ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಿಸಿ ಎಸ್. ರಮ್ಯಾ, ಎಸ್‌ಪಿ ಕುಶಲ್‌ಚೌಕ್ಸೆ ಮತ್ತಿತರ ಅಽಕಾರಿಗಳು ಇದ್ದರು.  
ಚಿತ್ರದುರ್ಗ

ಮೋಟಾರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ

ಸಂಚಾರ ನಿಯಮ ಪಾಲಿಸದಿದ್ದರೆ ಕ್ರಮ

ಚಿತ್ರದುರ್ಗ: ಜಿಲ್ಲಾದ್ಯಂತ ಮೋಟಾರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಬೇಕೆಂದು ಡಿಸಿ ಎಸ್.ರಮ್ಯಾ ಅವರು ಪೊಲೀಸ್ ಅ ಽಕಾರಿಗಳಿಗೆ ಸೂಚಿಸಿದರು.

ಜಿಲ್ಲಾಽಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಉತ್ತಮ ಗುಣಮಟ್ಟದ ರಸ್ತೆಗಳಿದ್ದರೂ ವಾಹನ ಸವಾರರ ಅಜಾಗರೂಕ ಚಾಲನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯವಾಗಿ ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರೇ ಗಂಭೀರ ಗಾಯ ಅಥವಾ ಮರಣಕ್ಕೆ ತುತ್ತಾಗುತ್ತಿದ್ದಾರೆ. ವಾಹನ ಸವಾರರು ಸಂಚಾರ ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು. ವಿಶೇಷವಾಗಿ ಎಲ್ಲ ಸರ್ಕಾರಿ ನೌಕರರೂ ನಿಯಮ ಪಾಲಿಸಿ, ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು, ಸಮುದಾಯ ಭವನಗಳಲ್ಲಿ ಹೆಲ್ಮೆಟ್ ಧರಿಸದೆ ಬರುವ ವಾಹನ ಸವಾರರಿಗೆ ಪಾರ್ಕಿಂಗ್ ಅವಕಾಶ ನೀಡಬಾರದು. ಸಂಚಾರ ನಿಯಮಗಳ ಪಾಲನೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಒಳಗಾಗದಂತೆ ತಡೆಯಲು ಸಾರಿಗೆ ಇಲಾಖೆಯಿಂದ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದರು.

ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆಯೊಂದಿಗೆ ವಾಹನ ಕಲಿಕಾ ಪರವಾನಗಿ ಹಾಗೂ ವಾಹನ ನಡೆಸುವ ಪರವಾನಗಿ ನೀಡಲು ಅಭಿಯಾನ ನಡೆಸಬೇಕು. ಕಾರು ಚಾಲಕರು ಕಡ್ಡಾಯವಾಗಿ ಸೀಟ್‌ಬೆಲ್ಟ್ ಧರಿಸಬೇಕು. ಪಥ ಶಿಸ್ತಿನೊಂದಿಗೆ ಹೆದ್ದಾರಿಗಳಲ್ಲಿ ವಾಹನ ಚಲಾಯಿಸಬೇಕು. ನಿಯಮ ಉಲಂಘಿಸುವವರಿಗೆ ಮುಲಾಜಿಲ್ಲದೆ ದಂಡ ವಿಽಸಬೇಕು ಎಂದು ಡಿಸಿ ಖಡಕ್ ಸೂಚನೆ ನೀಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಜರುಗಿದ ಅಪಘಾತಗಳು ಹಾಗೂ ಅಪಘಾತಗಳಲ್ಲಿ ಮರಣ ಪ್ರಮಾಣ ತಗ್ಗಿಸಲು ಸೇವ್‌ಲೈ-ï ಫೌಂಡೇಷನ್ ರೂಪಿಸಿರುವ ವೈಜ್ಞಾನಿಕ ವರದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಎಸ್‌ಪಿ ಕುಶಲ್‌ಚೌಕ್ಸೆ, ಹೆದ್ದಾರಿ ಪ್ರಾಽಕಾರದ ಯೋಜನಾ ನಿರ್ದೇಶಕ ಸುನೀಲ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜ್, ಆರ್‌ಟಿಒ ನಾಗರಾಜ್ ಶೆಳಗಿ, ಡಿಎಚ್‌ಒ ಡಾ.ಎಂ.ಸಿ. ಸುನೀಲ್‌ಕುಮಾರ್ ಮತ್ತಿತರ ಅಽಕಾರಿಗಳು ಇದ್ದರು.

----

ವರದಿ ಸಲ್ಲಿಸಿ

ಜಿಲ್ಲೆಯಲ್ಲಿ ಪ್ರಮುಖ ಹೆದ್ದಾರಿ ಜಾಲಗಳು ಹಾದು ಹೋಗಿವೆ. ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳಿಗೆ ರಾಷ್ಟಿçÃಯ ಹೆದ್ದಾರಿ ಪ್ರಾಽ ಕಾರದ ಅಽಕಾರಿಗಳು, ಪೊಲೀಸ್, ಲೋಕೋಪಯೋಗಿ ಹಾಗೂ ಆರೋಗ್ಯ ಇಲಾಖೆ ಅಽಕಾರಿಗಳು, ಸಂಬAಽಸಿದ ವ್ಯಾಪ್ತಿಯ ನಗರ ಸಭೆ, ಪುರಸಭೆ, ಪಪಂ ಅಽಕಾರಿಗಳು ಭೇಟಿ ಸ್ಥಳ ವರದಿ ಸಲ್ಲಿಸಬೇಕು. ಅಪಘಾತದ ಕಾರಣ ತಿಳಿದು, ಸೂಕ್ತ ರಸ್ತೆ -Àಲಕ ಅಳವಡಿಸಬೇಕು.

ಹಿರಿಯೂರು ನಗರದ ಬೈಪಾಸ್ ಬಳಿ ಲಾರಿಗಳು ನಿಲ್ಲುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಅಽಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು. ಚಿತ್ರದುರ್ಗ- ಹೊಳಲ್ಕೆರೆ ರಸ್ತೆಯಲ್ಲಿ ಅಗತ್ಯ ರಸ್ತೆ -Àಲಕಗಳು, ರೇಡಿಯಂ ಸ್ಟಿರ‍್ಸ್, ಫ್ಲಿರ‍್ಸ್ ಅಳವಡಿಸಲು ಹೆದ್ದಾರಿ ಅಽಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಡಿಸಿ ನಿರ್ದೇಶನ ನೀಡಿದರು.

ಚಿತ್ರದುರ್ಗ ನಗರದ ಹಳೇ ಬೈಪಾಸ್ ರಸ್ತೆ ವಿದ್ಯುದ್ದೀಕರಣಕ್ಕೆ ೮.೭೫ ಕೋಟಿ ರೂ.ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಜೆಎಂಐಟಿ ಬಳಿ ಸ್ಕೆÊಕ್‌ವಾಕ್ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ ಎಂದು ಅಽಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.