ಕೆ.ಎಂ.ಸುದರ್ಶನ್ ,ಸಮ್ರೀನ್‌ಬಾನು ,ವೈ.ಎಂ.ಮೇಘನಾ
- ಕೆ.ಎಂ. ಸುದರ್ಶನ್ ರಾಜ್ಯಕ್ಕೆ ೧೨ನೇ ಸ್ಥಾನ
- ರಾಜ್ಯಮಟ್ಟದಲ್ಲಿ ದಾಖಲೆ
- srs
ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೆಸಿಇಟಿ -Àಲಿತಾಂಶದಲ್ಲಿ ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆದು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಕೆ.ಎಂ. ಸುದರ್ಶನ್ ೧೨ನೇ ರ‍್ಯಾಂಕ್, ಸಮ್ರೀನ್ ಬಾನು ೮೦, ವೈ.ಎಂ. ಮೇಘನಾ ೧೪೨, ಬಿ.ಟಿ. ಕೀರ್ತನ್ ೪೭೦, ಪ್ರಮೋದ್‌ಹೆಬ್ಬಾಳ್ ೬೮೪, ಅಂಜನ್‌ಕುಮಾರ್ ೭೨೩, ಬಿ.ಎನ್. ಕುಸುಮಾ ೭೪೮, ಎಸ್.ಜಿ. ಮಿಥುನ್ ೧೧೩೪, ನಮಿತಾರಾಜ್ ೧೨೦೬, ಕೆ. ಗಂಗೋತ್ರಿ ೧೨೮೦, ಡಿ. ನೇತ್ರಾ ೧೩೯೪, ಎನ್.ಟಿ. ನಾಗವೇಣಿ ೧೫೬೦ ಹಾಗೂ ಪಿ.ಎನ್.ಅಂಕಿತಾ ೧೮೭೨ನೇ ರ‍್ಯಾಂಕ್ ಪಡೆದಿದ್ದಾರೆ.
ಇಂಜಿನಿಯರಿAಗ್, ಪಶು ವೈದ್ಯಕೀಯ, ಬಿಎಸ್‌ಸಿ ಅಗ್ರಿ ಹೀಗೆ ವಿವಿಧ ವಿಭಾಗಗಳಲ್ಲಿ ಕಾಲೇಜಿನ ಒಟ್ಟು ೩೮ ವಿದ್ಯಾರ್ಥಿಗಳು ೫೦೦೦ ರ ಒಳಗಿನ ರ‍್ಯಾಂಕ್‌ಗಳನ್ನು ಪಡೆದು ಸರ್ಕಾರಿ ಕೋಟದಡಿ ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯಲು ಅರ್ಹತೆಗಳಿಸಿದ್ದಾರೆ.
ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಈ ಸಾಧನೆಗೆ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಆಡಳಿತ ಮಂಡಳಿ ಪ್ರಮುಖರು, ಪ್ರಾಚಾರ್ಯರು, ಉಪ ಪ್ರಾಚಾರ್ಯರು, ಬೋಧಕ ಹಾಗೂ ಬೋಧ ಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.