ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಜಿ.ಡಿ. ಮಹಾವರ್ಕರ್ ಉದ್ಘಾಟಿಸಿದರು. ಡಾ. ಮೃತ್ಯುಂಜಯ, ಎಚ್.ಎಸ್. ಮಹೇಶ್ವರಪ್ಪ, ವೀರಣ್ಣ ಸೋಮಶೇಖರ್, ಗಂಗಾಧರ್ ಚನ್ನಬಸಪ್ಪ ಹಡಪದ್, ಡಿ. ಮಮತಾ, ಎಸ್. ಶಕುಂತಲಾ, ಆರ್. ನಟೇಶ್, ರಶ್ಮಿ ಎಸ್.ಮರಡಿ, ಕೆ.ಜಿ. ಸತೀಶ್, ಪೂಜಾ ಬೆಳಕೇರಿ, ಸಾವಿತ್ರಮ್ಮ ಇತರರು ಇದ್ದರು.
- ಜಿಲ್ಲಾ ನ್ಯಾಯಾಽÃಶ ಜಿ.ಡಿ.ಮಹಾವರ್ಕರ್ ಅಭಿಮತ
- ಬಿಪಿಯಂತೆ ಕಣ್ಣುಗಳಲ್ಲಿ ನಿರ್ದಿಷ್ಟ ಒತ್ತಡವಿರುತ್ತದೆ
- ಗ್ಲುಕೋಮಾಕ್ಕೆ ತುತ್ತಾಗುವ ಸಾಧ್ಯತೆ
ಚಿತ್ರದುರ್ಗ: ಒತ್ತಡದ ನಡುವೆ ಕೆಲಸ ಮಾಡುವ ನಾವು ಆರೋಗ್ಯ ಕಾಪಾಡಿಕೊಳ್ಳವತ್ತ ಗಮನ ಹರಿಸಬೇಕಿದೆ ಎಂದು ಜಿಲ್ಲಾ ಪ್ರ ಧಾನ ಮತ್ತು ಸತ್ರ ನ್ಯಾಯಾಽÃಶ, ಜಿಲ್ಲಾ ಕಾನೂನು ಸೇವಾ ಪ್ರಾಽಕಾರದ ಅಧ್ಯಕ್ಷ ಜಿ.ಡಿ. ಮಹಾವರ್ಕರ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸ್ವಾಸ್ಥ್ಯ ಹೆಲ್ತ್ ಸಂಯುಕ್ತಾಶ್ರಯದಲ್ಲಿ ನ್ಯಾಯಾಽÃಶರು, ವಕೀಲರು ಹಾಗೂ ನ್ಯಾಯಾಂಗ ಇಲಾಖೆ ನೌಕರರಿಗೆ ನಗರದ ವಕೀಲರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಂಗ ಕ್ಷೇತ್ರದಲ್ಲಿರುವ ನ್ಯಾಯಾಽÃಶರು, ಅಽಕಾರಿ, ಸಿಬ್ಬಂದಿ ಹಾಗೂ ವಕೀಲರು ನಿರಂತರ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಮನಸ್ಸಿನ ನೆಮ್ಮದಿಗೆ ಉತ್ತಮ ಆರೋಗ್ಯ ಮುಖ್ಯ. ದೇಹ ಸದೃಢವಾಗಿಲ್ಲದಿದ್ದರೆ ಬದುಕು ಅತ್ಯಂತ ಕಷ್ಟಕರವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದೆಡೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ವಕೀಲರ ಸಂಘ ಈ ತಪಾಸಣೆ ಶಿಬಿರ ಏರ್ಪಡಿಸಿರುವುದು ಶ್ಲಾಘ ನೀಯ. ಎಲ್ಲರೂ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಣ್ಣಿನ ತಜ್ಞ ಡಾ. ಮೃತ್ಯುಂಜಯ ಮಾತನಾಡಿ, ಕಣ್ಣುಗಳ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಸಮಗ್ರ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ. ರಕ್ತದೊತ್ತಡದಂತೆ ಕಣ್ಣಿನಲ್ಲೂ ನಿರ್ದಿಷ್ಟ ಒತ್ತಡವಿರುತ್ತದೆ. ಇದನ್ನು ಇಂಟ್ರಾ ಅಕ್ಯುಲರ್ ಪ್ರೆಶರ್ ಎನ್ನಲಾಗುತ್ತದೆ.
ಕಣ್ಣುಗಳಲ್ಲಿ ಈ ಒತ್ತಡ ಹೆಚ್ಚಾದಾಗ, ಒಳಗಿನ ದ್ರವದ ಸಮತೋಲನ ತಪ್ಪಿ, ಕಣ್ಣಿನ ನರಗಳು ಹಾನಿಗೊಳಗಾಗಿ ಗ್ಲುಕೋಮಾಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ನಿಯಮಿತ ತಪಾಸಣೆಯಿಂದ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದರು.
ಮಧುಮೇಹ ಹೆಚ್ಚಳದಿಂದಲೂ ಕಣ್ಣಿನ ನರಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದರೆ ಕಣ್ಣಿನ ನರಗಳಲ್ಲಿ ರಕ್ತ ಸೋರಿಕೆಯಾಗಿ ಡಯಾಬಿಟಿಕ್ ರೆಟಿನೋಪತಿ ಮತ್ತು ರೆಟಿನಾಲ್ ಡಿಟ್ಯಾಚ್‌ಮೆಂಟ್ ನಂಥ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ.
ಮೊಬೈಲ್, ಕಂಪ್ಯೂಟರ್ ಅತಿಯಾದ ಬಳಕೆಯಿಂದ ಕಣ್ಣುಗಳು ಒಣಗುವ ಡ್ರÊೆ ಐಸ್/ಕಂಪ್ಯೂಟರ್‌ವಿಷನ್ ಸಿಂಡ್ರೊಮ್ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಣ್ಣ ಮಕ್ಕಳಿಗೂ ಮೈನಸ್ ಸಂಖ್ಯೆ ಕನ್ನಡಕ ಅನಿವಾರ್ಯವಾಗುತ್ತಿವೆ. ಸೂಕ್ತ ಸಮಯದಲ್ಲಿ ಪರೀಕ್ಷಿಸಿ ಕನ್ನಡಕ ಬಳಸುವುದರಿಂದ ದೃಷ್ಟಿ ದೋಷ ನಿವಾರಿಸಬಹುದು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಹೇಶ್ವರಪ್ಪ ಮಾತನಾಡಿ, ಎಷ್ಟೇ ಸಂಪತ್ತು ಇದ್ದರೂ ಆರೋಗ್ಯ ಸರಿ ಇಲ್ಲದಿದ್ದರೆ ಯಾವುದನ್ನೂ ಅನುಭವಿಸಲು ಸಾಧ್ಯವಾಗದು. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ನ್ಯಾಯಾಽÃಶರಾದ ವೀರಣ್ಣ ಸೋಮಶೇಖರ್, ಗಂಗಾಧರ್ ಚನ್ನಬಸಪ್ಪ ಹಡಪದ್, ಡಿ. ಮಮತಾ, ಎಸ್. ಶಕುಂತಲಾ, ಆರ್. ನಟೇಶ್, ರಶ್ಮಿ ಎಸ್. ಮರಡಿ, ಕೆ.ಜಿ. ಸತೀಶ್, ಪೂಜಾಬೆಳಕೇರಿ, ಸಂಘದ ಉಪಾಧ್ಯಕ್ಷೆ ಸಾವಿತ್ರಮ್ಮ, ಪ್ರಧಾನ ಕಾರ್ಯದರ್ಶಿ ಎಚ್.ಒ. ಜಗದೀಶ್ ಗುಂಡೇರಿ, ಖಜಾಂಚಿ ಸೋಮಶೇಖರ್ ಮತ್ತಿತರರು, ಪದಾಽಕಾರಿಗಳು, ವಕೀಲರು, ನ್ಯಾಯಾಂಗ ಇಲಾಖೆ ನೌಕರರು ಇದ್ದರು.