ಚಿತ್ರದುರ್ಗದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಪ್ರಾರಂಭಿಕ ಮಾಹಿತಿ ಶಿಬಿರವನ್ನು ಪ್ರಾಚಾರ್ಯೆ ಎ. ಹನುಮಕ್ಕ ಉದ್ಘಾಟಿಸಿದರು. ಶ್ರೀ ಬ್ರಹ್ಮನಿಷ್ಠಾನಂದ ಸ್ವಾಮೀಜಿ, ಜಿ.ಎಸ್. ಉಜ್ಜಿನಪ್ಪ, ಪಿ.ವೈ.ದೇವರಾಜ್ ಪ್ರಸಾದ್ ಇತರರು ಇದ್ದರು. 
ಚಿತ್ರದುರ್ಗ

ನಮ್ಮ ಸೈನಿಕರಿಂದ ಭಾರತ ಸುರಕ್ಷಿತ

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯೆ ಎ. ಹನುಮಕ್ಕ ಅನಿಸಿಕೆ
  • ಡಯಟ್‌ನಲ್ಲಿ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ಶಿಬಿರ
  • ಶಾರದಾ ರಾಮಕೃಷ್ಣಾಶ್ರಮದ ಶ್ರೀ ಬ್ರಹ್ಮನಿಷ್ಟಾನಂದ ಸ್ವಾಮೀಜಿ ಆಶೀರ್ವಚನ
ಚಿತ್ರದುರ್ಗ: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದ್ದರೂ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು ಎಂದು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಎ. ಹನುಮಕ್ಕ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯಿAದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿ, ನಮ್ಮ ಸೈನಿಕರು ಹಗಲು ಇರುಳೆನ್ನದೆ ಗಡಿ ಕಾಯುತ್ತಿರುವುದರಿಂದ ಭಾರತ ಸುರಕ್ಷಿತವಾಗಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿAದ ಸಾಕಷ್ಟು ಅನುಕೂಲಗಳಿವೆ. ಉದ್ಯೋಗ ಮತ್ತು ಶಿಕ್ಷಣಕ್ಕೂ ಅದರಿಂದ ಲಾಭವಿದೆ. ಮುಂದೆ ಶಿಕ್ಷಕರಾಗುವ ನೀವು ಮಕ್ಕಳಿಗೆ ದೇಶಭಕ್ತಿ, ದೇಶಾಭಿಮಾನ, ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಸಬೇಕು.
ಯಾವುದೇ ಜಾತಿ, ಧರ್ಮವಿರಲಿ ಮೊದಲು ನಾವು ಭಾರತೀಯರೆಂಬ ಅಭಿಮಾನ ಬೆಳೆಸಬೇಕು ಎಂದು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ನಗರದ ಶಾರದಾ ರಾಮಕೃಷ್ಣಾಶ್ರಮದ ಶ್ರೀ ಬ್ರಹ್ಮನಿಷ್ಟಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಚರಿತ್ರೆಯನ್ನು ಯಾರು ಓದುತ್ತಾರೋ ಅವರಲ್ಲಿ ಕೆಟ್ಟ ಆಲೋಚನೆಗಳು ಸುಳಿಯುವುದಿಲ್ಲ.
ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ದೇಶಕ್ಕಾಗಿ ಏನು ಕೊಟ್ಟಿದ್ದೇನೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಗವದ್ಗೀತೆ ಓದಬೇಕು. ಯುವ ಜನರು ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಎಂದರು. ಒಬ್ಬ ಶಿಕ್ಷಕ ತನ್ನ ಜವಾಬ್ದಾರಿ ಮರೆತರೆ ಸಮಾಜಕ್ಕೆ ಕೆಡುಕಾಗುತ್ತದೆ. ಶಿಕ್ಷಕ ವÊತ್ತಿಗೆ ಬಹಳ ಮಹತ್ವವಿದೆ. ಆದ್ದರಿಂದ ಈ ವÊತ್ತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವಂತೆ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ಉಜ್ಜಿನಪ್ಪ, ಸ್ಥಾನಿಕ ಆಯುಕ್ತ ಪಿ.ವೈ. ದೇವರಾಜ್‌ಪ್ರಸಾದ್ ಮಾತನಾಡಿದರು. ಎಸ್. ಪರಮೇಶ್, ಎ. ಹನುಮಂತಪ್ಪ, ರಾಜೇಶ್ ವಿ. ಅವಲಕ್ಕಿ, ಎಂ. ಸೌಮ್ಯಾ, ಬಸವರಾಜ್, ವಿಶ್ವನಾಥ, ಟಿ.ಸಿ.ರವಿ ಇತರರು ಇದ್ದರು.