ಹಿರಿಯೂರಿನಲ್ಲಿ ಗುರುವಾರ ಆಯೋಜಿಸಿದ್ದ ಹಗಲು ವೇಷ ಕಲಾ ಸಂಭ್ರಮಕ್ಕೆ ಸಕ್ಕರ ರಂಗಸ್ವಾಮಿ ಚಾಲನೆ ನೀಡಿದರು. ಕೆ.ಎಂ. ರಾಜೇಶ್ವರಿ, ಬಿ.ಎಸ್. ಮಂಜಣ್ಣ ಇತರರಿದ್ದರು. Art
- ಎಸ್. ಜಿ.ರಂಗಸ್ವಾಮಿ ಸಕ್ಕರ ಕಳವಳ
- ಹಗಲು ವೇಷ ಕಲಾ ಸಂಭ್ರಮ
ಹಿರಿಯೂರು: ಮೊಬೈಲ್, ಸಾಮಾಜಿಕ ಜಾಲತಾಣ ಹಾಗೂ ದೃಶ್ಯಮಾಧ್ಯಮಗಳ ಹಾವಳಿಯಿಂದ ದೇಶಿಯ ಕಲೆಗಳಿಗೆ ಪೆಟ್ಟು ಬಿದ್ದಿದೆ. ಅವುಗಳನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ರಂಗಸ್ವಾಮಿ ಸಕ್ಕರ ಹೇಳಿದರು. Art
ನಗರದ ಕೆ.ಎಂ. ಕೊಟ್ಟಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಗಲು ವೇಷಗಾರರ ಸಾಂಸ್ಕೃತಿಕ ಕಲಾ ಸಂಘ, ಪರಿಶಿಷ್ಟ ಜಾತಿ ಸೇವಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಹಗಲು ವೇಷ ಕಲಾ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲಾವಿದರನ್ನು ಗುರುತಿಸಿ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸಬೇಕು. ಆಗ ಯುವ ಜನತೆಯಲ್ಲಿ ಕಲೆಯ ಬಗ್ಗೆ ಆಸಕ್ತಿ, ಅಭಿರುಚಿ ಮೂಡುತ್ತದೆ. ಕಲಾವಿದರು ಸಮಾಜದ ಆಸ್ತಿಯಾಗಿದ್ದು, ಅವರನ್ನು ಗೌರವಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಮುಖ್ಯ ಶಿಕ್ಷಕಿ ಕೆ.ಎಂ. ರಾಜೇಶ್ವರಿ, ಬಿ.ಎಸ್. ಮಂಜಣ್ಣ, ಹಗಲು ವೇಷಗಾರರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಕೆ.ಎಂ. ಗುರುಮೂರ್ತಿ, ಕಾರ್ಯದರ್ಶಿ ಕೃಷ್ಣಪ್ಪ, ಶಿವಮೂರ್ತಿ, ಎಂ. ಹೇಮಗಿರಿ, ಎಲೆನ್ ಮೇರಿ, ಕಲಾವಿದರಾದ ಭಿಕ್ಷಾಪತಿ ಕೂಡ್ಲಿಗಿ, ದುರ್ಗಾಪ್ರಸಾದ್, ಶಾಂತವೀರಪ್ಪ, ರಾಮಾಂಜನೇಯ, ತಮಟೆ ಚಂದ್ರು, ರಂಗಸ್ವಾಮಿ, ಹನುಮಂತರಾಯ ಇತರರಿದ್ದರು.
ಹಗಲು ವೇಷಗಾರರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಭೀಮಾಂಜನೇಯ ಯುದ್ಧ ಕಿರುನಾಟಕ ಪ್ರದರ್ಶನಗೊಂಡಿತು.