ಚಿತ್ರದುರ್ಗ ಎಸ್‌ಜೆಎಂ ಕಲಾ, ವಿe್ಞÁನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಶೈP್ಷÀಣಿಕ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ. ಶ್ರೀ ಬಸವಪ್ರಭು ಸ್ವಾಮೀಜಿ, ಎಂ. ಶಂಷೀರ್, ಡಾ.ಎಸ್.ಎಚ್.ಪಂಚಾP್ಷÀರಿ, ಪ್ರೊ.ಎಸ್. ಆನಂದ್, ಡಾ. ಹರ್ಷವರ್ಧನ್ ಇತರರು ಇದ್ದರು.
- ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯ
- ಎಸ್‌ಜೆಎಂ ಪದವಿ ಕಾಲೇಜಿನ ವಾರ್ಷಿಕೋತ್ಸವ
- ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಚಿತ್ರದುರ್ಗ: ಉತ್ತಮ ಗುರಿಯೊಂದಿಗೆ ಸಾಗಿದಾಗ ಮುಂದಿನ ಬದುಕಿನ ದಾರಿ ಸುಗಮವಾಗಿರುತ್ತದೆ ಎಂದು ದಾವಣಗೆರೆ ವಿರಕ್ತ ಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ಕಲಾ, ವಿe್ಞÁನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಶೈP್ಷÀಣಿಕ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಭವಿಷ್ಯದೆಡೆ ಯೋಚಿಸಬೇಕು ಎಂದರು.
ಜೀವನಕ್ಕೆ ಮೆಟ್ಟಿಲಾಗಿರುವ ತಂದೆ, ತಾಯಿಯನ್ನು ಯಾವುದೇ ಕಾರಣಕ್ಕೂ ದೂರ ಮಾಡಿಕೊಳ್ಳದೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಈ ಕಾಲೇಜು ವಿದ್ಯಾರ್ಥಿಗಳ ಜೀವನ ರೂಪಿಸುವ ಒಂದು ಕಾರ್ಖಾನೆಯಾಗಿದೆ. ನಾನು ಕೂಡ ಇಲ್ಲಿಯ ಹಳೇ ವಿದ್ಯಾರ್ಥಿ. ಇಲ್ಲಿ ಓದಿರುವುದು ನನ್ನ ಪುಣ್ಯ, ಇಲ್ಲಿ ಓದಿದ ಹಲವು ವಿದ್ಯಾರ್ಥಿಗಳು ದೇಶದಾದ್ಯಂತ ಉನ್ನತ ಹುz್ದೆಯಲ್ಲಿರುವುದು ಹೆಮ್ಮೆಯ ವಿಷಯ ಎಂದರು.
ಉದ್ಯಮಿ ಎಂ. ಶಂಷೀರ್ ಮಾತನಾಡಿ, ಪದವಿ ಪೂರೈಸಿರುವ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಕಾಯದೆ ಉದ್ಯಮಗಳಲ್ಲಿ ತೊಡಗಿಸಿಕೊಂಡರೆ ಯಾರು ನಿರುದ್ಯೋಗಿಗಳಾಗಿ ಉಳಿದುಕೊಳ್ಳುವುದಿಲ್ಲ ಎಂದರು.
ಪ್ರಾಚಾರ್ಯ ಡಾ.ಎಸ್.ಎಚ್. ಪಂಚಾP್ಷÀರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಸ್.ಆನಂದ್, ಡಾ. ಹರ್ಷವರ್ಧನ್ ಮತ್ತಿತರರು ಇದ್ದರು.
ಡಾ.ಎಚ್. ಸತೀಶ್ ನಾಯಕ್ ವಾರ್ಷಿಕ ವರದಿ ವಾಚಿಸಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ವಿದ್ಯಾರ್ಥಿಗಳಿಗೆ ಪ್ರೊ.ಟಿ.ಎನ್. ರಜಪೂತ್ ಬಹುಮಾನ ವಿತರಿಸಿದರು. ಎನ್. ಮಾನಸ ಪ್ರಾರ್ಥಿಸಿದರು.