ಚಿತ್ರದುರ್ಗದ ಆರ್‌ಟಿಒ ಕಚೇರಿಯಲ್ಲಿರುವ ಸಿಮ್ಯುಲೇಟರ್ 
ಚಿತ್ರದುರ್ಗ

ಡ್ರೆÊವಿಂಗ್ ಟ್ರ‍್ಯಾಕ್‌ಗೆ ಅನುದಾನದ ಬ್ರೇಕ್!

ನನೆಗುದಿಗೆ ಬಿದ್ದ ಆರ್‌ಟಿಒ ಪರೀಕ್ಷಾ ಪಥ

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ೭.೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಹತ್ವಾಕಾಂಕ್ಷೆಯ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ (ಅ್ಠಠಿಟಞZಠಿಛಿb ಈ್ಟಜಿqಜ್ಞಿಜ Sಛಿoಠಿ S್ಟZ್ಚh) ಕಾಮಗಾರಿ ಅನುದಾನದ ಕೊರತೆಯಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ.

ಕಚೇರಿ ಆವರಣದ ೪.೩೪ ಎಕರೆ ವಿಸ್ತೀರ್ಣದಲ್ಲಿ ಈ ಸುಸಜ್ಜಿತ ಪರೀಕ್ಷಾ ಪಥ ನಿರ್ಮಿಸಲು ರಾಜ್ಯ ಸರ್ಕಾರ ೨೦೨೫ರ ಜೂನ್‌ನಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. ಆರಂಭಿಕ ಹಂತವಾಗಿ ೨೫ ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ, ನಿರ್ಮಾಣದ ಹೊಣೆಯನ್ನು ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವಹಿಸಲಾಗಿತ್ತು. ಆದರೆ, ಯೋಜನೆಗೆ ಮಂಜೂರಾತಿ ದೊರೆತು ಒಂದೂವರೆ ವರ್ಷ ಕಳೆದರೂ ಅಗತ್ಯವಿರುವ ಪೂರ್ಣ ಅನುದಾನ ಬಿಡುಗಡೆಯಾಗದ ಕಾರಣ ಪರೀಕ್ಷಾ ಪಥದ ಹಾದಿ ಸುಗಮವಾಗಿಲ್ಲ.

ಸರ್ಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ಇಲಾಖೆಗಳಲ್ಲಿ ಒಂದಾದ ಸಾರಿಗೆ ಇಲಾಖೆಯ ಯೋಜನೆಗೇ ಅನುದಾನದ ಬರ ಕಾಡಿರುವುದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ. ಸಂಬAಧಪಟ್ಟ ಮೇಲಽಕಾರಿಗಳು ಹಾಗೂ ಜನಪ್ರತಿನಿಽಗಳು ತಕ್ಷಣವೇ ಇತ್ತ ಗಮನಹರಿಸಿ, ಬಾಕಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಪಥದಲ್ಲಿ ಏನೆಲ್ಲಾ ಸೌಲಭ್ಯಗಳಿರಲಿವೆ?

ದ್ವಿಚಕ್ರ ವಾಹನ ಹಾಗೂ ಲಘು ಮೋಟಾರು ವಾಹನ ಚಾಲಕರ ಚಾಲನಾ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ಚಾಲನಾ ಪರವಾನಗಿ ನೀಡಲು ಈ ಪಥವನ್ನು ವಿನ್ಯಾಸಗೊಳಿಸಲಾಗಿದೆ. ಕೇವಲ ಡ್ರೆÊವಿಂಗ್ ಟ್ರಾ÷್ಯಕ್ ನಿರ್ಮಾಣಕ್ಕೇ ೫ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಉಳಿದ ಅನುದಾನದಲ್ಲಿ ಈ ಕೆಳಗಿನ ಮೂಲಸೌಕರ್ಯಗಳನ್ನು ಕೈಗೆತ್ತಿಕೊಳ್ಳಬೇಕಿದೆ

* ಪ್ರವೇಶ ಮತ್ತು ನಿರ್ಗಮನ ಮಾರ್ಗ, ಸುಸಜ್ಜಿತ ಕಾಂಪೌAಡ್ ಹಾಗೂ ಶೌಚಗೃಹ.

* ಪರವಾನಗಿ ಪಡೆಯಲು ಬರುವ ಅಭ್ಯರ್ಥಿಗಳಿಗಾಗಿ ಸುಸಜ್ಜಿತ ಶೆಲ್ಟರ್ ಹಾಗೂ ಬೇ ಪಾರ್ಕಿಂಗ್.

* ಎಲ್‌ಎಂವಿ ೮ ಕರ್ವ್, ಎಸ್ ಕರ್ವ್, ರಿವರ್ಸ್ ಪಾರ್ಕಿಂಗ್, ೩ ರಿವರ್ಸ್ ಪಾಯಿಂಟ್ ಹಾಗೂ ಕಂಟ್ರೋಲ್ ರೂಂ.

ಎಟಿಎಸ್ ಕೇಂದ್ರಕ್ಕೂ ಜಾಗದ ಕೊರತೆ, ನಿರ್ಲಕ್ಷ÷್ಯ!

ಲಘು ಹಾಗೂ ಭಾರಿ ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ನೀಡುವ ಆಟೋಮೆಟೆಡ್ ಟೆಸ್ಟಿಂಗ್ ಸ್ಟೇಷನ್ ಸೆಂಟರ್ (ಎಟಿ ಎಸ್) ಹಾಗೂ ಭಾರಿ ವಾಹನಗಳ ಚಾಲನಾ ಪರೀಕ್ಷಾ ಪಥ ನಿರ್ಮಾಣಕ್ಕೆ ನಗರದ ಹೊರವಲಯದಲ್ಲಿ ಅಂದಾಜು ೧೦ ಎಕರೆ ಜಾಗದ ಅಗತ್ಯವಿದೆ. ಆದರೆ, ಸಮೀಪದಲ್ಲಿ ಜಮೀನು ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ತಿಳಿಸಿದೆ ಎನ್ನಲಾಗಿದೆ. ಸಾರಿಗೆ ಇಲಾಖೆ ಅಽಕಾರಿಗಳು ಸಚಿವರು, ಶಾಸಕರು ಹಾಗೂ ಜಿಲ್ಲಾಽಕಾರಿಗಳ ಗಮನ ಸೆಳೆದು ಸೂಕ್ತ ಜಮೀನು ಮಂಜೂರು ಮಾಡಿಸಿಕೊಳ್ಳಲು ಮುಂದಾಗಬೇಕಿದೆ.

ಬಾಕ್ಸ್

ಸಿಮ್ಯುಲೇಟರ್ ಕೇಂದ್ರದಲ್ಲಿ ನಿರಂತರ ಪರೀಕ್ಷೆ

ಎಲ್‌ಎಂವಿ(ಕಾರು) ಚಾಲನಾ ಪರವಾನಗಿ ಪಡೆಯುವ ಅಭ್ಯರ್ಥಿಗಳ ಸಾಮರ್ಥ್ಯ ಪರೀಕ್ಷಿಸಲು ಚಿತ್ರದುರ್ಗದ ಆರ್‌ಟಿಒ ಕಚೇರಿಯಲ್ಲಿರುವ ಗಣಕೀಕೃತ ಚಾಲನಾ ಪರೀಕ್ಷಾ ಕೇಂದ್ರ (ಸಿಮ್ಯುಲೇಟರ್) ಕಳೆದ ಜನವರಿಯಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಬಳಿಕ ೨೦೨೪ರಲ್ಲಿ ಸ್ಥಗಿತಗೊಂಡಿದ್ದ ಈ ಕೇಂದ್ರ ಮತ್ತೆ ಚಾಲನೆಗೊಂಡಿದ್ದು, ನಿತ್ಯ ಸರಾಸರಿ ಡಿಎಲ್ ಬಯಸಿ ಬರುವ ಅಭ್ಯರ್ಥಿಗಳಿಗೆ ಇಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಏನಿದು ಗಣಕೀಕೃತ ಸಿಮ್ಯುಲೇಟರ್ ಕೇಂದ್ರ?

ಗಣಕೀಕೃತ ಸಿಮ್ಯುಲೇಟರ್ ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸ್ಥಾಪಿಸಲಾಗಿರುವ ಒಂದು ಆಧುನಿಕ ಕೃತಕ ಚಾಲನಾ ಪರೀಕ್ಷಾ ವ್ಯವಸ್ಥೆಯಾಗಿದೆ. ಚಾಲನಾ ಪರವಾನಗಿ ಪಡೆಯಲು ಬರುವ ಅಭ್ಯರ್ಥಿಗಳು ನೇರವಾಗಿ ರಸ್ತೆಯಲ್ಲಿ ವಾಹನ ಚಲಾಯಿಸುವ ಮುನ್ನ, ಕಂಪ್ಯೂಟರ್ ಪರದೆಯ ಮುಂದೆ ಕುಳಿತು ವಾಹನ ಚಾಲನೆಯ ಪ್ರಾಥಮಿಕ ಕೌಶಲ ಮತ್ತು ಸಂಚಾರ ನಿಯಮಗಳ ಅರಿವನ್ನು ಪರೀಕ್ಷಿಸಿಕೊಳ್ಳುವ ವಿಧಾನವಿದು.

ಪ್ರಮುಖ ವೈಶಿಷ್ಟ್ಯಗಳು ಹಾಗೂ ಕಾರ್ಯನಿರ್ವಹಣೆ

* ನೈಜ ಕಾರಿನಂತಹ ವಿನ್ಯಾಸ: ಇದು ಅಸಲಿ ಕಾರಿನ ಒಳಭಾಗದಂತೆಯೇ ಇರುತ್ತದೆ. ಇದರಲ್ಲಿ ಸ್ಟೀರಿಂಗ್, ಕ್ಲಚ್, ಬ್ರೇಕ್, ಆಕ್ಸಿಲೇಟರ್, ಗೇರ್ ಲಿವರ್, ಹ್ಯಾಂಡ್ ಬ್ರೇಕ್, ಇಂಡಿಕೇಟರ್ ಹಾಗೂ ಸೈಡ್ ಮಿರರ್‌ಗಳಿರುತ್ತವೆ. ಮುಂಭಾಗದಲ್ಲಿ ರಸ್ತೆಯ ದೃಶ್ಯಗಳನ್ನು ತೋರಿಸುವ ದೊಡ್ಡ ಕಂಪ್ಯೂಟರ್ ಪರದೆಗಳಿರುತ್ತವೆ.

* ಕೃತಕ ಸಂಚಾರ ಪರಿಸರ : ಕಂಪ್ಯೂಟರ್ ತಂತ್ರಾAಶದ ಮೂಲಕ ನಗರದ ದಟ್ಟಣೆಯ ರಸ್ತೆಗಳು, ಹೆದ್ದಾರಿಗಳು, ತಿರುವುಗಳು, ಪಾದಚಾರಿ ಮಾರ್ಗ, ಟ್ರಾಫಿಕ್ ಸಿಗ್ನಲ್‌ಗಳು, ರಾತ್ರಿ ವೇಳೆಯ ಚಾಲನೆ ಹಾಗೂ ಮಳೆಯಂತಹ ಪ್ರತಿಕೂಲ ಹವಾಮಾನದ ಸನ್ನಿವೇಶಗಳನ್ನು ಪರದೆಯ ಮೇಲೆ ಸೃಷ್ಟಿಸಲಾಗುತ್ತದೆ.

* ಸ್ವಯಂಚಾಲಿತ ವೌಲ್ಯಮಾಪನ: ಅಭ್ಯರ್ಥಿಯು ಚಾಲನೆ ಮಾಡುವಾಗ ವೇಗದ ನಿಯಂತ್ರಣ, ಟ್ರಾಫಿಕ್ ಸಿಗ್ನಲ್ ಪಾಲನೆ, ಲೇನ್ ಶಿಸ್ತು ಹಾಗೂ ಕ್ಲಚ್-ಬ್ರೇಕ್ ಬಳಕೆಯನ್ನು ಕಂಪ್ಯೂಟರ್ ಸೆನ್ಸಾರ್‌ಗಳು ನಿಖರವಾಗಿ ದಾಖಲಿಸಿಕೊಳ್ಳುತ್ತವೆ. ಮಾನವ ಹಸ್ತಕ್ಷೇಪವಿಲ್ಲದೆ ಅಭ್ಯರ್ಥಿಯು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬ ಫಲಿತಾಂಶವನ್ನು ಕಂಪ್ಯೂಟರ್ ಸ್ವಯಂಚಾಲಿತವಾಗಿ ನೀಡುತ್ತದೆ.

* ಅಪಘಾತ ರಹಿತ ಸುರಕ್ಷಿತ ಪರೀಕ್ಷೆ: ಹೊಸದಾಗಿ ಚಾಲನೆ ಕಲಿಯುವವರು ಅಸಲಿ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸಂಭವಿಸಬಹುದಾದ ಅಪಘಾತಗಳು ಮತ್ತು ವಾಹನ ಹಾನಿಯನ್ನು ತಪ್ಪಿಸಿ, ಸುರಕ್ಷಿತವಾಗಿ ಅವರ ಚಾಲನಾ ಸಾಮರ್ಥ್ಯವನ್ನು ಅಳೆಯಲು ಇದು ನೆರವಾಗುತ್ತದೆ.