ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಹರ್ಡೇಕರ್ ಮಂಜಪ್ಪ ಅವರ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಹುರುಳಿ ಎಂ. ಬಸವರಾಜ, ಡಾ. ರಘುನಾಥರೆಡ್ಡಿ, ನಾಗರಾಜ್‌ಸಂಗಮ್, ಬಸವರಾಜಕಟ್ಟಿ ಇತರರು ಇದ್ದರು. 
ಚಿತ್ರದುರ್ಗ

ಹರ್ಡೇಕರ್ ಮಂಜಪ್ಪ ಸಾಧನೆ ಎಷ್ಟು ಬಣ್ಣಿಸಿದರೂ ಸಾಲದು

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಾರ್ಯದರ್ಶಿ ಹುರಳಿ ಎಂ.ಬಸವರಾಜು ಅನಿಸಿಕೆ
  • ಮುರುಘಾ ಮಠದಲ್ಲಿ ಜಯಂತಿ ಆಚರಣೆ
  • ಬಸವ ಜಯಂತಿ
ಚಿತ್ರದುರ್ಗ: ಜಾಗೃತ ಯುವಜನ,ಮಹಿಳೆ ಮತ್ತು ಮಕ್ಕಳು ಈ ನಾಡಿನ ಆಸ್ತಿ ಎನ್ನುವ ಮೂಲಕ ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದ ಕರ್ನಾ ಟಕದ ಗಾಂಽ ಹರ್ಡೇಕರ್ ಮಂಜಪ್ಪನವರ ವ್ಯಕ್ತಿತ್ವ ಸಾಧನೆ ಬಗ್ಗೆ ಎಷ್ಟು ಬಣ್ಣಿಸಿದರೂ ಸಾಲದೆಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕರ‍್ಯದರ್ಶಿ ಹುರಳಿ ಎಂ.ಬಸವರಾಜು ಹೇಳಿದರು.
ಮುರುಘಾಮಠದಲ್ಲಿ ಬುಧವಾರ ಮಂಜಪ್ಪ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಗಣೆÃಶ ಹಬ್ಬ, ರಾಮನವಮಿ ಯಂತೆ ಬಸವ ಜಯಂತಿಯನ್ನು ಆಚರಿಸಬೇಕೆಂದು ಮೃತ್ಯುಂಜಯಪ್ಪಗಳು ಹಾಗೂ ಇತರರೊಂದಿಗೆ ಚರ್ಚಿಸಿ ೧೯೧೩ರಲ್ಲಿ ಮೊದಲಿಗೆ ದಾವಣಗೆರೆ ವಿರಕ್ತಮಠದಲ್ಲಿ ಬಸವ ಜಯಂತಿ ಆಚರಣೆ ಆರಂಭಿಸಿದ್ದು ಇತಿಹಾಸವಾಗಿದೆ. ರಾಷ್ಟç ಪ್ರೇಮ ಉಸಿರಾಗಿ ಸಿಕೊಂಡಿದ್ದ ಮಂಜಪ್ಪನವರ ಆದರ್ಶಗಳನ್ನು ಇವತ್ತಿನ ಪೀಳಿಗೆ ಅರಿಯಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀಬಸವಕುಮಾರ ಸ್ವಾಮೀಜಿ ಮಾತನಾಡಿ, ಮಂಜಪ್ಪ ಹಾಗೂ -À.ಗು. ಹಳಕಟ್ಟಿಯವರನ್ನು ನಮ್ಮ ನಾಡು ಯಾವತ್ತಿಗೂ ಮರೆಯುವಂತಿಲ್ಲ ಎಂದರು.
ಎಸ್‌ಜೆಎA ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಘುನಾಥರೆಡ್ಡಿ,ನಾಗರಾಜ ಸಂಗಮ್, ಬಸವರಾಜಕಟ್ಟಿ, ಎಸ್.ಎಂ. ಕೊಟ್ರೇಶಪ್ಪ, ಗಂಗಾಧರಪ್ಪ, ಟಿ.ಪಿ. ಜ್ಞಾನಮೂರ್ತಿ, ಮಹಂತಮ್ಮ, ಜಯಶೀಲಾ ವೀರಣ್ಣ, ಗೀತಾರುದ್ರೇಶ್, ಇಟಗಿ ವಿಜಯ ಕುಮಾರ್ ಇತರರು ಇದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥಿಸಿದರು.ಗೀತಾ ಸ್ವಾಗತಿಸಿ, ಅನುಪಮಾ ಲಿಂಗರಾಜು ವಂದಿಸಿದರು.