- ಕಳಪೆ ಕಾಮಗಾರಿಗೆ ಸಂಸದರ ಆತಂಕ
- ಮಧ್ಯ ಪ್ರವೇಶಿಸುವಂತೆ ಕೇಂದ್ರಕ್ಕೆ ಕಾರಜೋಳ ಒತ್ತಾಯ
- ಕಠಿಣ ಕ್ರಮದ ಭರವಸೆ
ಚಿತ್ರದುರ್ಗ: ರಾಜ್ಯಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಜಲಜೀವನ್ ಮಿಷನ್ ಯೋಜನೆ ಕರ್ನಾಟಕದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲವೆಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಲೋಕಸಭೆ ಅಽವೇಶನದಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ಅವರು, ಜೆಜೆಎಂ ರಾಜ್ಯದಲ್ಲಿ ಅದರಲ್ಲೂ ತಮ್ಮ ಕ್ಷೇತ್ರ ಚಿತ್ರದುರ್ಗ ವ್ಯಾಪ್ತಿಯಲ್ಲಿ ಅನುಷ್ಠಾನ ನಿರ್ಲಕ್ಷಿಸಲಾಗಿದ್ದು, ಮಧ್ಯ ಪ್ರವೇಶಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯವನ್ನು ಒತ್ತಾಯಿಸಿದರು.
ಪ್ರತಿ ಗ್ರಾಮೀಣ ಮನೆಗೂ ಕೈಗೆಟುಕುವ ಶುಲ್ಕದಲ್ಲಿ ನಿಯಮಿತ ಮತ್ತು ದೀರ್ಘಾವಽ ಆಧಾರದ ಮೇಲೆ ಗುಣಮಟ್ಟದ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದೊಂದಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೨೦೧೯ರಿಂದ ಜೆಜೆಎಂ
ಜಾರಿಗೊಳಿಸಿದೆ. ಪ್ರತಿ ಗ್ರಾಮದ ಮನೆ, ಅಂಗನವಾಡಿ, ಆಸ್ಪತ್ರೆ, ಶಾಲೆ, ಗ್ರಾಪಂ ಕಚೇರಿ ಹಾಗೂ ಸಮುದಾಯ ಭವನಗಳಿಗೆ ನಲ್ಲಿ ಮೂಲಕ ನೀರು ಪೂರೈಸುವುದು ಯೋಜನೆ ಉದ್ದೇಶವಾಗಿದೆ ಎಂದರು.
ಕರ್ನಾಟಕದಲ್ಲಿರುವ ೧,೦೧,೩೦,೭೦೨ ಕುಟುಂಬಗಳ ಪೈಕಿ ಈಗಾಗಲೇ ೮೬,೮೩,೦೮೯ ಕುಟುಂಬಗಳಿಗೆ ನಲ್ಲಿ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ೩೧ ಜಿಲ್ಲೆಗಳ ೫೯೯೨ ಗ್ರಾಪಂಗಳಲ್ಲಿ ಈ ದಿನದವರೆಗೆ ೯೫೫ ಗ್ರಾಪಂಗಳು ಹರ್‌ಘರ್ ಜಲ್ ಘೋಷಣೆಗೆ ಪ್ರಸ್ತಾವನೆ ಸಲ್ಲಿಸಿವೆ. ಅದರಲ್ಲಿ ೫೩೮ ಗ್ರಾಪಂಗಳು ಹರ್‌ಘರ್ ಜಲ್ ಎಂದು ಘೋಷಣೆಯಾಗಿವೆ ಎಂದು ತಿಳಿಸಿದರು.
ಕರ್ನಾಟಕದ ೨೬,೫೯೧ ಗ್ರಾಮಗಳ ಪೈಕಿ ೫೮೦೩ ಗ್ರಾಮಗಳು ಹರ್‌ಘರ್ ಜಲ್ ಎಂದು ಘೋಷಣೆಯಾಗಿವೆ. ಆದರೆ, ಶೇ.೮೫ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ ಈವರೆಗೆ ಘೋಷಣೆಯಾಗಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ೩,೮೧,೦೧೨ ಮನೆಗಳಲ್ಲಿ ೩,೩೫,೪೨೨ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ್ದರೂ, ಕಾಂಗ್ರೆಸ್ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದರು.
ಕ್ಷೇತ್ರ ಪ್ರವಾಸದ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಕಾಮಗಾರಿಗಳನ್ನು ವೀಕ್ಷಿಸಿದ್ದೇನೆ. ಒಂದು ಗ್ರಾಮದಲ್ಲೂ ಗುಣಮಟ್ಟ ಕಾಮಗಾರಿ ಆಗಿಲ್ಲ. ಪ್ರತಿ ಗ್ರಾಮಗಳಲ್ಲೂ ಹಳೇ ಪೈಪ್‌ಲೈನ್‌ಗಳ ಮುಖಾಂತರವೇ ಮನೆಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಜಿಲ್ಲೆಗೆ ಯೋಜನೆಯಡಿ ೯೪೮ ಕೋಟಿ ರೂ.ಅನುದಾನ ಸಪರ್ಮಕವಾಗಿ ಬಳಕೆಯಾಗಿಲ್ಲವೆಂದು ಆಘಾತ ವ್ಯಕ್ತಪಡಿಸಿದರು.
ಆದ್ದರಿಂದ ಜಲಶಕ್ತಿ ಸಚಿವಾಲಯ ಮಧ್ಯಪ್ರವೇಶಿಸಿ ಕರ್ನಾಟಕದಲ್ಲಿ ಜೆಜೆಎಂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಉಸ್ತುವಾರಿ ವಹಿಸಬೇಕು. ಕಳಪೆ ಕಾಮಗಾರಿಗೆ ಕಾರಣರಾಗಿರುವ ಅಽಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.
ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಯೋಜನೆಗೆ ಸಂಬAಽಸಿದ ೧೬೯ ದೂರುಗಳ ಕುರಿತು ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಲೋಪವಾಗಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.