ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿದರು. ಮಾಜಿ ಶಾಸಕ ಎಸ್.ಕೆ. ಬಸವರಾಜನ್, ರೇಣುಕಪ್ರಸನ್ನ, ಮಹಡಿ ಶಿವಮೂರ್ತಿ, ರುದ್ರೇಶ್ ಐಗಳ್ ಇತರರು ಇದ್ದರು. 
ಚಿತ್ರದುರ್ಗ

ಸಂಘಟನೆ ಸದೃಢವಾದರೆ ವೀರಶೈವ-ಲಿಂಗಾಯತ ಸಮಾಜ ಬಲಿಷ್ಠ

ಪ್ರಮುಖ ಮುಖ್ಯಾಂಶಗಳು

  • ಎಂಎಲ್‌ಸಿ ಕೆ.ಎಸ್.ನವೀನ್ ಅಭಿಮತ
  • ೩ ಕೋಟಿ ರೂ.ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ
  • ರಾಜಕೀಯ ನಾಯಕತ್ವ
ಚಿತ್ರದುರ್ಗ: ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕತ್ವಗಳನ್ನು ಹೊಂದಿರುವ ವೀರಶೈವ-ಲಿಂಗಾಯತ ಸಮಾಜದ ಸಂಘಟನೆ ಇನ್ನಷ್ಟು ಸದೃಢವಾಗಬೇಕಿದೆ ಎಂದು ಎಂಎಲ್‌ಸಿ ಕೆ.ಎಸ್. ನವೀನ್ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ರದುರ್ಗ ಜಿಲ್ಲಾ ಘಟಕ ನಗರದ ತುರುವನೂರು ರಸ್ತೆಯಲ್ಲಿ ಅಂದಾಜು ೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ವೀರಶೈವ ಲಿಂಗಾಯತ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ಸಮಾಜದ ಸಂಘಟನೆ ಬಲಗೊಂಡರೆ ರಾಜ್ಯದಲ್ಲಿ ನಮ್ಮ ಸಮಾಜ ಅತ್ಯಂತ ಬಲಿಷ್ಠವಾಗಲಿದೆ ಎಂದರು.

ಬಹುದಿನಗಳ ಕನಸಾಗಿದ್ದ ಭವನ ನಿರ್ಮಾಣಕ್ಕೆ ಇಂದು ಚಾಲನೆ ದೊರಕಿದೆ. ಮಹಾಸಭಾದ ಹಿಂದಿನ ರಾಷ್ಟಿçÃಯ ಅಧ್ಯಕ್ಷ ದಿ. ಶಾಮನೂರು ಶಿವಶಂಕರಪ್ಪ ಅವರು ಜಿಲ್ಲಾ ಕೇಂದ್ರಗಳಲ್ಲಿ ಭವನಗಳನ್ನು ನಿರ್ಮಿಸುವ ಜಿಲ್ಲಾ ಘಟಕಗಳಿಗೆ ಆರ್ಥಿಕ ನೆರವು ಒದಗಿಸುವ ಕಾರ್ಯ ಮಾಡಿದರು.
ಚಿತ್ರದುರ್ಗದ ಈ ಭವನಕ್ಕೂ ಅನುದಾನ ದೊರಕಿದೆ. ಆರ್ಥಿಕವಾಗಿ ಸಬಲರಾಗಿರುವ ನಮ್ಮ ಸಮಾಜ ಮನಸ್ಸು ಮಾಡಿದರೆ ಸರ್ಕಾರದ ಅನುದಾನಕ್ಕೆ ಕಾಯದೆ ಕಟ್ಟಡ ಸಂಪೂರ್ಣಗೊಳಿಸಬಹುದು ಎಂದರು.
ಗ್ರಾಮೀಣ ಭಾಗದಲ್ಲಿ ನಮ್ಮ ಸಮುದಾಯ ಉತ್ತಮವಾಗಿದೆ. ಅಲ್ಲಿ ಏನಾದರೂ ಕೆಲಸಗಳಾಗಬೇಕಾದರೆ ಅಲ್ಲಿಯ ಜನರೇ ಹಣಕಾಸು ಹೊಂದಿಸಿಕೊಳ್ಳುತ್ತಾರೆ. ಆದರೆ, ನಗರ ಪ್ರದೇಶಗಳಲ್ಲಿ ಈ ರೀತಿಯಾದ ವಾತಾವರಣ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಪ್ರತಿಷ್ಠೆ, ಅಹಂ ತೊರೆದು ಸಮುದಾಯದ ಸಂಘಟನೆ ಬಲಪಡಿಸಬೇಕಿದೆ. ಮಠಗಳು ತ್ರಿವಿಧ ದಾಸೋಹಗಳ ಮೂಲಕ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ನಮ್ಮ ಸಮುದಾಯಕ್ಕೆ ಎಲ್ಲರನ್ನೂ ಜತೆಗೆ ಕರೆದೊಯ್ಯುವ
ಮನೋಭಾವವಿದೆ.

ವೈಯುಕ್ತಿಕ ನೆಲೆಯಲ್ಲಿ ಸಾಕಷ್ಟು ಖರ್ಚು ಮಾಡುವ ನಾವು, ಸಮಾಜದ ಕೆಲಸಗಳಿಗೆ ಹಿಂದೇಟು ಹಾಕುತ್ತೇವೆ. ಈ ನೂತನ ಭವನಕ್ಕೆ ಶಾಸಕರ ನಿಽಯಿಂದ ೧೦ ಲಕ್ಷ ರೂ., ವೈಯುತ್ತಿಕವಾಗಿ ೫ ಲಕ್ಷ ರೂ. ಕೊಡುವುದಾಗಿ ನವೀನ್ ಹೇಳಿದರು.
ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಒಳ ಪಂಗಡಗಳನ್ನು ತೊರೆದು ಒಂದಾದರೆ ನಮ್ಮ ಸಮುದಾಯದ ಸಂಘ ಟನಾ ಶಕ್ತಿ ಹೆಚ್ಚಾಗಲಿದೆ. ಮಹಾಸಭಾ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಭವನಗಳ ನಿರ್ಮಾಣಕ್ಕೆ ಅರ್ಥಿಕ ನೆರವು ನೀಡುತ್ತಿದೆ.
ಕಟ್ಟಡ ಶೀಘ್ರ ಪೂರ್ಣವಾದರೆ ಸಮುದಾಯದವರಿಗೆ ಅನುಕೂಲವಾಗಲಿದೆ. ಸಮಾಜ ಎಂದರೆ ಮನೆ ಇದ್ದ ಹಾಗೆ. ಯಾರು ಯಾ ವಾಗಬೇಕಾದರೂ ಪಕ್ಷಗಳನ್ನು ಬದಲಾಯಿಸಬಹುದು. ಆದರೆ, ಮನೆ ಬದಲಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸಮುದಾಯದ ಸಂಘಟನೆಗೆ ಒತ್ತು ನೀಡಬೇಕಿದೆ ಎಂದರು.
ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಮಾತನಾಡಿ, ನಗರದ ಕಮ್ಮರೆಡ್ಡಿ ಕಲ್ಯಾಣ ಮಂಟಪದ ಈ ೬೦/೪೦ ನಿವೇಶನ ವನ್ನು ಖರೀದಿಸಲಾಗಿದೆ. ಕಟ್ಟಡಕ್ಕೆ ದಾನಿಗಳು ಧನ ಸಹಾಯ ಮಾಡಿದ್ದಾರೆ. ಕೆಲವರು ವಾಗ್ದಾನ. ಸರ್ಕಾರದ ಅನುದಾನಕ್ಕೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ರೇಣುಕಪ್ರಸನ್ನ, ಭವನ ನಿರ್ಮಾಣ ಸಮಿತಿ ಅಧ್ಯಕ್ಷ ರುದ್ರೇಶ್‌ ಐಗಳ್, ಜಾಲಿಕಟ್ಟೆ ರುದ್ರಪ್ಪ, ಮೈಲನಹಳ್ಳಿ ದಿನೇಶ್, ಆನಂದ್, ಎಸ್. ತಿಪ್ಪೇಸ್ವಾಮಿ, ಸಿದ್ದಪ್ಪ ಪಿಳ್ಳೆಕೇರನಹಳ್ಳಿ, ನಾಗರಾಜ್‌ ಸಂಗA, ಪಂಚಾಕ್ಷರಯ್ಯ, ಮಲ್ಲಿಕಾರ್ಜನಯ್ಯ, ಜಯಕುಮಾರ್ ಮತ್ತಿತರ ಮಹಾಸಭಾದ ಪದಾಽಕಾರಿಗಳು, ಸಮಾಜದ ಗಣ್ಯರು ಇದ್ದರು. ರೀನಾವೀರಭದ್ರಪ್ಪ, ಮಾಲಾ ಬಸವರಾಜು ಪ್ರಾರ್ಥಿಸಿದರು. ಶಶಿಧರಬಾಬು ಸ್ವಾಗತಿಸಿ, ಜ್ಞಾನಮೂರ್ತಿ ವಂದಿಸಿದರು.