ಚಿತ್ರದುರ್ಗ: ರೈತರು ನೆಮ್ಮದಿಯಿಂದ ಇದ್ದರೆ ನಾಡು ಸಮೃದ್ಧಿಯಾಗಿರಲು ಸಾಧ್ಯ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು.
ತಾಲೂಕಿನ ಜೋಡಿಚಿಕ್ಕೇನಹಳ್ಳಿ ಮತ್ತು ದೇವಪುರದಹಟ್ಟಿ ಗ್ರಾಮಗಳ ಹಳ್ಳಗಳಿಗೆ ೪.೫೨ ಕೋಟಿ ರೂ. ವೆಚ್ಚದಲ್ಲಿ ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೃಷಿಗೆ ನೀರಿನ ಲಭ್ಯತೆ ಹೆಚ್ಚಿಸಲು ಅಂತರ್ಜಲ ಮಟ್ಟ ಸುಧಾರಿಸಬೇಕು. ಇದಕ್ಕಾಗಿ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಮಳೆನೀರು ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಹಳ್ಳಕೊಳ್ಳಗಳ ಮೂಲಕ ವ್ಯರ್ಥವಾಗುವ ನೀರನ್ನು ಚೆಕ್‌ಡ್ಯಾಂಗಳಲ್ಲಿ ಸಂಗ್ರಹಿಸುವುದರಿAದ ಅಂತರ್ಜಲ ಮಟ್ಟ ಸುಧಾರಿಸಲಿದೆ. ಕಾಮಗಾರಿ ಸಂಪೂರ್ಣ ಗುಣಮಟ್ಟದಿಂದ ಕೂಡಿರಬೇಕು. ಕಳಪೆ ಕಾಮಗಾರಿ ಆದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಸಣ್ಣ ನೀರಾವರಿ ಇಲಾಖೆ ಎಇಇ ಭೀಮರಾಜ್ ಮಾತನಾಡಿ, ಜೋಡಿಚಿಕ್ಕೇನಹಳ್ಳಿ ಹಳ್ಳಕ್ಕೆ ೨.೪೦ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಮ್, ದೇವಪುರದ ಹಟ್ಟಿ ಗ್ರಾಮದ ಹಳ್ಳಕ್ಕೆ ೨.೧೨ ಕೋಟಿ ರೂ. ವೆಚ್ಚದಲ್ಲಿ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಬೀಬೀ -Áತಿಮಾ, ತಾಪಂ ಇಒ ಜಯಸಿಂಹ, ಸಣ್ಣ ನೀರಾವರಿ ಇಲಾಖೆ ಎಇ ಸುಹಿಲ್‌ರಹೀಮ್, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್, ಮುಖಂಡರಾದ ಹನೀಸ್, ಸೈಯದ್ ಖುದ್ದೂಸ್, ವಿಜಯ್‌ಕುಮಾರ್, ನಾಗರಾಜ್, ಮಂಜುನಾಥ್, ತಿಪ್ಪೇಶ್, ರಂಗಸ್ವಾಮಿ ಇತರರು ಇದ್ದರು.