ಚಿತ್ರದುರ್ಗದಲ್ಲಿ ಶುಕ್ರವಾರ ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಎಸಿ ಡಾ.ಕೆ.ಜಿ. ಕಾಂತರಾಜ್, ಪುಷ್ಪಲತಾ ಭಾವಿಮಠ, ಸಿದ್ರಾಮ ಮಾರಿಹಾಳ, ಡಾ.ಎಂ.ಸಿ.ಸುನೀಲ್‌ಕುಮಾರ್, ಗೋವಿಂದರಾಜು, ಬಿ.ಎಂ.ಗುರುನಾಥ್ ಇತರರು ಇದ್ದರು.
- ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮುಖಂಡರ ಆಗ್ರಹ
- ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು
- ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ
ನಗರದ ಪ್ರಮುಖ ವÊತ್ತಕ್ಕೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಹೆಸರಿನೊಂದಿಗೆ ಪುತ್ಥಳಿ ಸ್ಥಾಪಿ ಸಲು ಕ್ರಮ ಕೈಗೊಳ್ಳಬೇಕೆಂದು ಸಮುದಾಯಗಳ ಮುಖಂಡರು ಒತ್ತಾಯಿಸಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಽಕಾರಿ ಡಾ.ಕೆ.ಜೆ.ಕಾಂತರಾಜ್ ಅವರೆದುರು ಒತ್ತಾ ಯ ಮಂಡಿಸಿದರು. ಹಿಂದುಳಿದ ವರ್ಗಗಳ ಕ್ಷೇಮಾಭಿವÊದ್ಧಿಗೆ ಶ್ರಮಿಸಿದ ಸಮಾಜ ಸೇವಕರಿಗೆ ಅರಸು ಹೆಸರಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಎಸಿ, ಈ ಕುರಿತು ಜಿಲ್ಲಾಽಕಾರಿ ಜತೆ ಚರ್ಚಿಸುತ್ತೇನೆ. ಪ್ರಮುಖ ವÊತ್ತಕ್ಕೆ ಅರಸು ಅವರ ಹೆಸರು ಇಡುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ನಗರಸಭೆ ಆಯುಕ್ತರಿಗೆ ತಿಳಿಸುವುದಾಗಿ ವಿವರಿಸಿದರು.
ಆ.೨೦ ರಂದು ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಡಾ.ಕೆ.ಜೆ.ಕಾಂತರಾಜ್ ಅಽಕಾರಿಗಳಿಗೆ ಸೂಚಿಸಿದರು.
ತರಾಸು ರಂಗಮAದಿರ ಅಥವಾ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಆಚರಿಸಲಾಗುವುದು. ಪ್ರಾಧ್ಯಾಪಕ ಲಕ್ಷಿ÷್ಮÃಕಾಂತ ಉ ಪನ್ಯಾಸ ನೀಡುವರು. ಅರಸು ಅವರ ಭಾವಚಿತ್ರ ಮೆರವಣಿಗೆಯಲ್ಲಿ ಕಲಾತಂಡಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸ ಲಿದ್ದು, ಜನಪ್ರತಿನಿಽಗಳು, ವಿವಿಧ ಸಮುದಾಯಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಎಸಿ ಕೋರಿದರು.
ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ, ಡಿಎಚ್‌ಒ ಡಾ.ಎಂ.ಸಿ.ಸುನೀಲ್‌ಕುಮಾರ್, ತಹಸೀಲ್ದಾರ್ ಗೋವಿಂದ ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಮತ್ತಿತರರು ಇದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಅಂಕಗಳೊAದಿಗೆ ಉತ್ತೀರ್ಣರಾದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದ ಜಯಂತಿ ಕರ‍್ಯಕ್ರಮದಲ್ಲಿ ತಲಾ ಮೂವರನ್ನು ಸನ್ಮಾನಿಸಲಾಗುವುದು.
ವೇದಿಕೆ ಕರ‍್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಪುಷ್ಪಲತಾ ಭಾವಿಮಠ ತಿಳಿಸಿದರು.
ಶ್ರೀ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಗಳ ಆಚರಣೆ ಸಂಬAಧ ಆ.೧೮ರಂದು ಡಿಸಿ ಕಚೇರಿ ಯಲ್ಲಿ ಪೂರ್ವಭಾವಿ ಸಭೆಗಳನ್ನು ಕರೆಯಲಾಗಿದೆ. ಬೆಳಗ್ಗೆ ೧೧ಕ್ಕೆ ಶ್ರೀನುಲಿಯ ಚಂದಯ್ಯ ಜಯಂತಿ ಕುರಿತು ಹಾಗೂ ಬೆಳಗ್ಗೆ ೧೧.೩೦ ಬ್ರ ಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕುರಿತು ಸಭೆ ಜರುಗಲಿದೆ. ಡಿಸಿ ಟಿ.ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಜನಪ್ರತಿನಿಽಗಳು, ಜಿಲ್ಲಾ ಮಟ್ಟದ ಅಽಕಾರಿಗಳು, ಸಮುದಾಯದ ಮುಖಂಡರು ಸಭೆಯಲ್ಲಿ ಭಾಗವಹಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡುವಂತೆ ಪ್ರಕಟಣೆ ತಿಳಿಸಿದೆ.