ಚಿತ್ರದುರ್ಗದಲ್ಲಿ ಸೋಮವಾರ ಬೇಲ್ ಚಿತ್ರದ ಕುರಿತು ಶಿವರಾಜ್‌ಕುಮಾರ್ ಮಾತನಾಡಿದರು. 
ಚಿತ್ರದುರ್ಗ

ಸಿನಿಮಾ ಚೆನ್ನಾಗಿದ್ದರೆ ಜನಸ್ಪಂದನೆ ಖಚಿತ

ನಟ ಡಾ.ಶಿವರಾಜ್‌ಕುಮಾರ್

ಚಿತ್ರದುರ್ಗ: ನೈಜತೆಗೆ ತಕ್ಕಂತೆ ಸಿನಿಮಾ ಚೆನ್ನಾಗಿದ್ದರೆ ಜನರು ಖಂಡಿತ ಸ್ವೀಕರಿಸುತ್ತಾರೆ ಎಂದು ನಟ ಡಾ.ಶಿವರಾಜ್‌ಕುಮಾರ್ ಹೇಳಿದರು.

ಬೇಲï ಚಿತ್ರಕ್ಕೆ ರಾಜ್ಯದೆ¯್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗಲು ಬಂದಿದ್ದೇನೆ ಎಂದು ನಗರದ ಅಹೋಬಲ ಟಿವಿಎಸ್ ಶೋ ರೂಂನಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ದೊಡ್ಡ ಬಜೆಟ್ ಅಥವಾ ಚಿಕ್ಕ ಬಜೆಟ್ ಸಿನಿಮಾ ಇರಲಿ, ಕಥೆ ಜನರಿಗೆ ಇಷ್ಟವಾಗುವುದು ಮುಖ್ಯ. ಬರೀ ಹಣ ಸುರಿದ ಮಾತ್ರಕ್ಕೆ ಸಿನಿಮಾ ಯಶಸ್ವಿಯಾಗುತ್ತದೆ ಎಂಬುದು ಭ್ರಮೆ. ಕನ್ನಡ ಸಿನಿಮಾಗಳು ಓಡುತ್ತಿಲ್ಲವೆಂಬ ಮಾತಿನ ಮಧ್ಯೆಯೂ ಇತ್ತೀಚೆಗೆ ಪ್ರೇಮದ ಊರಲ್ಲಿ, ಸಿಟಿ ಲೈಟ್ಸ್, ವಿಡಿಯೋ ಹಾಗೂ ಬೇಲ್ ಸಿನಿಮಾಗಳಿಗೆ ಉತ್ತಮ ಸ್ಪಂದನೆ ದೊರೆತಿದೆ. ಮಲ್ಟಿಪ್ಲೆಕ್ಸ್ಗಳಲ್ಲೂ ಹವಾ ಸೃಷ್ಟಿಯಾಗಿದೆ ಎಂದು ಹೇಳಿದರು.

ಬೇಲï-೨ ಚಿತ್ರದ ಮುಂದಿನ ಭಾಗಕ್ಕೆ ಮುಂದಿನ ವರ್ಷ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.

ನಿರ್ದೇಶಕ ಪವನ್ ಒಡೆಯರ್, ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್, ಅಹೋಬಲ ಟಿವಿಎಸ್ ಶೋ ರೂಂ ಮಾಲೀಕ ಪಿ.ವಿ. ಅರುಣ್‌ಕುಮಾರ್, ಟಿ. ದರ್ಶನ್ ಹಾಗೂ ಚಿತ್ರ ತಂಡದವರು ಇದ್ದರು.

ಇದಕ್ಕೂ ಮೊದಲು ಬೇಲï ಚಿತ್ರ ಪ್ರದರ್ಶನಗೊಳ್ಳುತ್ತಿರುವ ಬಸವೇಶ್ವರ ಚಿತ್ರಮಂದಿರಕ್ಕೆ ಚಿತ್ರತಂಡ ಭೇಟಿ ನೀಡಿತು.