ಚಿತ್ರದುರ್ಗದ ಶ್ರೀ ಶಾಂತಾರಾಮ ತೀರ್ಥಾಶ್ರಮದಲ್ಲಿ ಶ್ರೀ ಶಾಂತಾವಧೂತರ, ರಾಜಯೋಗಿಸ್ವಾಮಿ ರಾಮತೀರ್ಥರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ನೆರವೇರಿತು.
- ಶಾಂತಾರಾಮ ತೀರ್ಥಾಶ್ರಮದಲ್ಲಿ ಭಕ್ತಿಯ ಪರಾಕಾಷ್ಠೆ
- ನೆರವೇರಿದ ಧಾರ್ಮಿಕ ಕಾರ್ಯಕ್ರಮ
- ಭಕ್ತರಲ್ಲಿ ಹೆಚ್ಚಿದ ಉತ್ಸಾಹ
ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಯ ಶಾಂತಾರಾಮ ತೀರ್ಥಾಶ್ರಮದಲ್ಲಿ ಶ್ರೀ ಶಾಂತಾವಧೂತರ, ರಾಜಯೋಗಿಸ್ವಾಮಿ ಶ್ರೀ ರಾಮತೀರ್ಥರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ಜರುಗಿತು.
ಇದರ ಜೊತೆಗೆ ಜಗನ್ಮಾತಾ ಚೂಡಾಮಣಿ ಮಾತಾಜಿ ಅವರ ಪುಣ್ಯಾರಾಧನೆ ಕಳೆಗಟ್ಟಿತ್ತು. ರಥೋತ್ಸವದ ಅಂಗವಾಗಿ ರಥದ ಸುತ್ತಲೂ ವಿವಿಧ ಬಗೆಯ ಪುಷ್ಪಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ಪ್ರವಚನ, ಗುರು ಪೂಜೆ ಬಳಿಕ ಪಲ್ಲಕ್ಕಿ ಉತ್ಸವ ಜರುಗಿತು.
ರಾಮತೀರ್ಥರ ಮೂರ್ತಿಗೆ ಮಹಾಮಂಗಳಾರತಿ ನೆರವೇರಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಕಳಸ ಸ್ಥಾಪನೆ, ಮಹಾಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಗುರುಪೂಜೆ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಗಳು ನೆರವೇರಿದವು.
ಭಕ್ತ ವೃಂದದಿAದ ಅಖಂಡ ಭಜನೆ, ಕೀರ್ತನೆ ಜರುಗಿದ ನಂತರ ಅನ್ನಸಂತರ್ಪಣೆಯಲ್ಲಿ ಹಲವರು ಪಾಲ್ಗೊಂಡು ಪ್ರಸಾದ ಸ್ವೀಕರಿ ಸಿದರು. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟç ಹಾಗೂ ತಮಿಳುನಾಡಿನಿಂದ ಕೂಡ ಭಕ್ತರು ಆಗಮಿಸಿದ್ದರು.
ಆಶ್ರಮದ ಗುರೂಜಿ ಪ್ರಹ್ಲಾದ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರಧಾನ ಅರ್ಚಕರು ಹೋಮ ಸೇರಿ ಇನ್ನಿತರೆ ಪೂಜಾ ಕೈಂಕರ್ಯ ನೆರವೇರಿಸಿದರು. ಟ್ರ¸್ಟïನ ಪದಾಽಕಾರಿಗಳು ಸೇರಿ ಸದಸ್ಯರಿದ್ದರು.