ಚಿತ್ರದುರ್ಗದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣÉ ಸಮಿತಿ ಸಭೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ಕೆ.ಎಂ. ಮೇಘರಾಜ್,ಎಚ್.ಜಿ.ಅಣ್ಣಪ್ಪ,ಎಸ್.ಅವಿನಾಶ್,ನಾಗರಾಜಯ್ಯ,ಜಿ.ಆರ್.ನಾಗರಾಜ್ ಇತರರು ಇದ್ದರು.
- ಅಽಕಾರಿಗಳಿಗೆ ಎಡಿಸಿ ನಿರ್ದೇಶನ
- ನೀರು ಹರಿವು ದಾರಿಗಳ ಸ್ವಚ್ಛತೆಗೆ ತಾಕೀತು
- ಕೋಡಿ ಎತ್ತರದಲ್ಲಿ ಬದಲಾವಣÉ ಬೇಡ
ಚಿತ್ರದುರ್ಗ: ಕೆರೆಗಳ ಒತ್ತುವರಿ ತಡೆಗೆ ಜಿಯೋ -Éನ್ಸಿಂಗ್ ಹಾಗೂ ವಿಸ್ತೀರ್ಣದ ಮಾಹಿತಿ -Àಲಕಗಳನ್ನು ಅಳವಡಿಸುವಂತೆ ಅಪರ ಜಿಲ್ಲಾಽಕಾರಿ ಬಿ.ಟಿ. ಕುಮಾರಸ್ವಾಮಿ ಅಽಕಾರಿಗಳಿಗೆ ಸೂಚಿಸಿದರು.
ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳಿಗೆ ಕೆರೆಗಳ ನಿರ್ವಹಣÉ ಮತ್ತು ಸಂರಕ್ಷಣೆ ಹೊಣÉ ವಹಿಸುವ ಕುರಿತಂತೆ ಮಂಗಳವಾರ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣೆ ಸಮಿತಿ ಸಭೆಯಲ್ಲಿ ಮಾತನಾಡಿ,
ಒತ್ತುವರಿಯಿಂದ ಜಿಲ್ಲೆಯಲ್ಲಿ ಕೆರೆಗಳ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಕೆರೆಗಳ ಮೂಲ ಸ್ವರೂಪ ಉಳಿಸಲು ಅಽಕಾರಿಗಳು ಮತ್ತು ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕೆರೆಗಳ ಸರ್ವೆ ಮಾಡಿಸಿ ಗಡಿ ಗುರುತಿಸಬೇಕು. ಕೆರೆ ಗಡಿಭಾಗದಲ್ಲಿ ದೊಡ್ಡ ಮಟ್ಟದ ಕಂದಕಗಳನ್ನು ತೋಡಿ, ಅಲ್ಲಿ ಸಸಿಗಳನ್ನು ನೆಡುವ ಮೂಲಕ ಜಿಯೋ -Éನ್ಸಿಂಗ್ ಮಾಡಬೇಕು. ಇದರಿಂದ ಭವಿಷ್ಯದಲ್ಲಿ ಒತ್ತುವರಿ ತಡೆಯಬಹುದು. ಪ್ರತಿ ಕೆರೆಯ ಗಡಿ ಮತ್ತು ವಿಸ್ತೀರ್ಣದ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಇರಬೇಕು.
ಈ ನಿಟ್ಟಿನಲ್ಲಿ ಕೆರೆಯ ಮಾಲೀಕತ್ವ, ಸರ್ವೆನಂಬರ್, ನಿಖರ ವಿಸ್ತೀರ್ಣ ಮತ್ತು ಸಮುದ್ರ ಮಟ್ಟದಿಂದ ಇರುವ ಎತ್ತರದ ಮಾಹಿತಿ ಯೊಂದಿಗೆ ನಾಮ -Àಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಕೆರೆಗೆ ಹಾನಿ ಮಾಡಿದರೆ ಅಥವಾ ಅಕ್ರಮ ಎಸಗಿದರೆ ಕಾ ನೂನು ಪ್ರಕಾರ ಎಂತಹ ಶಿಕ್ಷೆಯಾಗುತ್ತದೆ ಎಂಬ ಮಾಹಿತಿಯೂ -Àಲಕದಲ್ಲಿರಬೇಕು ಎಂದು ತಿಳಿಸಿದರು.
ಕೆರೆ ಕೋಡಿಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ಕೋಡಿ ಎತ್ತರದಲ್ಲಿ ಬದಲಾವಣÉ ಮಾಡಬಾರದು. ಕೆರೆಗೆ ನೀರು ಹರಿದು ಬರುವ ಮೂಲಗಳಾದ ರಾಜಕಾಲುವೆ ಮತ್ತು ಹರಿವಿನ ಹಾದಿಗಳು ಗಿಡಗಂಟೆಗಳಿAದ ಮುಚ್ಚಿಹೋಗಿವೆ. ಇದರಿಂದ ಮಳೆಗಾಲ ದಲ್ಲಿ ನೀರು ಸರಾಗವಾಗಿ ಹರಿಯದೆ ಹೊಲಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿದೆ.
ಕನಿಷ್ಠ ೨-೩ ವರ್ಷಗಳಿಗೆ ಒಮ್ಮೆಯಾದರೂ ಹರಿವಿನ ಹಾದಿಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಕೆರೆ ಸೇರುವಂತೆ ವ್ಯವಸ್ಥೆ ಮಾಡಬೇಕು. ಕೆರೆ ಕೇವಲ ಒಂದು ಇಲಾಖೆ ಸ್ವತ್ತಲ್ಲ, ಅದು ಸಾರ್ವಜನಿಕ ಸ್ವತ್ತು. ಸಣ್ಣ ನೀರಾವರಿ ಇಲಾಖೆ, ಜಿಪಂ ಮತ್ತು ಕಂ ದಾಯ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕೆರೆಗಳನ್ನು ರಕ್ಷಿಸಬೇಕು ಎಂದರು.
ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ರೈತರು ತಮ್ಮ ಜಮೀನುಗಳಿಗೆ ಮಣ್ಣು ಸಾಗಿಸಲು ಕೆರೆ ಸಂಘಗಳ ಸಹ ಭಾಗಿತ್ವದಲ್ಲಿ ಕೆಲಸ ಮಾಡಬೇಕು. ಕೆರೆಗಳಲ್ಲಿ ಹೂಳೆತ್ತುವ ನೆಪದಲ್ಲಿ ಜೆಸಿಬಿ ಬಳಸಿ ಆಳವಾಗಿ ಮಣ್ಣು ತೆಗೆಯುವುದು ಅವೈಜ್ಞಾ ನಿಕ. ನಿಯಮಾನುಸಾರ ಹೂಳೆತ್ತಲು ಅವಕಾಶವಿದೆ. ಹೂಳೆತ್ತುವುದನ್ನು ಅಽಕಾರಿಗಳು ನಿರಂತರವಾಗಿ ಮೇಲ್ವಿಚಾರಣÉ ಮಾ ಡಬೇಕು.
ಕÊಷಿ ಉದ್ದೇಶಕ್ಕೆ ಮಾತ್ರ ಹೂಳು ತೆಗೆಯಲು ಆದ್ಯತೆ ನೀಡಬೇಕು. ವಾಣಿಜ್ಯ ಉದ್ದೇಶಕ್ಕೆ ಮರಳು, ಗ್ರಾವೆಲ್ ತೆಗೆಯುವುದಕ್ಕೆ ಅವಕಾಶ ನೀಡಬಾರದು ಎಂದು ಎಡಿಸಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಣ್ಣ ನೀರಾವರಿ ಇಲಾಖೆ ಇಇ ಕೆ.ಎಂ. ಮೇಘರಾಜ್, ಎಚ್.ಜಿ. ಅಣ್ಣಪ್ಪ, ಪಂ. ರಾಜ್ ಇಲಾಖೆ ಇಇ ಎಸ್. ಅವಿನಾಶ್, ಕುಡಾ ಆಯುಕ್ತ ಸೋಮಶೇಖರ್, ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ನಾಗರಾಜಯ್ಯ, ಕಾರ್ಯದರ್ಶಿ ಜಿ.ಆರ್. ನಾಗರಾಜ್ ಇತರರು ಇದ್ದರು.
ಭವಿಷ್ಯದಲ್ಲಿ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಜಲಮೂಲಗಳ ರಕ್ಷಣೆ ಅತಿಮುಖ್ಯ. ಅಽಕಾರಿಗಳು ಕೆರೆಗಳ ಅಭಿವೃದ್ಧಿಗೆ ಅಗತ್ಯವಿರುವ ಅಂದಾಜು ಪಟ್ಟಿ ಸಿದ್ಧಪಡಿಸಿ, ಜಿಲ್ಲಾ ಖನಿಜ ಪ್ರತಿಷ್ಠಾನ ಅಥವಾ ಲಭ್ಯವಿರುವ ಇತರ ಅನುದಾನಗಳ ಮೂಲಕ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಬೇಕು. ಕೆರೆಗಳ ಮೀನು ಹರಾಜು ಮತ್ತು ನಿರ್ವಹಣÉಗೆ ಸಂಬAಽಸಿದAತೆ ಸಂಘಸAಸ್ಥೆಗಳು ಸಲ್ಲಿಸಿರುವ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.