ಹೊಸದುರ್ಗದ ಜಯದೇವ ಸಭಾಂಗಣದಲ್ಲಿ ಎಸ್. ನಿಜಲಿಂಗಪ್ಪ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸಮಾನ ಮನಸ್ಕ ವೇದಿಕೆಯಿಂದ ಆಯೋಜಿಸಿದ್ದ ಎಸ್. ಜಾನಕಿ ಅವರ ನುಡಿನಮನ ಕಾರ್ಯಕ್ರಮವನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಎಚ್. ಬಿಲ್ಲಪ್ಪ ಉದ್ಘಾಟಿಸಿದರು. ಕೆ.ಎಸ್. ಕಲ್ಮಠ, ಎಂ.ಆರ್. ಶಾಂತಪ್ಪ, ಲೋಕೇಶ್ವರ ಇತರರಿದ್ದರು. Tribute 
ಚಿತ್ರದುರ್ಗ

ಸಾವಿನ ನಂತರವೂ ಉಳಿಯುತ್ತವೆ ಮಾನವ ಮಾಡಿದ ಸಾಧನೆಗಳು Tribute

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಸ್. ಕಲ್ಮಠ ಹೇಳಿಕೆ
  • ಖ್ಯಾತ ಗಾಯಕಿ ಎಸ್. ಜಾನಕಿ ಅವರಿಗೆ ನುಡಿನಮನ
ಹೊಸದುರ್ಗ: ಮನುಷ್ಯ ಜೀವಿತಾವಧಿಯಲ್ಲಿ ಮಾಡುವ ಸಾಧನೆಗಳು ಸಾವಿನ ನಂತರವೂ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ ಎಂದು ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಸ್. ಕಲ್ಮಠ ಹೇಳಿದರು. Tribute
ಪಟ್ಟಣದ ಜಯದೇವ ಸಭಾಂಗಣದಲ್ಲಿ ಭಾನುವಾರ ಎಸ್. ನಿಜಲಿಂಗಪ್ಪ ಶಿಕ್ಷಣ ಮತ್ತು  ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸತತ ಪರಿಶ್ರಮ, ಶ್ರದ್ಧೆ ಉತ್ತಮ ಸಾಧಕರನ್ನು ರೂಪಿಸುತ್ತದೆ ಎನ್ನುವುದಕ್ಕೆ ಸ್ವರ ಸಾಮ್ರಾಜ್ಞೆ ಎಸ್. ಜಾನಕಿ ಉದಾಹರಣೆ. ಸಂಗೀತ ಜ್ಞಾನವಿಲ್ಲದಿದ್ದರೂ ಮಧುರವಾದ ಕಂಠ, ಸ್ವಂತ ಪರಿಶ್ರಮದ ಮೂಲಕ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುವ ಜತೆಗೆ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದರು. 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಜನಮನ್ನಣೆ ಗಳಿಸಿದ್ದರೂ ಸರಳ ಜೀವನ ನಡೆಸಿದ ಇಂಥವರನ್ನು ಯುವಪೀಳಿಗೆ ಅನುಸರಿಸಬೇಕು ಎಂದರು. 
ಎಸ್. ಜಾನಕಿಯವರು ಮರೆಯಾದರೂ ಅವರ ಹಾಡುಗಳ ಮೂಲಕ ಜೀವಂತವಾಗಿದ್ದಾರೆ. ಸಮಾನ ಮನಸ್ಕ ಮನಸ್ಸುಗಳು ಕಾರ್ಯಕ್ರಮ ಆಯೋಜಿಸಿರುವುದು ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.
ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಎಚ್. ಬಿಲ್ಲಪ್ಪ ಮಾತನಾಡಿ, ಎಸ್. ಜಾನಕಿಯವರು ಸಂಗೀತದಿಂದಲೇ ಗುರುತಿಸಿಕೊಂಡಿದ್ದರು. ಅವರು ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದ್ದಾರೆ. ಸಾಧಕರನ್ನು ಸ್ಮರಿಸುವ ಜತೆಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ ಎಂದರು. ಸಾಸ್ವೆಹಳ್ಳಿ ರಂಗ ಸಾಂಸ್ಕೃತಿಕ ವೇದಿಕೆಯ ರಂಗಕರ್ಮಿ ವೈ.ಡಿ. ಬಾದಾಮಿ ಅವರು ಪತ್ರಕರ್ತ ರವಿ ಬೆಳೆಗೆರೆ ಹಿನ್ನಲೆ ಧ್ವನಿಯ ಓ ಮನಸೇ ಎನ್ನುವ ಏಕವ್ಯಕ್ತಿ ರಂಗಪ್ರದರ್ಶನ ನೀಡಿದರು.ಶಿಕ್ಷಣ ಸಂಸ್ಥೆ ಖಜಾಂಚಿ ಮಲ್ಲಿಕಾರ್ಜುನಪ್ಪ, ಕಸಾಪ ತಾಲೂಕು ಅಧ್ಯಕ್ಷ ಎಂ.ಆರ್. ಶಾಂತಪ್ಪ, ಮಾಜಿ ಅಧ್ಯಕ್ಷ ಪಿ.ಎಲ್. ಲೋಕೇಶ್ವರ, ನಿಸಾರ್ ಅಹಮದ್, ಬಿ.ಆರ್. ಶಶಿಧರ್ ಇತರರು ಇದ್ದರು.