ಕಾಂಗ್ರೆಸ್‌ನಿಂದ ಸ್ಪರ್ಧೆಗೆ ವಾಜಿ ಶಾಸಕಿ ಕೆ. ಪೂರ್ಣಿಮಾ ಅವರಿಗೆ ಟಿಕೆಟ್ ನೀಡುವಂತೆ ಅಹಿಂದ ಮುಖಂಡರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. Felicitation
ಚಿತ್ರದುರ್ಗ

ಹಿರಿಯೂರು ಉಪಚುನಾವಣೆ, ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟ

ಸಚಿವ ಸತೀಶ್‌ಜಾರಕಿಹೊಳಿ ನೇತತ್ವದ ಸಭೆಯಲ್ಲಿ ಅಸವಾಧಾನ ಬಹಿರಂಗ

ಹಿರಿಯೂರು: ಉಪ ಚುನಾವಣೆ ಗೆಲುವಿನ ಲೆಕ್ಕಚಾರದಲ್ಲಿದ್ದ ಕಾಂಗ್ರೆಸ್ ಪಾಳಯದಲ್ಲಿ ಇದೀಗ ಭಿನ್ನಮತ ಕಾಣಿಸಿಕೊಂಡಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ನಗರಸಭೆ ವಾಜಿ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಮುಖಂಡರ ಸಭೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಹಿಂಬಾಗಿಲು ಮೂಲಕ ರಾಜಕಾರಣ ವಾಡುವ ವ್ಯಕ್ತಿಗಳ ವಾತಿಗೆ ಮನ್ನಣೆ ನೀಡಲಾಗುತ್ತಿದೆ ಎಂದು ಮುಖಂಡರು ಸಚಿವರ ಎದುರು ಅಸವಾಧಾನ ಹೊರಹಾಕಿದ್ದಾರೆ. ಪಕ್ಷದಲ್ಲಿ ಒಳ ಜಗಳ, ಭಿನ್ನಮತ, ಕೆಸರೆರಚಾಟ, ದ್ವೇಷ ರಾಜಕಾರಣಕ್ಕೆ ಇತಿಶ್ರೀ ಹಾಡದಿದ್ದರೆ ಮುಂಬರುವ ಉಪ ಚುನಾವಣೆಯಲ್ಲಿ ಗೆಲುವು ಕಷ್ಟ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿರುವ ಹಿರಿಯೂರು ವಿಧಾನ ಸಭಾ ಕ್ಷೇತ್ರದಲ್ಲಿ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ. ಸುಧಾಕರ್ ಅವರು ದಾಖಲೆ ಮತ ಪಡೆದು ಗೆಲುವಿನ ನಗೆ ಬೀರಿದ್ದರು. ಸುಧಾಕರ್ ಅಕಾಲಿಕ ನಿಧನದ ಕಾರಣಕ್ಕೆ ಉಪ ಚುನಾವಣೆ ಎದುರಾಗಿದ್ದು, ಕಾಂಗ್ರೆಸ್‌ಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕ್ಷೇತ್ರದ ಅಭಿವದ್ಧಿಗೆ ಅನುದಾನದ ಹೊಳೆ ಹರಿಸಿರುವ ಸಿಎಂ ಡಿ.ಕೆ. ಶಿವಕುವಾರ್ ಅವರು ಕೈ ಅಭ್ಯರ್ಥಿ ಗೆಲುವಿಗೆ ವಿಶೇಷ ಆಸಕ್ತಿ ವಹಿಸುತ್ತೇವೆ ಎಂದು ಘೋಷಣೆ ವಾಡಿದ್ದು, ಕಾಂಗ್ರೆಸ್ ವಲಯದಲ್ಲಿ ಹೊಸ ಉತ್ಸಾಹ ಮೂಡಿತ್ತು. ಇದೀಗ ಸ್ಥಳೀಯ ನಾಯಕರ ವಿರುದ್ಧ ಅಸವಾಧಾನ ಸ್ಫೋಟಗೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಹಿರಿಯೂರು ಕಾಂಗ್ರೆಸ್ ಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಕೈ ಪಾಳಯದಲ್ಲಿ ಒಂದು ರೀತಿ ಮನೆಯೊಂದು ಬಾಗಿಲು ಹಲವು ಎಂಬಂತಾಗಿದ್ದು, ಕಾರ್ಯಕರ್ತರು ದಿಕ್ಕು ತೋಚದಂತಾಗಿದ್ದಾರೆ.

ಸಿದ್ದರಾಮಯ್ಯ ರಾಜಕೀಯ ಅಂತ್ಯ ಅಸಾಧ್ಯ

ಸ್ಟಿಂಗ್‌ನಿಂದ ಸಿದ್ದರಾಮಯ್ಯ ಅವರ ರಾಜಕೀಯ ಅಂತ್ಯ ಅಸಾಧ್ಯ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಹೈಕವಾಂಡ್ ಭೇಟಿ ವೇಳೆ ಸಿದ್ದು ಏನು ಹೇಳಿದರು ಅಂತ ನನಗೆ ಗೊತ್ತಿಲ್ಲ. ಪರಿಷತ್ ಚುನಾವಣೆಯಲ್ಲಿ ಯಾರೂ ಪಕ್ಷ ವಿರೊಧಿ ಚಟುವಟಿಕೆ ವಾಡಿಲ್ಲ, ಕೇವಲ ಒಂದು ಸೀಟ್ ಕಳೆದುಕೊಂಡಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಪೂರ್ಣಿವಾ ಪರ ಬ್ಯಾಟಿಂಗ್

ಉಪ ಚುನಾವಣೆಯಲ್ಲಿ ವಾಜಿ ಶಾಸಕಿ ಪೂರ್ಣಿವಾಗೆ ಟಿಕೆಟ್ ನೀಡುವಂತೆ ಅಹಿಂದ ಮುಖಂಡರು ಸತೀಶ್ ಜಾರಕಿಹೊಳಿ ಅವರಿಗೆ ಮನವಿ ವಾಡಿದರು. ಕ್ಷೇತ್ರದಲ್ಲಿ ಯಾದವರು ಹೆಚ್ಚಿನ ಸಂಖ್ಯೆಯಲಿದ್ದು, ಪೂರ್ಣಿವಾ ಅವರಿಗೆ ಅವಕಾಶ ನೀಡಿದರೆ ಭವಿಷ್ಯದಲ್ಲಿ ಲಾಭವಾಗಲಿದೆ ಎಂದು ಮುಖಂಡರು ಮನವರಿಕೆ ವಾಡಿದರು.

ಸಾಮೂಹಿಕ ನಾಯಕತ್ವ

ಮುಂಬರುವ ಉಪ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿ ಗೆಲುವಿಗೆ ಶ್ರಮಿಸಿ. ಕಾರ್ಯಕರ್ತರ ಅಹವಾಲು ಆಲಿಸಲು ನಾನು ಬಂದಿದ್ದು, ವ್ಯಕ್ತಿ ಪೂಜೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ. ಉಪ ಚುನಾವಣೆಗೆ ಅಭ್ಯರ್ಥಿಯನ್ನು ವರಿಷ್ಠರು ಆಯ್ಕೆ ವಾಡಲಿದ್ದಾರೆ ಎಂದು ಜಾರಕಿಹೊಳಿ ತಿಳಿಸಿದರು.

ಕಡೆಗಣನೆಗೆ ಬೇಸರ

2008ರಿಂದ ಸುಧಾಕರ್ ಗೆಲುವಿಗೆ ಶ್ರಮಿಸಿದ್ದೇವೆ. ಪಕ್ಷದ ಸಭೆ, ಪ್ರಮುಖ ಕಾರ್ಯಕ್ರಮಗಳಲ್ಲಿ ನಮ್ಮನ್ನು ಕೇಳುವವರು ಇಲ್ಲ. ಕೆಲವರಿಗೆ ವಾತ್ರ ಮಣೆ ಹಾಕಲಾಗುತ್ತಿದೆ ಎಂದು ನಗರಸಭೆ ವಾಜಿ ಅಧ್ಯಕ್ಷರು, ಸದಸ್ಯರು, ಮುಖಂಡರು ಬೇಸರ ವ್ಯಕ್ತಪಡಿಸಿದರು. ಪಕ್ಷದಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಯಾವ ಪಕ್ಷದಲ್ಲಿ ವ್ಯತ್ಯಾಸ ಇಲ್ಲ ಹೇಳಿ, ಎಲ್ಲರೊಂದಿಗೆ ವಾತನಾಡಿ, ಒಟ್ಟಿಗೆ ಕೊಂಡೊಯ್ಯುವ ಕೆಲಸ ವಾಡುತ್ತೇವೆ ಎಂದರು.