ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳನ್ನು ಚಿತ್ರದುರ್ಗ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಅವರು ಮಂಗವಾರ ಗೌರವಿಸಿದರು. ಪ್ರಾಚಾರ್ಯ ಶೇಖರ್‌ರೆಡ್ಡಿ ಇದ್ದಾರೆ.
- ಜೆಇಇ ಮೇನ್ಸ್ ಮೊದಲ ಸ್ಲಾಟ್ ಪರೀಕ್ಷೆಯಲ್ಲಿ ಜಿಲ್ಲೆಗೆ ಅಗ್ರಸ್ಥಾನ
- ಶೇ.೯೯.೫೪ ಅಂಕಗಳೊAದಿಗೆ ಎಸ್.ಜಿ. ಮಿಥುನ್ ಹೊಸ ದಾಖಲೆ
- ಜೆಇಇ ಮೇನ್ಸ್ ಪರೀಕ್ಷೆ
ಚಿತ್ರದುರ್ಗ: ಕಳೆದ ಜನವರಿಯಲ್ಲಿ ನಡೆದಿದ್ದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ನಗರದ ಎಸ್‌ಆರ್‌ಎಸ್ ಪಿಯು ಕಾಲೇಜು ಐತಿಹಾಸಿಕ ಫಲಿತಾಂಶ ದಾಖಸಿದೆ.
ಜೆಇಇ ಮೇನ್ಸ್ ಮೊದಲ ಸ್ಲಾಟ್ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಜಿಲ್ಲೆಗೆ ಅಗ್ರಸ್ಥಾ ನ ಪಡೆದಿದ್ದಾರೆ.
ಎಸ್.ಜಿ. ಮಿಥುನ್ ಶೇ.೯೯.೫೪ ಅಂಕಗಳೊAದಿಗೆ ಹೊಸ ದಾಖಲೆ ನಿರ್ಮಿಸಿದ್ದಾನೆ. ಕೆ.ಎಂ. ಸುದರ್ಶನ್-ಶೇ. ೯೮.೬೧, ಬಿ. ಕೀರ್ತನ್- ಶೇ.೯೮.೪೩ ಅಂಕಗಳೊAದಿಗೆ ದ್ವಿತೀಯ ಹಾಗೂ ತÊತೀಯ ಸ್ಥಾನ ಪಡೆದಿದ್ದಾರೆ.
ಕೆ.ಎಸ್. ಪ್ರಮೋದ್‌ಹೆಬ್ಬಾಳ್-ಶೇ.೯೮.೩೭, ಅಂಜಿನಿಕುಮಾರ್-ಶೇ.೯೭.೦೮ ಸೇರಿ ಕಾಲೇಜಿನ ೪೦ ವಿದ್ಯಾರ್ಥಿಗಳು ಶೇ.೯೦ಕ್ಕೂ ಅಽಕ ಅಂಕಗಳೊAದಿಗೆ ಹಾಗೂ ೫೮ ವಿದ್ಯಾರ್ಥಿಗಳಲ್ಲಿ ೫೩ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಗೆ ಅರ್ಹತೆ ಪಡೆಯುವ ಮೂಲಕ ಐಐಟಿ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಸ್ಥಾಪಕ ಕಾರ್ಯದರ್ಶಿ ಸುಜತಾ ಲಿಂಗಾರೆಡ್ಡಿ ಸೇರಿ ಆಡಳಿತ ಮಂಡಳಿ ಪ್ರಮುಖರು, ಬೋಧಕರು, ಬೋಧಕೇರ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.