ದೇಶ ಮತ್ತು ರಾಜ್ಯದಲ್ಲಿ ಗೋವುಗಳನ್ನು ರಕ್ಷಿಸುವಂತೆ ನಗರದಲ್ಲಿ ಸೋಮವಾರ ನಡೆದ ಗೋ ಸಮ್ಮಾನ್ ಆಹ್ವಾನ್ ಅಭಿಯಾನದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಗೋ ಸೇವಕರು ಸರ್ಕಾರವನ್ನು ಆಗ್ರಹಿಸಿದರು. ಸುರೇಶ್‌ಬಾಬು, ರುದ್ರೇಶ್, ವಿಪುಲ್ ಜೈನ್, ಗೋಪಿ, ಕನಕರಾಜ್, ವೀಣಾ, ಮಲ್ಲಿಕಾರ್ಜುನ್, ಮಾಲತೇಶ್ ಅರಸ್ ಇತರರಿದ್ದರು. 
ಚಿತ್ರದುರ್ಗ

ಆರ್ಥಿಕತೆ ಸದೃಢಗೊಳಿಸಲು ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಸಾವಯವ ಕೃಷಿಯೊಂದಿಗೆ ನಾಡಿಗೆ ಮತ್ತಷ್ಟು ಬಲ
  • ಗೋವು ರಕ್ಷಣೆಗೆ ಆಗ್ರಹಿಸಿ ಅಭಿಯಾನ
  • ಆರ್ಥಿಕ ಸಮೃದ್ಧಿ
ಚಿತ್ರದುರ್ಗ: ದೇಶ ಮತ್ತು ರಾಜ್ಯದಲ್ಲಿ ಗೋವುಗಳನ್ನು ರಕ್ಷಿಸುವಂತೆ ನಗರದಲ್ಲಿ ಸೋಮವಾರ ನಡೆದ ಗೋ ಸಮ್ಮಾನ್ ಆಹ್ವಾನ್ ಅಭಿಯಾನದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಗೋ ಸೇವಕರು ಸರ್ಕಾರವನ್ನು ಆಗ್ರಹಿಸಿದರು.
ಗೋವುಗಳ ರಕ್ಷಣೆಗಾಗಿ ವಿಶೇಷ ಕಾನೂನು ರೂಪಿಸುವಂತೆ ರಾಷ್ಟçಪತಿ, ಪ್ರಧಾನಿ, ರಾಜ್ಯಪಾಲರು, ಸಿಎಂಗೆ ಒತ್ತಾಯಿಸಿ ಜಿ¯್ಲÁಡಳಿತದ ಮೂಲಕ ಮನವಿ ರವಾನಿಸಿದರು.
ರಾಜ್ಯದಲ್ಲಿ ಅಖಿಲ ದೇವಲಕ್ಷಣಾ ಗೋಮಾತೆ (ಸಂಪೂರ್ಣ ದೇಶಿ ಗೋವಂಶ) ವಿಽವತ್ ಸೇವೆ, ಪೂರ್ಣ ಸುರಕ್ಷತೆ, ರಾಜ್ಯ ಮಾತೆ ಎಂದು ಘೋಷಿಸಬೇಕು. ರಾಷ್ಟç ಮಾತೆ ಗೌರವಕ್ಕಾಗಿ ಕೇಂದ್ರಕ್ಕೆ ಶಿ-Áರಸು ಮಾಡಬೇಕು. ನಾಡಿನೆ¯್ಲೆಡೆ ಗೋ ಆಧಾರಿತ ಆರ್ಥಿಕತೆ ಸದೃಢಗೊಳಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಮೊದಲಿನಿಂದಲೂ ಕರುಣೆ ಮತ್ತು ಗೋವಂಶ ಸಂರಕ್ಷಣೆಯ ಜÁಗತಿಕ ಕೇಂದ್ರವಾಗಿದೆ. ಗೋವಂಶ ಕೇವಲ ನಮ್ಮ ಶ್ರ ದ್ಧೆಯ ಕೇಂದ್ರವಷ್ಟೇ ಅಲ್ಲ. ಬದಲಿಗೆ ನಾಡಿನ ಗ್ರಾಮೀಣರ ಜನಜೀವನ, ಕೃಷಿ ಮತ್ತು ಆರ್ಥಿಕತೆಯ ಬೆನ್ನೆಲುಬು ಕೂಡ ಆಗಿದೆ. ಸಾಂಸ್ಕೃತಿಕ ಪ್ರಭೆ, ನಮ್ಮ ಪರಂಪರೆಗಳ ಗುರುತು, ಗೌರವ, ಸೇವೆ ಹಾಗೂ ಗೋವುಗಳ ಸುರಕ್ಷತೆ ಇಲ್ಲದೆ ಅಪೂರ್ಣವಾಗಿದೆ. ಹೀ ಗಾಗಿ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಿದೆ ಎಂದು ಒತ್ತಾಯಿಸಿದರು.
ಪ್ರಗತಿಪರ ಕೃಷಿ ಪ್ರಧಾನ ರಾಜ್ಯ ಕರ್ನಾಟಕದಲ್ಲಿ ಗೋವು ಆಧಾರಿತ ನೈಸರ್ಗಿಕ ಕೃಷಿಯೇ ನಮ್ಮ ಅನ್ನದಾತರನ್ನು ರಾಸಾಯನಿಕ ಗೊಬ್ಬರಗಳ ಹಾನಿಕಾರಕ ಚಕ್ರದಿಂದ ಮುಕ್ತಗೊಳಿಸಿ ಆರೋಗ್ಯ ಮತ್ತು ಆತ್ಮನಿರ್ಭರಗೊಳಿಸುವ ಅತ್ಯಂತ ಪರಿಣಾಮಕಾರಿ ಮಾ ರ್ಗವಾಗಿದೆ. ರಾಜ್ಯ ಸರ್ಕಾರ ಜನಾರೋಗ್ಯ ಮತ್ತು ಆಹಾರ ಭದ್ರತೆಯ ಸಂಕಲ್ಪಗಳನ್ನು ಸ್ವದೇಶಿ ಗೋ-ಆಧಾರಿತ ಉತ್ಪನ್ನಗಳು, ಸಾವಯವ ಕೃಷಿಯೊಂದಿಗೆ ಮತ್ತಷ್ಟು ಬಲಗೊಳಿಸಲು ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ಗೋವುಗಳ ರಕ್ಷಣೆಯಿಂದ ಆರ್ಥಿಕ ಸಮೃದ್ಧಿ ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಗೆ ವಿಷಮುಕ್ತ ಅನ್ನ ಮತ್ತು ಸಾತ್ವಿಕ ಆಹಾರ ದೊರೆಯುತ್ತದೆ. ವಾಸ್ತವವಾಗಿ, ಸ್ವದೇಶಿ ಗೋವಂಶದ ಸಂರಕ್ಷಣೆಯು ನಾಡಿನ ಜನಾರೋಗ್ಯ ಮತ್ತು ಪರಿಸರದ ಸಂರಕ್ಷಣೆಯೇ ಆಗಿದೆ. ಈ ನಿಟ್ಟಿನಲ್ಲಿ ಉಭಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಕೋರಿದರು. ಸುರೇಶ್‌ಬಾಬು, ರುದ್ರೇಶ್, ವಿಪುಲ್ ಜೈನ್, ಗೋಪಿ, ಕನಕರಾಜ್, ವೀಣಾ, ಮಲ್ಲಿಕಾರ್ಜುನ್, ಮಾಲತೇಶ್ ಅರಸ್ ಇತರರಿದ್ದರು.