- ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ
- ಕರಡು ಮತದಾರರ ಪಟ್ಟಿ
- ಹಕ್ಕು ಮತ್ತು ಆಕ್ಷೇಪಣೆ
ಚಿತ್ರದುರ್ಗ: ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಡಿಸೆಂ ಬರ್ ೧೦ರೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಽಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಽಕಾರಿ, ಉಪವಿಭಾಗಾಽಕಾರಿ ಕಚೇರಿ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳಲ್ಲಿ ಮತ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮತದಾರರ ಪಟ್ಟಿ ತಯಾರಿಕೆಗೆ ೨೦೨೫ರ ನವೆಂಬರ್ ೧ ಅರ್ಹತಾ ದಿನಾಂಕವಾಗಿರುತ್ತದೆ. ಅರ್ಹತಾ ದಿನಾಂಕದAತೆ ಮತದಾರರ ಪಟ್ಟಿ ಯಲ್ಲಿ ಹೆಸರು ಸೇರಿಸಲು,ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಚುನಾವಣೆ ಆಯೋಗದ ನಿಗದಿತ ನಮೂನೆಯಲ್ಲಿ ಮತದಾರರ ನೋಂದಣಾ ಽಕಾರಿ,ಸಹಾಯಕ ಮತದಾರರ ನೊಂದಣಾಽಕಾರಿ ಹಾಗೂ ನಿರ್ದಿಷ್ಟಾಽಕಾರಿಗಳಿಗೆ ಸಲ್ಲಿಸಬಹುದು.
ಇದುವರೆಗೂ ಮತ ದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸ ಅರ್ಹರು ಈ ಅವಕಾಶ ಬಳಸಿಕೊಂಡು,ಮತ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಿ ಕೊಳ್ಳ ಬಹುದಾಗಿದೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.