಿ ಎಸ್. ಅನಿತಾ ನಿರೂಪಿಸಿದರು. ಶಾಂತ ಕುಮಾರ್ ಅವರು ರಚಿಸಿದ ತೈಲ ಹಾಗೂ ಜಲ ವರ್ಣದ ೫೦ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.