ಚಿತ್ರದುರ್ಗದ ಕೆಡಿಪಿ ಸಭೆಯಲ್ಲಿ ಸಚಿವ ಟಿ. ರಘುಮೂರ್ತಿ, ಶಾಸಕರಾದ ಬಿ.ಜಿ. ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ, ಡಾ.ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್.ನವೀನ್ ಮತ್ತಿತರರು ಇದ್ದರು.  
ಚಿತ್ರದುರ್ಗ

ಬೇಸಿಗೆ ಬರಕ್ಕೆ ಕಟ್ಟೆಚ್ಚರ

ಕುಡಿಯುವ ನೀರಿಗೆ ತೊಂದರೆಯಾಗದAತೆ ಸಚಿವ ರಘುಮೂರ್ತಿ ನಿರ್ದೇಶನ

ಚಿತ್ರದುರ್ಗ: ತೀವ್ರ ಬರಗಾಲದ ಬೇಗೆಯಲ್ಲಿ ಬೇಯುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದAತೆ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅಽಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದರು.

ಬುಧವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ತ್ರೆÊಮಾಸಿಕ ಕೆಡಿಪಿ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಾಧ್ಯತೆಯಿದ್ದು, ಟ್ಯಾಂಕರ್‌ಗಳು, ಬೋರ್‌ವೆಲ್ ಬಾಡಿಗೆ ಹಾಗೂ ಹೊಸ ಕೊಳವೆಬಾವಿಗಳ ಬಿಲ್‌ಗಳನ್ನು ತಕ್ಷಣವೇ ಪಾವತಿಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಯಾವುದೇ ನಿರ್ಬಂಧ ಹೇರಬಾರದು. ಜಿಲ್ಲೆಯ ೧,೦೧೨ ಆರ್‌ಒ ಗಳ ಪೈಕಿ ದುರಸ್ತಿಗೆ ಬಂದಿರುವ ೮೦ಕ್ಕೂ ಹೆಚ್ಚು ಪ್ಲ್ಯಾಂಟ್‌ಗಳನ್ನು ತಕ್ಷಣ ಸಜ್ಜುಗೊಳಿಸಿ, ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಎಲ್ಲ ಹೋಬಳಿಗಳಲ್ಲೂ ಗೋಶಾಲೆ

ಜಿಲ್ಲೆಯ ಎಲ್ಲ ೨೨ ಹೋಬಳಿಗಳಲ್ಲಿ ಕೂಡಲೇ ಗೋಶಾಲೆಗಳನ್ನು ಆರಂಭಿಸಬೇಕು. ಈಗಾಗಲೇ ೧೦ ಗೋಶಾಲೆಗಳು ಕಾರ್ಯಾರಂಭ ಮಾಡಿದ್ದು, ಬಾಕಿ ೧೨ ಗೋಶಾಲೆಗಳನ್ನು ತಕ್ಷಣ ತೆರೆಯಬೇಕು. ಶೆಡ್‌ಗಳು ಗಾಳಿಗೆ ಹಾರಿಹೋಗದಂತೆ ಕನಿಷ್ಠ ೯ ತಿಂಗಳು ಭದ್ರವಾಗಿರಬೇಕು ಎಂದು ಸಚಿವರು ಹಾಗೂ ಶಾಸಕರು ಸೂಚಿಸಿದರು. ಕುರಿ, ಮೇಕೆಗಳಿಗೂ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ಡಾ. ಎಂ. ಚಂದ್ರಪ್ಪ ಒತ್ತಾಯಿಸಿದರು. ಎಂಎಲ್‌ಸಿ ಕೆ.ಎಸ್. ನವೀನ್ ಸಲಹೆಯಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೀರಿನ ಸಹಾಯವಾಣಿ ಸ್ಥಾಪಿಸಿ, ಹೆಚ್ಚು ಪ್ರಚಾರ ನೀಡುವಂತೆ ತಿಳಿಸಲಾಯಿತು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಽಕಾರದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ, ಶಾಸಕರಾದ ಬಿ.ಜಿ. ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ, ಕೆ.ಸಿ. ವೀರೇಂದ್ರ ಪಪ್ಪಿ, ಡಿಸಿ ಎಸ್. ರಮ್ಯಾ, ಎಎಸ್‌ಪಿ ಶಿವಕುಮಾರ್ ಮತ್ತಿತರರು ಇದ್ದರು.

ಎಂವಿಎಸ್ ಯೋಜನೆಗೆ ವೇಗ

ಹೊಸದುರ್ಗ, ಹೊಳಲ್ಕೆರೆ ಹಾಗೂ ಬಿಟ್ಟು ಹೋಗಿರುವ ೩೦೦ ವಸತಿ ಪ್ರದೇಶಗಳಿಗೆ ಎಂವಿಎಸ್‌ಯಡಿ ಜೂನ್ ಒಳಗೆ ನೀರು ಕೊಡುವುದಾಗಿ ಅಽಕಾರಿಗಳು ಭರವಸೆ ನೀಡಿದರು. ಹೊಸದುರ್ಗ ಎಂವಿಎಸ್ ಕೋರ್ಟ್ ವ್ಯಾಜ್ಯ ಇತ್ಯರ್ಥಕ್ಕೆ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಅಽಕಾರಿಗಳ ಸಭೆ ನಡೆಸಲಾಗುವುದು ಎಂದು ಜಿಪಂ ಸಿಇಒ ಡಾ. ಎಸ್. ಆಕಾಶ್ ತಿಳಿಸಿದರು. ಹೊಳಲ್ಕೆರೆ-ಶಿವಮೊಗ್ಗ ರಾ.ಹೆ. ಗುತ್ತಿಗೆದಾರರು ಕುಡಿಯುವ ನೀರಿನ ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಕುರಿತು ಶಾಸಕ ಚಂದ್ರಪ್ಪ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

೧,೯೨೩ ಕೋಟಿ ರೂ. ಬೆಳೆ ನಾಶ

ಜಿಲ್ಲೆಯಲ್ಲಿ ಅಂದಾಜು ೨.೩೬ ಲಕ್ಷ ಹೆ.ನಲ್ಲಿ ಮೆಕ್ಕೆಜೋಳ, ಶೇಂಗಾ, ರಾಗಿ, ತೊಗರಿ, ಸಾಮೆ, ಹತ್ತಿ, ಸರ‍್ಯಕಾಂತಿ ಮತ್ತಿತರ ಬೆಳೆಗಳ ಸಹಿತ ೧೭೧೮ ಕೋಟಿ ರೂ. ಹಾಗೂ ೧೬೫೬೦ ಹೆ. ಅಡಿಕೆ, ದಾಳಿಂಬೆ, ಮಾವು, ತೆಂಗು, ಈರುಳ್ಳಿ ಇತ್ಯಾದಿ ೨೦೪ ಕೋಟಿ ರೂ. ತೋಟಗಾರಿಕೆ ಬೆಳೆಗಳು ಶೇ.೧೦೦ ನಷ್ಟವಾಗಿದೆ ಎಂದು ಅಽಕಾರಿಗಳು ಹೇಳಿದರು. ಎನ್‌ಡಿಆರ್‌ಎಫ್ ನಿಂದ ೨೨೭ ಕೋಟಿ ರೂ. ಹಾಗೂ ಬೆಳೆ ವಿಮೆ ಪರಿಹಾರ ೨೩೦ ಕೋಟಿ ರೂ. ಬರಬೇಕಿದೆ. ತಕ್ಷಣಕ್ಕೆ ರೈತರಿಗೆ ೫೦೦೦ ರೂ. ಪೈಕಿ ೨,೫೦೦ ರೂ. ಬಿಡುಗಡೆಯಾಗದ ಬಗ್ಗೆ ಸಚಿವರು ಅಽಕಾರಿಗಳಿಗೆ ದೂರವಾಣಿ ಕರೆ ಮಾಡಿ ತ್ವರಿತ ಕ್ರಮಕ್ಕೆ ಸೂಚಿಸಿದರು. ಮಿಸ್‌ಮ್ಯಾಚ್ ದೂರುಗಳನ್ನು ತಕ್ಷಣ ಸರಿಪಡಿಸಿ, ಸರಿಯಾದ ವರದಿ ಕಳಿಸುವಂತೆ ಶಾಸಕ ಚಂದ್ರಪ್ಪ ತಿಳಿಸಿದರು.

ಅಽಕಾರಿಗಳಿಗೆ ಸಚಿವರ ಚಾಟಿ

ಚಿತ್ರದುರ್ಗದ ಕವಾಡಿಗರಹಟ್ಟಿ ರಸ್ತೆ ಹಾಳಾಗಿದ್ದು, ಸಂಚಾರಕ್ಕೆ ತೀವ್ರ ಅಡಚಣೆ ಆಗಿರುವ ಕುರಿತು ವ್ಯಾಪಕ ಚರ್ಚೆಯಾಯಿತು. ರಸ್ತೆ ದುರಸ್ತಿಗೆ ಅವಕಾಶವಿಲ್ಲವೆಂದ ಎನ್‌ಎಚ್ ಇಇ ಅವರ ಮಾತಿಗೆ ಒಪ್ಪದ ಸಚಿವರು, ಇಲಾಖೆ ಸಿಇ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತಕ್ಷಣ ರಸ್ತೆ ದುರಸ್ತಿಗೆ ನಿರ್ದೇಶಿಸಿದರು. ಸಭೆಗೆ ತಪ್ಪು ಮಾಹಿತಿ ನೀಡಿದ ಇಇ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಶಾಸಕ ಪಪ್ಪಿ ಒತ್ತಾಯಿಸಿದರು.

೨,೩೦೦ ಕಿ.ಮೀ. ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ೭೦೦ ಕಿ.ಮೀ. ಮಾತ್ರ ಪೂರ್ಣಗೊಳಿಸಿದ ಲೋಕೋಪಯೋಗಿ ಇಇ ನಾಗರಾಜ್‌ಗೆ, ನೀವು ಒಳ್ಳೆಯವರಾಗಿದ್ದಾರೆ ಸಾಲದು. ಡಿಸೆಂಬರ್ ೧೫ರೊಳಗೆ ಕೆಲಸ ಮುಗಿಸಿ ಎಂದು ಸಚಿವರು ತಾಕೀತು ಮಾಡಿದರು.

೯ ಇಲಾಖೆಗಳ ಕಡತಗಳು ಇಂಗ್ಲಿಷ್‌ನಲ್ಲಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಽಕಾರ ಸದಸ್ಯ ಪ್ರೊ. ಎ.ಬಿ. ರಾಮಚಂದ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ ಬಳಿಕ, ಮುಂದೆ ಕನ್ನಡದಲ್ಲೇ ಮಾಹಿತಿ ನೀಡಬೇಕು, ಸಭೆಯಲ್ಲಿ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ಉಪಸ್ಥಿತರಿರಬೇಕು ಎಂದು ಸಚಿವರು ಎಚ್ಚರಿಸಿದರು.