ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ `ಲಿಂಗ ಆಧಾರಿತ ಹಿಂಸಾಚಾರಗಳ ವಿರುದ್ಧ ಹೋರಾಡುವುದು, ಸುರಕ್ಷತೆ ಮತ್ತು ನ್ಯಾಯಕ್ಕಾಗಿ ತಂತ್ರಗಳು' ಕುರಿತ ಒಂದು ದಿನದ ರಾಷ್ಟಿçÃಯ ಸಮ್ಮೇಳನವನ್ನು ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ. ಬಸವರಾಜು ಉದ್ಘಾಟಿಸಿದರು. ರಾಜ್ಯಸಭೆ ಮಾಜಿ ಸದಸ್ಯ ಎಚ್. ಹನುಂತಪ್ಪ, ಡಿ.ಕೆ. ಶೀಲಾ, ಡಾ. ಎ.ಎಸ್. ಮಧುರ, ಪ್ರೊ.ಎಂ.ಎಸ್.ಸುಧಾದೇವಿ ಇತರರು ಇದ್ದರು.
- ಕಾನೂನು ವಿಶ್ವವಿದ್ಯಾಲಯದ ಕುಲಪತಿ ಕಳವಳ
- ಸಮಾನತೆ, ನ್ಯಾಯಕ್ಕಾಗಿ ಅಗತ್ಯವಿದೆ ಹೋರಾಟ
- ಕರ್ನಾಟಕ ರಾಜ್ಯಕಾನೂನು ವಿಶ್ವವಿದ್ಯಾಲಯ
ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಡುಗೆಯಾಗಿ ಕೊಟ್ಟಿರುವ ಸಂವಿಧಾನ ಜಾರಿಯಾಗಿ ೭೬ ವರ್ಷಗಳಾದರೂ ನ ಮ್ಮ ಸಮಾಜದಲ್ಲಿ ಇನ್ನೂ ಲಿಂಗ ತಾರತಮ್ಯ ಮುಂದುವರಿದಿದೆ ಎಂದು ಹುಬ್ಬಳಿ ಕರ್ನಾಟಕ ರಾಜ್ಯಕಾನೂನು ವಿಶ್ವವಿದ್ಯಾಲ ಯದ ಕುಲಪತಿ ಪ್ರೊ.ಸಿ. ಬಸವರಾಜು ಕಳವಳ ವ್ಯಕ್ತಪಡಿಸಿದರು.
ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ`ಲಿಂಗ ಆಧಾರಿತ ಹಿಂಸಾಚಾರಗಳ ವಿರುದ್ಧ ಹೋರಾಡು ವುದು, ಸುರಕ್ಷತೆ ಮತ್ತು ನ್ಯಾಯಕ್ಕಾಗಿ ತಂತ್ರಗಳು' ಕುರಿತ ಒಂದು ದಿನದ ರಾಷ್ಟಿçÃಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ದರು.
ನಮ್ಮಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿರುವುದರ ಕುರಿತು ಅಂತಾರಾಷ್ಟಿçÃಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಸಂವಿಧಾನ ಮತ್ತು ಕಾನೂನುಗಳಿದ್ದರೂ ಪಕ್ಷಪಾತ ಹೆಚ್ಚಾಗಿದೆ.
ಎಲ್ಲರೂ ಸಮಾನರೆಂದು ಸಂವಿಧಾನ ಹೇಳಿದ್ದರೂ ಸಮಾನತೆ ಕಾಣುತ್ತಿಲ್ಲ. ಸಮಾನತೆ, ಮಹಿಳೆ ಮತ್ತು ಮಕ್ಕಳಿಗೆ ನ್ಯಾಯ ಕೂಡಿ ಸಲು ಹೋರಾಟದ ಅಗತ್ಯವಿದೆ. ಸಂವಿಧಾನ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕಿದೆ. ಮಹಿಳೆಯರ ರಕ್ಷಣೆ ನಮ್ಮೆಲ್ಲರ ಹೊಣೆ. ಲಿಂಗ ತಾರತಮ್ಯ ತಡೆಗೆ ಮುಂದಾಗಬೇಕಿದೆ ಎಂದು ಬಸವರಾಜು ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಶ್ಚಿಮ ಬಂಗಾಳದ ರಾಷ್ಟೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಪ್ರೊ.ಎನ್.ಎಸ್. ಶ್ರೀನಿವಾಸಲು ಮಾತನಾಡಿ, ಈಗ ಮಹಿಳೆ ತನ್ನಲ್ಲಿರುವ ಸಾಮರ್ಥ್ಯದಿಂದ ಪುರುಷನಿಗಿಂತ ಒಂದು ಹೆಜ್ಜೆ ಮುಂದಿದ್ದಾಳೆ. ಉನ್ನತ ಸ್ಥಾನಕ್ಕೇರು ತ್ತಿದ್ದರೂ ಇನ್ನೂ ಇರುವ ಲಿಂಗ ತಾರತಮ್ಯದ ವಿರುದ್ಧ ಜಾಗೃತಿ ಮೂಡಿಸಬೇಕಿದೆ. ಮಹಿಳೆಯರ ಮೂಲ ಹಕ್ಕುಗಳ ಉಲ್ಲಂಘನೆ ತಡೆಯದಿದ್ದರೆ ಮಹಿಳಾ ಸಬಲೀಕರಣ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸರಸ್ವತಿ ಎಜುಕೇಶನ್ ಸೊಸೈಟಿ ಅಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಿ.ಕೆ.ಶೀಲಾ, ಮೈಸೂರು ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಎ.ಎಸ್. ಮಧುರ ಇದ್ದರು. ಪ್ರಾ ಚಾರ್ಯೆ ಪ್ರೊ.ಎಂ.ಎಸ್. ಸುಧಾದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೊಳೆನರಸೀಪುರ ಸರ್ಕಾರಿ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಎಂ.ಕೆ. ಮಾಟೊಳ್ಳಿ, ಕೆಎಲ್‌ಇ ಸೊಸೈಟಿ ಕಾನೂನು ಕಾಲೇಜು ಪ್ರಾಚಾರ್ಯ ಪ್ರೊ.ಜೆ.ಎಂ. ಮಲ್ಲಿಕಾರ್ಜುನಯ್ಯ, ಚಿತ್ರದುರ್ಗ ವಿಜ್ಞಾನ -Ëಂಡೇಷನ್ ಅಧ್ಯಕ್ಷ ಡಾ.ಜಿ.ಎನ್. ಮಲ್ಲಿಕಾ ರ್ಜನಪ್ಪ, ಶಿವಮೊಗ್ಗದ ಸಿಬಿಆರ್ ನ್ಯಾಷನಲ್ ಕಾನೂನು ಕಾಲೇಜಿನ ಡಾ.ಜಿ.ಎಸ್.ಯೋಗಿಶ್, ದಾವಣಗೆರೆ ಜಿಎಂ ವಿವಿ ಕಾನೂನು ಕಾಲೇಜು ನಿರ್ದೇಶಕ ಬಿ.ಎಸ್. ರೆಡ್ಡಿ, ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಟಿ.ಆರ್. ಮಾರುತಿ ಉಪನ್ಯಾಸ ನೀಡಿದರು.
ಸೃಷ್ಟಿ ತಂಡದವರು ಪ್ರಾರ್ಥಿಸಿದರು. ಪ್ರೊ.ಎನ್.ಡಿ. ಗೌಡ ಸ್ವಾಗತಿಸಿದರು. ಪ್ರೊ. ರಮೇಶ್ ಪ್ರತಿಜ್ಞಾವಿಽ ಭೋಽಸಿದರು. ಅಭಿನ ಯತ್ರಿ ವಂದಿಸಿದರು.