ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ನೆಟ್‌ಬಾಲ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಹೊನ್ನಾಳಿಯ ಎಸ್‌ಎಂಎಸ್ ಕಾಲೇಜಿನ ಪುರುಷರ ತಂಡ. ಡಾ.ಜೆ.ಕರಿಯಪ್ಪ ಮಾಳಿಗೆ, ಪಿ.ವಿ. ಅರುಣ್‌ಕುಮಾರ್, ಡಾ.ಡಿ.ಆರ್. ಪ್ರಸನ್ನಕುಮಾರ್ ಇತರರು ಇದ್ದರು. 
ಚಿತ್ರದುರ್ಗ

ಹೊನ್ನಾಳಿ ಎಸ್‌ಎಂಎಸ್ ಪ್ರಥಮ ದರ್ಜೆ ಕಾಲೇಜು ಪ್ರಥಮ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆ ವಿವಿ ಅಂತರ ಕಾಲೇಜು ನೆಟ್‌ಬಾಲ್ ಪಂದ್ಯಾವಳಿ
  • ದಾವಣಗೆರೆ ಜಿಎಂಎಸ್ ಆಕಾಡೆಮಿ ದ್ವೀತಿಯ
  • ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ತÊತೀಯ
ಚಿತ್ರದುರ್ಗ: ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ನೆಟ್‌ಬಾಲ್ ಪಂದ್ಯಾ ವಳಿ ಮತ್ತು ಆಯ್ಕೆಯಲ್ಲಿ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಶ್ರೀ ಮೃತ್ಯುಂಜಯ ಶಿವಾಚಾರ್ಯ(ಎಸ್‌ಎಂಎಸ್)ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದೆ.
ಪುರಷರ ವಿಭಾಗದಲ್ಲಿ ದಾವಣಗೆರೆ ಜಿಎಂಎಸ್ ಆಕಾಡೆಮಿ ದ್ವೀತಿಯ, ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ತÊತೀಯ ಸ್ಥಾನ ಹಾಗೂ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕನೇ ಸ್ಥಾನ ಪಡೆದಿದೆ. ಮಹಿಳಾ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ದ್ವಿತೀಯ, ದಾವಣಗೆರೆ ಜಿಎಂಎಸ್ ಅಕಾಡೆಮಿ ತÊತೀಯ ಹಾಗೂ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕನೇ ಸ್ಥಾನ ಪಡೆದಿದೆ.
ಪಂದ್ಯಾವಳಿ ವಿಜೇತ ತಂಡಗಳಿಗೆ ಚಿತ್ರದುರ್ಗ ಅಹೋಬಲ ಟಿವಿಎಸ್ ಶೋರೂಮ್ ಮಾಲೀಕ ಪಿ.ವಿ. ಅರುಣ್‌ಕುಮಾರ್ ಬಹು ಮಾನ ವಿತರಿಸಿದರು. ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ.
ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಡಾ.ಜೆ. ಕರಿಯಪ್ಪ ಮಾಳಿಗೆ, ಕಾಲೇಜು ಅಧ್ಯಾಪಕರ ಸಂಘದ ಜಂಟಿ ಕಾರ್ಯದರ್ಶಿ ಡಾ. ಪಿ.ಎಸ್. ಮೇಘನಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಡಿ.ಆರ್. ಪ್ರಸನ್ನಕುಮಾರ್, ಅರ್ಥಶಾಸ್ತç ಪ್ರಾಧ್ಯಾಪಕ ಭಾನುಪ್ರಕಾಶ್, ಪತ್ರಾಂಕಿತ ವ್ಯವಸ್ಥಾಪಕ ಮಾರ್ಟಿನ್ ಸ್ಯಾಮುಯೆಲ್ ಡಬ್ಲಯೂ, ಗ್ರಂಥಾಲಯಾಽಕಾರಿ ಡಾ. ತಿಪ್ಪೇಸ್ವಾಮಿ ಇತರರು ಇದ್ದರು.