ಒಳಾಂಗಣ ಚಿತ್ರೀಕರಣಕ್ಕೆ ಅಗತ್ಯವಿರುವ ಭೂಮಿಯನ್ನು ಚಿತ್ರದುರ್ಗದಲ್ಲಿ ಭೂಮಿ ಮಂಜೂರು ಮಾಡುವಂತೆ ಕೋರಿ ಶ್ರೀ ಕಂಠೀ ರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷ ಮಹಬೂಬ್ ಪಾಷಾ ಅವರು ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸೋಮವಾರ ಸಲ್ಲಿಸಿದರು.  
ಚಿತ್ರದುರ್ಗ

ಚಿತ್ರದುರ್ಗದಲ್ಲಿ ಒಳಾಂಗಣ ಚಿತ್ರೀಕರಣ ಸವಲತ್ತು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಕನಿಷ್ಠ ೨೫ ಎಕರೆ ಭೂಮಿ ಮಂಜೂರಿಗೆ ಕೋರಿಕೆ
  • ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷರಿಂದ ಮನವಿ
  • ವಜ್ರ ಮಹೋತ್ಸವ ಜ್ಞಾಪಕಾರ್ಥ ಅಭಿವೃದ್ಧಿಗೆ ಮುಂದಡಿ
ಚಿತ್ರದುರ್ಗ: ಒಳಾಂಗಣ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರ ಸ್ಥಾನ ಚಿತ್ರದುರ್ಗದಲ್ಲಿ ಅಗತ್ಯ ಕನಿಷ್ಠ ೨೫ ಎಕರೆ ಭೂಮಿ ಮಂಜೂರು ಮಾಡುವಂತೆ ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮಹಬೂಬ್ ಪಾಷಾ ಅವರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಶ್ರೀ ಕಂಠೀರವ ಸ್ಟುಡಿಯೋಸ್ ವಜ್ರಮಹೋತ್ಸವ ಜ್ಞಾಪಕಾರ್ಥವಾಗಿ ಅಭಿವÊದ್ಧಿ ಕಾರ್ಯ ಯೋಜನೆ ಕೈಗೊಳ್ಳಬೇಕಾಗಿದೆ. ಚಿತ್ರದು ರ್ಗ ಜಿಲ್ಲೆ ಹೊರಾಂಗಣ ಚಿತ್ರೀಕರಣಕ್ಕೆ ಸೂಕ್ತ ಪ್ರದೇಶವಾಗಿದ್ದು,ಇಲ್ಲಿಯೇ ಒಳಾಂಗಣ ಚಿತ್ರೀಕರಣಕ್ಕೂ ಅನುಕೂಲವಾದರೆ ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ವ್ಯವಹಾರಗಳಲ್ಲೂ ಅಭಿವÊದ್ಧಿ ನಿರೀಕ್ಷಿಸಬಹುದಾಗಿದೆ.
ರಾಜ್ಯಅಥವಾ ಜಿಲ್ಲಾ ಹೆದ್ದಾರಿಗಳಿಗೆ ಹೊಂದಿರುವ ಭೂಮಿಯನ್ನು ಮಂಜೂರು ಮಾಡಿದರೆ ಕಂದಾಯ ಇಲಾಖೆ ನಿಗದಿಪಡಿಸಿದ ದರ ವನ್ನು ಸ್ಟುಡಿಯೋಸ್‌ನಿಂದ ಪಾವತಿಸಲಾಗುವುದು. ಶೀಘ್ರ ಭೂಮಿ ಮಂಜೂರಿಗೆ ಕ್ರಮ ವಹಿಸುವಂತೆ ಪಾಷಾ ಅವರು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರನ್ನು ಕೋರಿದ್ದಾರೆ.