ಅಡವಿಗೊಲ್ಲರಹಳ್ಳಿಯಲ್ಲಿ 1.30 ಕೋಟಿ ವೆಚ್ಚದ ಗೋಕಟ್ಟೆ ಅಭಿವದ್ಧಿ ಹಾಗೂ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ. ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು. Bhoomi Pooje
ಚಿತ್ರದುರ್ಗ

ನೀರಾವರಿ ಸೌಲಭ್ಯದಿಂದ ರೈತರ ಬದುಕಲ್ಲಿ ಸುಧಾರಣೆ

ಗೋಕಟ್ಟೆ ಅಭಿವೃದ್ಧಿ, ಓವರ್ ಹೆಡ್‌ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆ

ಭರಮಸಾಗರ: ರೈತರ ಬದುಕು ಹಸನಾಗಬೇಕಾದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಅಗತ್ಯ ಎಂದು ಶಾಸಕ ಡಾ. ಎಂ. ಚಂದ್ರಪ್ಪ ಹೇಳಿದರು.

ಸಮೀಪದ ಅಡವಿ ಗೊಲ್ಲರಹಳ್ಳಿ ಗ್ರಾಮದಲ್ಲಿ 1.30 ಕೋಟಿ ವೆಚ್ಚದಲ್ಲಿ ಗೋಕಟ್ಟೆ ಅಭಿವೃದ್ಧಿ ಹಾಗೂ ಓವರ್ ಹೆಡ್‌ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಿರಿಗೆರೆ ಶ್ರೀಗಳ ಸೂಚನೆಯಂತೆ 665 ಕೋಟಿ ರೂ. ಅನುದಾನ ತಂದು 43 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಲಾಯಿತು. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ. ಕೃಷಿಗೆ ಚೈತನ್ಯ ದೊರೆತಿದೆ ಎಂದರು.

ಕೃಷಿಗೆ ನೀರಿನ ಜತೆಗೆ ಸಮರ್ಪಕ ವಿದ್ಯುತ್ ಕೂಡ ಅತ್ಯಗತ್ಯ. ಇದಕ್ಕಾಗಿ ಅಜ್ಜಮಹಳ್ಳಿ ಬಳಿ 250 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸಲಾಗಿದ್ದು, ರೈತರಿಗೆ ದಿನಕ್ಕೆ 8-10 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು. ಸಣ್ಣ ನೀರಾವರಿ ಇಲಾಖೆ ಎಇಇ ಆನಂದಪ್ಪ, ಇಂಜಿನಿಯರ್ ಶರಣಪ್ಪ, ಗಾಪಂ ಅಭಿವೃದ್ಧಿ ಅಧಿಕಾರಿ ಪ್ರಹ್ಲಾದ್, ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ. ಬಸಣ್ಣ, ನಿವೃತ್ತ ವಲಯ ಅರಣ್ಯಾಧಿಕಾರಿ ರಾಮಮೂರ್ತಿ, ಮುಖಂಡರಾದ ಶೈಲೇಶ್, ಮೋಹನ್ ಸಿರಿಗೆರೆ, ಹನುಮಂತಣ್ಣ ಕೊಳಾಳ್, ರಾಜಣ್ಣ, ಶರಣಪ್ಪ, ಬಸವರಾಜ್ ಬಸವನಶಿವನಕೆರೆ, ಚಿತ್ರಲಿಂಗಪ್ಪ ಯಳಗೋಡು, ಸಣ್ಣನಾಗಪ್ಪ, ರುದ್ರೇಶ್, ತಿಪ್ಪೇಸ್ವಾಮಿ, ನಿಂಗಪ್ಪ, ಶೇಖರಪ್ಪ, ಮುಖಂಡರು ಇದ್ದರು.

ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು

ಬಡ ಕುಟುಂಬಗಳ ಮಕ್ಕಳು ಡೊನೇಷನ್ ಕೊಟ್ಟು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದು ಕಷ್ಟ. ಆದ್ದರಿಂದ ಕ್ಷೇತ್ರದ 13 ಕಡೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ವಾಡಿಸಲಾಗಿದೆ. ಇಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಆಂಗ್ಲ ವಾಧ್ಯಮ ಶಿಕ್ಷಣ ದೊರೆಯಲಿದೆ. ಗ್ರಾಮೀಣ ಮಕ್ಕಳೂ ಸಹ ಉನ್ನತ ಶಿಕ್ಷಣ ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂಬುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ, ಮನೆ, ಕುಡಿಯುವ ನೀರು, ಅಂಗನವಾಡಿ, ಶಾಲಾಕಾಲೇಜು, ಕೆರೆಕಟ್ಟೆ ಹಾಗೂ ಪುಷ್ಕರಣಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಜನರ ಕಷ್ಟಸುಖಗಳಿಗೆ ಸ್ಪಂದಿಸಿ ಕೆಲಸ ವಾಡಿದವರನ್ನು ಗುರುತಿಸಿ ಮತದಾನ ವಾಡಬೇಕು ಎಂದು ಹೇಳಿದರು.