- ರಾಷ್ಟ ನಿರ್ಮಾಣದ ಚಟುವಟಿಕೆ
- ಮೈ ಭಾರತ್ ವೇದಿಕೆ
- ಉಪವಿಭಾಗಾಽಕಾರಿ ಡಾ.ಕೆ.ಜೆ. ಕಾಂತರಾಜ್
ಚಿತ್ರದುರ್ಗ: ರಾಷ್ಟ ನಿರ್ಮಾಣದ ಚಟುವಟಿಕೆಗಳಲ್ಲಿ ಯುವಶಕ್ತಿ ಸದ್ಬಳಕೆಗೆ ಮೈ ಭಾರತ್ ವೇದಿಕೆ ಅವಕಾಶ ಒದಗಿಸಲಿದೆ ಎಂದು ಉಪವಿಭಾಗಾಽಕಾರಿ ಡಾ.ಕೆ.ಜೆ. ಕಾಂತರಾಜ್ ಹೇಳಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ್ ಯೋಜನೆ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಯುವಜನರಲ್ಲಿ ನಾಯಕತ್ವ ಗುಣ ಬೆಳಸಲು, ಸ್ವಯಂಸೇವೆ, ಕೌಶಲಾಭಿವೃದ್ಧಿ ಹಾಗೂ ಸಮುದಾಯ ಸೇವೆಯಲ್ಲಿ ತೊಡಗಿಸಿಕೊ ಳ್ಳಲು ಈ ವೇದಿಕೆ ಪ್ರಮುಖ ಪಾತ್ರವಹಿಸಲಿದೆ. ೧೫-೨೯ ವರ್ಷದೊಳಗಿನ ಯುವ ಜನರು ಮೈ ಭಾರತ್ -ೆÆÃರ್ಟಲ್‌ನಲ್ಲಿ ನೋಂದಾಯಿಸಿಕೊAಡು ಸರ್ಕಾರದ ಸೌಲಭ್ಯಗಳು ಮತ್ತು ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲೆಯ ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಶೀಘ್ರ ಮೈ ಭಾರತ್ ನೋಂದಣಿ ಅಭಿಯಾನ ಆರಂಭಿಸಲಾಗುವು ದು. ಅರ್ಹ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದರು.
ನಶಾ ಮುಕ್ತ ಭಾರತ್ ಅಭಿಯಾನ, ವಿಕಸಿತ ಭಾರತ್ ಯುವ ನಾಯಕರ ಸಂವಾದ, ವೈಬ್ರೆಂಟ್ ವಿಲೇಜ್' ಕಾರ್ಯಕ್ರಮ ಸೇರಿ ಯುವಜನರ ಅಭಿವೃದ್ಧಿಗೆ ಹಮ್ಮಿಕೊಳ್ಳಲಾದ ಸಾಮಾಜಿಕ ಕಲ್ಯಾಣ ಮತ್ತು ಸಮುದಾಯ ಸಬಲೀಕರಣ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.
ಮೇರಾ ಯುವ ಭಾರತ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಯುವಜನ ಅಽಕಾರಿ ಧನಂಜಯ್ ಜಗತಾ ಪ್ ಅವರು, ಮೈ ಭಾರತ್ -ÉÆÃರ್ಟಲ್ ಉದ್ದೇಶಗಳು ಮತ್ತು ಪ್ರಸ್ತುತ ನಡೆಯುತ್ತಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುಚೇತಾ ನೆಲವಗಿ, ಜಿಲ್ಲಾ ದೈಹಿಕ ಶಿಕ್ಷಣಾಽಕಾರಿ ಚಿದಾನಂದಸ್ವಾಮಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ. ಪ್ರವೀಣ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಪ್ರಧಾನ ಕಾರ್ಯದರ್ಶಿ ಮಜಹರ್ ಉಲ್ಲಾ ಮತ್ತಿತರರು ಇದ್ದರು.