ಹಿರಿಯೂರು ಪ್ರವಾಸಿ ಮಂದಿರದಲ್ಲಿ ರಾಜ್ಯಪಾಲೆ ಡಾ. ಸುಧಾ ಯಾದವ್ ಅವರು ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಸಂವಾದ ನಡೆಸಿದರು. ಡಿಸಿ ರವ್ಯಾ, ಜಿಪಂ ಸಿಇಒ ಡಾ. ಆಕಾಶ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿ.ಡಿ. ತಿಮ್ಮಯ್ಯ ಇದ್ದರು. Meeting
ಚಿತ್ರದುರ್ಗ

ಕೃಷಿಕರ ಪ್ರಗತಿಗೆ ರಾಜ್ಯಪಾಲೆ ಶಹಬ್ಬಾಸ್

ಸಾಧಕರೊಂದಿಗೆ ಡಾ. ಸುಧಾ ಯಾದವ್ ಸಂವಾದ, ಮಳೆನೀರು ಕೊಯ್ಲು, ಮಾದಕ ವಸ್ತು ವಿರುದ್ಧ ಜಾಗೃತಿ ಮೂಡಿಸಲು ಸಲಹೆ

ಹಿರಿಯೂರು: ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಾವಯವ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಜಿಲ್ಲೆಯ ರೈತರು ಸಾಧಿಸಿರುವ ಪ್ರಗತಿಗೆ ರಾಜ್ಯಪಾಲೆ ಡಾ. ಸುಧಾ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿ, ಜಲ ಸಂರಕ್ಷಣೆಗಾಗಿ ಮಳೆನೀರು ಕೊಯ್ಲಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನಿಂದ ಬಳ್ಳಾರಿಗೆ ಪ್ರಯಾಣಿಸುತ್ತಿದ್ದ ಅವರು ಮಾರ್ಗಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಭೇಟಿಯಾಗಿ, ಮಧ್ಯಾಹ್ನದ ಭೋಜನದೊಂದಿಗೆ ಸವಾದ ನಡೆಸಿದರು.

ಭವಿಷ್ಯದ ದೃಷ್ಟಿಯಿಂದ ನೀರು ಸಂರಕ್ಷಣೆ ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು, ಮಳೆನೀರು ಸಂಗ್ರಹಣೆಯ ಮಹತ್ವವನ್ನು ಒತ್ತಿ ಹೇಳಿದರು. ಇದೇ ವೇಳೆ, ಯುವ ಪೀಳಿಗೆ ಮಾದಕ ವಸ್ತುಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಿರಿಧಾನ್ಯಗಳ ಸಂಸ್ಕರಣೆ, ಮಾರುಕಟ್ಟೆ, ರೈತ ಉತ್ಪಾದಕ ಕಂಪನಿಗಳು, ಸಮಗ್ರ ಕೃಷಿ, ಹೈನುಗಾರಿಕೆ, ಸಾವಯವ ಕೃಷಿ, ಸ್ವ-ಸಹಾಯ ಸಂಘಗಳ ಮೂಲಕ ಸಿರಿಧಾನ್ಯ ಆಧಾರಿತ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ, ಕನ್ನಡ ಸಾಹಿತ್ಯ, ಗ್ರಾಮೀಣ ಕಲೆ, ರಂಗಭೂಮಿ ಹಾಗೂ ಮಳೆನೀರು ಕೊಯ್ಲು ಸೇರಿ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಚರ್ಚಿಸಿ, ಅವರ ಕಾರ್ಯಚಟುವಟಿಕೆಗಳು, ಅನುಭವ ಹಾಗೂ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಾಧಕರು ತಮ್ಮ ಅನುಭವ ಮತ್ತು ಪ್ರಭಾವ ಬಳಸಿಕೊಂಡು ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮಳೆನೀರು ಕೊಯ್ಲಿನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು. ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಜಾಗೃತಿ ಮತ್ತು ಸಮುದಾಯದ ಕಲ್ಯಾಣಕ್ಕಾಗಿ ತಮ್ಮ ಪ್ರಯತ್ನ ಮುಂದುವರಿಸುವಂತೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಸ್.ರಮ್ಯಾ , ಜಿಪಂ ಸಿಇಒ ಡಾ.ಎಸ್. ಆಕಾಶ್, ದಾವಣಗೆರೆ ಪೂರ್ವ ವಲಯ ಐಜಿಪಿ ಎನ್.ಸತೀಶ್‌ಕುವಾರ್, ಉಪವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್, ಎಎಸ್‌ಪಿ ಶಿವಕುವಾರ್, ತಹಸೀಲ್ದಾರ್ ಸಿದ್ದೇಶ್, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಇತಿಹಾಸ ಸಂಶೋಧಕ ಬಿ. ರಾಜಶೇಖರಪ್ಪ, ಜಲತಜ್ಞ ದೇವರಾಜರೆಡ್ಡಿ ಇತರರು ಇದ್ದರು.

ಓದಿನ ಆಸಕ್ತಿ ಕುಂದಿಲ್ಲ

ಯುವ ಪೀಳಿಗೆಯಲ್ಲಿ ಓದು, ಬರವಣಿಗೆ ಆಸಕ್ತಿ ಕಡಿಮೆಯಾಗಿಲ್ಲ. ಆದರೆ, ಅವರ ಅಭಿವ್ಯಕ್ತಿ ವಾಧ್ಯಮ ಬದಲಾಗಿದೆ. ಅವರು ಸಾವಾಜಿಕ ಜಾಲತಾಣಗಳ ಮೂಲಕ ಸಾಹಿತ್ಯ, ಇತಿಹಾಸ ಹಾಗೂ ಸಂಸ್ಕೃತಿ ಬಗ್ಗೆ ಬರೆಯುತ್ತಿದ್ದಾರೆ ಎಂದು ಲೇಖಕ ಎಂ.ಜಿ. ರಂಗಸ್ವಾಮಿ ರಾಜ್ಯಪಾಲರ ಗಮನಕ್ಕೆ ತಂದರು. ಯುವ ಪೀಳಿಗೆಗೆ ಬರವಣಿಗೆಯಲ್ಲಿ ಆಸಕ್ತಿ ಇದೆಯೇ? ಸಾಂಸ್ಕೃತಿಕವಾಗಿ ಅವರ ದೃಷ್ಟಿಕೋನ ಹೇಗಿದೆ? ಎಂದು ರಾಜ್ಯಪಾಲರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಂ.ಜಿ.ರಂಗಸ್ವಾಮಿ, ಯುವಕರು ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಜಾಗತಿಕ ಸಮಸ್ಯೆ ಮತ್ತು ಭವಿಷ್ಯದ ಬಗ್ಗೆ ಅವರಿಗೆ ಕಾಳಜಿ ಇದೆ. ಅದು ಪುಸ್ತಕ ರೂಪದ ಬದಲಿಗೆ ಡಿಜಿಟಲ್ ಮತ್ತು ಮೊಬೈಲ್ ವೇದಿಕೆಗಳಿಗೆ ಸೀಮಿತವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ. ಫ್ರಾನ್ಸಿಸ್ ಬುಕಾನನ್ ಅವರ ಹಳೆಯ ಮೈಸೂರು ಪ್ರವಾಸದ ಐತಿಹಾಸಿಕ ವರದಿಗಳ ಅನುವಾದ ಕಾರ್ಯದ ಬಗ್ಗೆಯೂ ರಾಜ್ಯಪಾಲರಿಗೆ ವಾಹಿತಿ ನೀಡಿದರು. ಸಂವಾದದಲ್ಲಿ ಹಿರಿಯ ರಂಗಕರ್ಮಿ, ಹಾರ್ಮೋನಿಯಂ ವಾದಕ ಹಾಗೂ ನಾಟಕ ನಿರ್ದೇಶಕ 90 ವರ್ಷದ ಜಿ.ಡಿ. ತಿಮ್ಮಯ್ಯ ಅವರನ್ನು ರಾಜ್ಯಪಾಲರಿಗೆ ಪರಿಚಯಿಸಲಾಯಿತು. ಅವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದನ್ನು ತಿಳಿದು ರಾಜ್ಯಪಾಲರು ಸಂತಸ ವ್ಯಕ್ತಪಡಿಸಿದರು.

ಹಾಲು ಹೆಚ್ಚಳ

ಸರ್ಕಾರದ ಎನ್‌ಎಲ್‌ಎಂ ಯೋಜನೆಯಡಿ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ 250 ಹಸು ಖರೀದಿಸಲಾಗಿದೆ. ಈ ಹಿಂದೆ ದಿನಕ್ಕೆ 140-150 ಲೀಟರ್ ಇದ್ದ ಹಾಲಿನ ಸಂಗ್ರಹ ಈಗ 650 ರಿಂದ 700 ಲೀಟರ್‌ಗೆ ಏರಿಕೆಯಾಗಿದೆ. ವಾರ್ಷಿಕ 1.50 ಕೋಟಿ ರೂ.ನಿಂದ 1.75 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಹೈನುಗಾರಿಕೆ ಉಪ ಉತ್ಪನ್ನಗಳಿಂದ ಜೀವಾಮೃತ ತಯಾರಿಸುತ್ತೇವೆ ಎಂದು ಪ್ರಗತಿಪರ ಕೃಷಿಕ ಕೆ.ನರಸಿಂಹಮೂರ್ತಿ ವಾಹಿತಿ ನೀಡಿದರು.

ಸಿರಿಧಾನ್ಯ ಸಂಸ್ಕರಣೆ

ರೈತರು ಬೆಳೆದ ಸಿರಿಧಾನ್ಯ ನಾವೇ ಬೆಂಬಲ ಬೆಲೆಯಲ್ಲಿ ಖರೀದಿಸಿ ಸುವಾರು 1 ಕೋಟಿ ರೂ. ವೆಚ್ಚದ ಟಕದಲ್ಲಿ ಸಂಸ್ಕರಿಸುತ್ತಿದ್ದೇವೆ. ನಂತರ ಹೊಸಸಿರಿ ಬ್ರ್ಯಾಂಡ್ ಅಡಿ ಬೆಂಗಳೂರಿನ ವಾಲ್‌ಗಳು, ಮಳಿಗೆಗಳಿಗೆ ವಾರಾಟ ವಾಡುತ್ತಿದ್ದೇವೆ ಎಂದು ಹೊಸದುರ್ಗ ತಾಲೂಕಿನ ಶ್ರೀರಾಂಪುರದ ಸಿರಿಧಾನ್ಯ ರೈತ ಉತ್ಪಾದಕ ಸಂಸ್ಥೆಯ ಗಿರೀಶ್ ರಾಜ್ಯಪಾಲರಿಗೆ ಮಾಹಿತಿ ನೀಡಿದರು.