ಚಿಕ್ಕಜಾಜೂರು ಸಮೀಪದ ಮುತ್ತುಗದೂರಿನಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಎಂ. ಚಂದ್ರಪ್ಪ ಶುಕ್ರವಾರ ಭೂಮಿಪೂಜೆ ಸಲ್ಲಿಸಿದರು. ಎಂ.ಬಿ. ಸಿದ್ದೇಶ್, ಎಂ.ಕೆ. ರುದ್ರಣ್ಣ, ದೇವರಾಜ್ ಇತರರಿದ್ದರು. Service 
ಚಿತ್ರದುರ್ಗ

ಅಗತ್ಯ ಸೌಲಭ್ಯ ಕಲ್ಪಿಸಿ ಕ್ಷೇತ್ರದ ಜನರ ಋಣ ತೀರಿಸುವೆ Service

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಎಂ. ಚಂದ್ರಪ್ಪ ಹೇಳಿಕೆ
ಚಿಕ್ಕಜಾಜೂರು: ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಪೂರೈಸುವುವ ಮೂಲಕ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು. Service
ಸಮೀಪದ ಮುತ್ತುಗದೂರಿನಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಳೆ ನೀರು ವ್ಯರ್ಥವಾಗುವುದನ್ನು ತಡೆಯಲು 450 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಇದರಿಂದ ಬೋರ್‌ವೆಲ್‌ಗಳಿಗೆ ಅನುಕೂಲವಾಗುತ್ತದೆ. ತಾಲೂಕಿನ ಹಿರೇಕಂದವಾಡಿ, ಹಿರೇಎಮ್ಮಿಗನೂರು, ಮಲ್ಲಾಡಿಹಳ್ಳಿ, ಹನುಮಲಿ, ತುಪ್ಪದಹಳ್ಳಿ, ಎನ್.ಜಿ.ಹಳ್ಳಿ, ತಾಳ್ಯ, ಟಿ.ನುಲೇನೂರು ಮೊದಲಾದ 17 ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ ಎಂದು ತಿಳಿಸಿದರು.
ಚಿಕ್ಕಜಾಜೂರಿನ ಕೋಟೆಹಾಳ್ ಬಳಿ 500 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಜೋಗ್‌ಫಾಲ್ಸ್‌ನಿಂದ ಇಲ್ಲಿಗೆ ನೇರವಾಗಿ ವಿದ್ಯುತ್ ಪೂರೈಕೆಯಾಗಲಿದೆ. ಇಲ್ಲಿಂದ ಉಳಿದ ಎಲ್ಲ ಸಬ್ ಸ್ಟೇಷನ್‌ಗಳಿಗೆ ಸರಬರಾಜಾಗಲಿದೆ. ಇನ್ನು ಎರಡು ವರ್ಷಗಳಲ್ಲಿ ಎಲ್ಲಾ ವಿದ್ಯುತ್ ಪವರ್ ಸ್ಟೇಷನ್‌ಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ರಸ್ತೆ, ನೀರು, ವಿದ್ಯುತ್, ಆಸ್ಪತ್ರೆ, ಶಾಲಾ-ಕಾಲೇಜುಗಳ ನಿರ್ಮಾಣ ಮಾಡಿದ್ದೇನೆ. ನಾನು ವಿರೋಧ ಪಕ್ಷದಲ್ಲಿದ್ದುಕೊಂಡು ಅನುದಾನ ತರುವ ಸಾಮರ್ಥ್ಯ ಇಟ್ಟುಕೊಂಡಿದ್ದೇನೆ. ಅಧಿಕಾರ ಬಹಳ ದಿನ ಇರುತ್ತೆ ಅಂದುಕೊಂಡಿಲ್ಲ. ಇರುವಷ್ಟು ದಿನ ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವುದು ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಹೊಳಲ್ಕೆರೆ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಎಂ.ಬಿ. ಸಿದ್ದೇಶ್, ಎಂ.ಕೆ. ರುದ್ರಣ್ಣ, ದೇವರಾಜ್, ಓಂಕಾರಣ್ಣ, ಗ್ರಾಪಂ ಮಾಜಿ ಸದಸ್ಯರಾದ ಪ್ರಭು, ಶಿವು, ಪ್ರಕಾಶ್, ಮಂಜುನಾಯ್ಕ, ಓಂಕಾರಸ್ವಾಮಿ, ರಮೇಶಣ್ಣ, ಜಗದೀಶ್ ಇತರರಿದ್ದರು.