ಹಿರಿಯೂರಿನ ಶತವಾನದ ಸರ್ಕಾರಿ ಶಾಲೆ. School
ಚಿತ್ರದುರ್ಗ

ಹಿರಿಯೂರು ಶತವಾನದ ಶಾಲೆಗೆ ಬೇಕಿದೆ ಕಾಯಕಲ್ಪ

1893ರಲ್ಲಿ ಸ್ಥಾಪನೆಯಾದ ಶಾಲೆ, ಶಿಥಿಲಾವಸ್ಥೆಯಲ್ಲಿ ಕೊಠಡಿಗಳು

ಖಂಡೇನಹಳ್ಳಿ ಬಸವರಾಜ್, ಹಿರಿಯೂರು

ನಗರದ ಹೃದಯ ಭಾಗದಲ್ಲಿರುವ ಶತವಾನದ ಇತಿಹಾಸ ಹೊಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಅವನತಿಯತ್ತ ಸಾಗಿದೆ.

1893ರಲ್ಲಿ ಸ್ಥಾಪನೆಯಾದ ಈ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಿದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದ ಶಾಲೆ ಇಂದು ಅವನತಿ ಅಂಚಿನಲ್ಲಿದ್ದು, ಶತವಾನೋತ್ಸವ ಪೂರೈಸಿರುವ ಶಾಲೆಯು ನೂರಾರು ಸಮಸ್ಯೆ ಎದುರಿಸುತ್ತಿದೆ. ಶಾಲೆ ಬಗ್ಗೆ ಶಿಕ್ಷಣ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿರುವುದು ಬೇಸರ ತಂದಿದೆ. ಶಾಲೆ ಉಳಿವಿಗೆ ಸರ್ಕಾರ, ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸ್ಪಂದನೆ ಶೂನ್ಯ.

ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ 4 ಎಕರೆಯಲ್ಲಿರುವ ಈ ಶಾಲೆಯಲ್ಲಿ 14 ಕೊಠಡಿಗಳಿವೆ. 1-7ನೇ ತರಗತಿವರೆಗೆ ಒಟ್ಟು 323 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಮುಖ್ಯದ್ವಾರದ ಪಕ್ಕದಲ್ಲಿಯೇ ಸಾರ್ವಜನಿಕರು ಮೂತ್ರ ವಿಸರ್ಜಿಸುತ್ತಾರೆ. ರಾತ್ರಿ ಸಮಯದಲ್ಲಿ ಕುಡುಕರ ಹಾವಳಿ, ಇದರಿಂದ ಮಕ್ಕಳಿಗಷ್ಟೇ ಅಲ್ಲ, ಪಾಲಕರಿಗೂ ಕಿರಿಕಿರಿ ಎನಿಸಿದೆ.

ಹೊಸದಾಗಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ, 323 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಗುಣಮಟ್ಟದ ಶಿಕ್ಷಣ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಇರುವುದರಿಂದ ಶಾಲೆಗೆ ಸೇರಲು ಪೈಪೋಟಿ ಇದೆ. ಆದರೆ, ಸರ್ಕಾರ ಇಲ್ಲಿನ ಶಾಲೆಗೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ. 1-7ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಇದ್ದು, 14 ಶಿಕ್ಷಕರಿದ್ದಾರೆ. ಶಾಲೆಯ ಆವರಣದಲ್ಲಿ ಗುರು ಭವನ, ಬಿಇಒ ಕಚೇರಿ, ಸರ್ಕಾರಿ ಬಾಲಕಿಯರ ಪಿಯು ಕಾಲೇಜ್, ಇಂದಿರಾ ಕ್ಯಾಂಟಿನ್ ಸಹ ಇದೆ.

ಬೇಕಿರುವ ಸೌಲಭ್ಯ

ಮಕ್ಕಳ ಸುರಕ್ಷತೆ, ಸುಸಜ್ಜಿತ ಶೌಚಗೃಹ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಶುದ್ಧ ಕುಡಿವ ನೀರಿನ ವ್ಯವಸ್ಥೆ, ಹೊಸ ಕಟ್ಟಡ ನಿರ್ವಾಣಕ್ಕೆ ವಿಶೇಷ ಅನುದಾನ. ಆಧುನಿಕ ಕಲಿಕೋಪಕರಣಗಳು, ಗಣಕಯಂತ್ರ, ಶಾಲೆಯ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು. ಒಂದರಿಂದ 7ನೇ ತರಗತಿವರೆಗಿರುವ ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಮಕ್ಕಳ ಹಾಜರಾತಿ ಹೆಚ್ಚಿದೆ. ಆಂಗ್ಲ ವಾಧ್ಯಮ ಶಾಲೆಗಳ ಪೈಪೋಟಿ ಮತ್ತು ಸರ್ಕಾರಿ ಶಾಲೆಗಳ ಮೇಲೆ ಜನರ ನಿರುತ್ಸಾಹ ಮೂಲ ಸೌಕರ್ಯದ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದರೂ ಇಲ್ಲಿನ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿರುವುದು ಇತರ ಶಾಲೆಗಳಿಗೆ ವಾದರಿಯಾಗಿದೆ.

ವಿಷ ಜಂತುಗಳ ಭಯ

ಶಾಲೆಯ ಛಾವಣೆ, ಕಿಟಿಕಿ, ಬಾಗಿಲುಗಳು ಮುರಿದು ಶೋಚನೀಯ ಸ್ಥಿತಿಯಲ್ಲಿದೆ. ಹೆಂಚಿನ ಛಾವಣಿ ಶಿಥಿಲಗೊಂಡಿದ್ದು, ಹಾವುಗಳು ಎಲ್ಲೆಂದರಲ್ಲಿ ನೇತಾಡುತ್ತವೆ. ಶಿಕ್ಷಕರು, ಮಕ್ಕಳು ಜೀವ ಭಯದಲ್ಲಿ ಕಾಲದೂಡುವಂತಾಗಿದೆ. ಶಾಲೆಯ ಈ ಸ್ಥಿತಿಗೆ ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿದಿಗಳ ನಿರ್ಲಕ್ಷ್ಯವೇ ಕಾರಣ. ಶಾಲೆಯ ಸಂಕಷ್ಟದ ಬಗ್ಗೆ ಶಾಲಾ ಅಭಿವೃದ್ಧಿ ಸಮಿತಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ.

ಪ್ರಾಧಿಕಾರದ ಶಿಾರಸ್ಸು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶತವಾನ ಕಂಡ ಶಾಲೆಗಳ ಉಳಿವು, ಬಲವರ್ಧನೆಗೆ 31 ಅಂಶಗಳ ಶಿಫಾರಸು ವಾಡಿದೆ. ಶತವಾನ ಪೂರೈಸಿದ ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಸರ್ಕಾರ ಘೋಷಿಸಬೇಕು, ಈ ಶಾಲೆಗಳು ರಾಜ್ಯದ ಇತಿಹಾಸದ ಆಸ್ಮಿತೆಯ ಭಾಗವಾಗಬೇಕು ಎಂದು ವರದಿ ನೀಡಿದೆ.

ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿ, ಕಟ್ಟಡ ದುರಸ್ತಿಗೆ ಅಗತ್ಯ ಅನುದಾನಕ್ಕಾಗಿ ಸರ್ಕಾರ, ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ದರ್ಶನ್ ಎಸ್‌ಡಿಎಂಸಿ ಅಧ್ಯಕ್ಷ
ಶತವಾನದ ಶಾಲೆಗೆ ಐತಿಹಾಸಿಕ ಮಹತ್ವವಿದೆ. ಶಾಲೆಯ ಅಭಿವದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸುವುದು ಸಂವಿಧಾನಕ್ಕೆ ಸಲ್ಲಿಸುವ ಗೌರವವಾಗಿದೆ.
ಮಧುಚಂದ್ರರಾವ್ ಎಸ್‌ಡಿಎಂಸಿ ಸದಸ್ಯ