ಜಿಲ್ಲೆಯ ಬಡವರಿಗೆ ವಸತಿ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ, ಸಿಪಿಐ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಮಂಗಳವಾರ ಅನಿರ್ದಿಷ್ಟಾವಽ ಧರಣಿ ಆರಂಭವಾಯಿತು. ಸಾತಿ ಸುಂದರೇಶ್, ಎಚ್.ಎಂ. ಸಂತೋಷ್, ಜಿ.ಸಿ. ಸುರೇಶ್‌ಬಾಬು ಇತರರು ಇದ್ದರು.  
ಚಿತ್ರದುರ್ಗ

ವಸತಿಗಾಗಿ ಅನಿರ್ದಿಷ್ಟಾವಽ ಧರಣಿ ಆರಂಭ

ನಿವೇಶನ, ವಸತಿ ರಹಿತರ ಹೋರಾಟ ಸಮಿತಿ

ಚಿತ್ರದುರ್ಗ: ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ೩೭ ಲಕ್ಷಕ್ಕೂ ಹೆಚ್ಚು ವಸತಿ ರಹಿತÀರು ಸಂಕಷ್ಟದಲ್ಲಿ ಬದು ಕುತ್ತಿದ್ದು, ನಿವೇಶನ, ಮನೆಗಳಿಗೆ ಅರ್ಜಿ ಹಾಕಿ ೨೫-೩೦ ವರ್ಷಗಳಿಂದ ಕಾಯುತ್ತಿದ್ದಾರೆ. ಆದರೂ ಇನ್ನೂ ಬ ಡವರಿಗೆ ವಸತಿ ಸೌಲಭ್ಯ ಕಲ್ಪಿಸಿಲ್ಲ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆಳುವ ಸರ್ಕಾ ರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ವಸತಿ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ, ಸಿಪಿಐ ಜಿಲ್ಲಾ ಸಮಿತಿ ಜಿಲ್ಲಾಽಕಾರಿ ಕಚೇರಿ ಬಳಿ ಮಂಗಳವಾರ ಆರಂಭಿಸಿದ ಅನಿರ್ದಿಷ್ಟಾವಽ ಧರಣಿಯಲ್ಲಿ ಮಾತನಾಡಿ, ಸ್ವಾತಂತ್ರ ಬಂದು ೭೦ ವರ್ಷಗಳಾಗಿದ್ದರೂ ಇನ್ನು ಬಡವರಿಗೆ ಮನೆಗಳು ಸಿಕ್ಕಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ೨೫೦೦ ಎಕರೆ ಕಂದಾಯ ಭೂಮಿ ಗುರುತಿಸಿ ೫೦ ಸಾವಿರ ನಿವೇಶನಗಳನ್ನು ವಿತರಿಸಬೇಕು. ಮನೆಗಳ ನಿರ್ಮಾಣಕ್ಕೆ ಗ್ರಾಮೀಣ ಪ್ರದೇಶಕ್ಕೆ ೬ ಲಕ್ಷ ರೂ., ನಗರ ಪ್ರದೇಶಕ್ಕೆ ೮ ಲಕ್ಷ ರೂ. ಕೊಡಬೇಕು.

ವಸತಿ ರಹಿತರಿಗೆ ನಿವೇಶನ ಮಂಜೂರು ಮಾಡಿ ಮನೆ ನಿರ್ಮಾಣಕ್ಕೆ ಹಣ ಮಂಜೂರು ಮಾಡದಿದ್ದರೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತಿತರ ಪಕ್ಷಗಳನ್ನು ಸೋಲಿಸಲು ಪ್ರತಿಜ್ಞೆ ಮಾಡಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ಆರಂಭಗೊAಡಿದೆ. ಸಂಘಟಿತ ಹೋರಾಟದಿಂದ ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಾಯಿಸಬಹುದಾಗಿದೆ ಎಂದು ಹೇಳಿದರು.

ರಾಜ್ಯದ ೭ ಕೋಟಿ ಜನರಲ್ಲಿ ೨ ಕೋಟಿ ಸಿಪಿಐ ಮತಗಳಿವೆ ಎಂದು ಪ್ರತಿಪಾದಿಸಿದ ಅವರು, ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.

ಟಿ.ಆರ್. ಉಮಾಪತಿ, ಜಾ-Àರ್‌ಷರೀ-ï ಮತ್ತಿತರ ಪ್ರಮುಖರು ಮಾತನಾಡಿದರು. ಹನುಮಂತಪ್ಪ, ಸತ್ಯಕೀರ್ತಿ, ಪೆನ್ನಯ್ಯ, ತಿಪ್ಪಮ್ಮ, ಎನ್.ಸಿ. ಕುಮಾರಸ್ವಾಮಿ, ಅಮೀನಾ ಬಿ., ಗಿರೀಶ್, ಲೇಪಾಕ್ಷಿ, ರಜಿಯಾ, ಗಿರಿಜಮ್ಮ, ಪರ್ವಿನ್ ಭಾನು ಇತರರು ಇದ್ದರು.

ಪ್ರತಿಭಟನಾಕಾರರು ನಗರದ ಯೂನಿಯನ್ ಪಾರ್ಕ್ನಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಮಾತನಾಡಿ, ಹಲವು ವರ್ಷಗಳಿಂದ ನಿವೇಶನ ಮತ್ತು ಮನೆಗಳಿಗಾಗಿ ಹೋರಾಟ ನಡೆಯುತ್ತಿದೆ. ಆದರೂ, ಆಳುವ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಅದಕ್ಕಾಗಿ ಹೋರಾಟ ಚುರುಕಾಗಬೇಕಾಗಿದೆ ಎಂದರು.

ಬೇಡಿಕೆ ಈಡೇರದೆ ಹೋರಾಟ ನಿಲ್ಲದು

ಜಿಲ್ಲೆಯಲ್ಲಿ ೧.೩೦ ಲಕ್ಷಕ್ಕೂ ಹೆಚ್ಚು ವಸತಿ ರಹಿತರಿದ್ದಾರೆ. ನಿವೇಶನ ಹಾಗೂ ಮನೆಗಳಿಗಾಗಿ ಅನೇಕ ಬಾರಿ ಹೋರಾಟಗಳು ನಡೆದಿವೆ. ಜೀವನ ಸಾಗಿಸಲು ಆಗದ ಬಡವರು ಬಾಡಿಗೆ ಮನೆಗಳಲ್ಲಿ ವಾಸಿಸುವುದು ದುಸ್ತರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬಡವರಿಗೆ ಮನೆಗಳನ್ನು ಕೊಡಬೇಕು. ಬೇಡಿಕೆ ಈಡೇರಿರುವವರೆಗೂ ನಮ್ಮ ಈ ಹೋರಾಟ ನಿಲ್ಲದು ಎಂದು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಜಿ.ಸಿ. ಸುರೇಶ್‌ಬಾಬು ಹೇಳಿದರು.

ಜಿಲ್ಲೆಯ ಬಡವರಿಗೆ ವಸತಿ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ, ಸಿಪಿಐ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಮಂಗಳವಾರ ಅನಿರ್ದಿಷ್ಟಾವಽ ಧರಣಿ ಆರಂಭವಾಯಿತು. ಸಾತಿ ಸುಂದರೇಶ್, ಎಚ್.ಎಂ. ಸಂತೋಷ್, ಜಿ.ಸಿ. ಸುರೇಶ್‌ಬಾಬು ಇತರರು ಇದ್ದರು.

ಬೇಡಿಕೆ ಈಡೇರದೆ ಹೋರಾಟ ನಿಲ್ಲದು ಜಿಲ್ಲೆಯಲ್ಲಿ ೧.೩೦ ಲಕ್ಷಕ್ಕೂ ಹೆಚ್ಚು ವಸತಿ ರಹಿತರಿದ್ದಾರೆ. ನಿವೇಶನ ಹಾಗೂ ಮನೆಗಳಿಗಾಗಿ ಅನೇಕ ಬಾರಿ ಹೋರಾಟಗಳು ನಡೆದಿವೆ. ಜೀವನ ಸಾಗಿಸಲು ಆಗದ ಬಡವರು ಬಾಡಿಗೆ ಮನೆಗಳಲ್ಲಿ ವಾಸಿಸುವುದು ದುಸ್ತರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬಡವರಿಗೆ ಮನೆಗಳನ್ನು ಕೊಡಬೇಕು. ಬೇಡಿಕೆ ಈಡೇರಿರುವವರೆಗೂ ನಮ್ಮ ಈ ಹೋರಾಟ ನಿಲ್ಲದು ಎಂದು ನಿವೇಶನ ಮತ್ತು ವಸತಿ ರಹಿತರ ಹೋರಾಟ
ಸಮಿತಿ ಜಿಲ್ಲಾಧ್ಯಕ್ಷ ಜಿ.ಸಿ. ಸುರೇಶ್‌ಬಾಬು