ಚಿತ್ರದುರ್ಗದಲ್ಲಿ ಏರ್ಪಡಿಸಿರುವ ಸ್ವದೇಶಿ ಮೇಳದಲ್ಲಿ ಶನಿವಾರ ತಾರಸಿ ತೋಟ ತರಬೇತಿ ಕರ‍್ಯಕ್ರಮದಲ್ಲಿ ಎಂಎಲ್‌ಸಿ ಕೆ.ಎಸ್.ನ ವೀನ್,ಡಾ.ಶಾಂತಭಟ್,ರೀನಾವೀರಭದ್ರಪ್ಪ,ನಾಗರಾಜ್‌ಬೇದ್ರೆ ಇದ್ದರು.  
ಚಿತ್ರದುರ್ಗ

ಪ್ರತಿ ಮನೆಯಲ್ಲೂ ಕೈ ತೋಟವಿದ್ದರೆ ಶುದ್ಧ ತರಕಾರಿ ಲಭ್ಯ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯದ ಮೇಲೆ ದುಷ್ಪರಿಣಾಮ
  • ತಂತ್ರಜ್ಞಾನ ಬಳಕೆ
  • ಶುದ್ಧ ತರಕಾರಿ
ಚಿತ್ರದುರ್ಗ: ಹಿಂದೆ ಅಗತ್ಯ ತರಕಾರಿಗಳನ್ನು ಮನೆಯ ಕೈ ತೋಟದಲ್ಲೇ ಬೆಳೆಯುವ ಮೂಲಕ ನಮ್ಮ ಆರೋಗ್ಯ ಕಾಪಾಡಿ ಕೊಳ್ಳಲಾಗುತಿತ್ತು. ಆದರೆ ಇಂದು ಎಲ್ಲವನ್ನೂ ಮಾರುಕಟ್ಟೆಯಿಂದ ಖರೀದಿಸುತ್ತಿರುವುದರಿಂದಾಗಿ ಆರೋಗ್ಯದ ಮೇಲೆ ದುಷ್ಪ ರಿಣಾಮ ಉಂಟಾಗುತ್ತಿದೆ ಎಂದು ದಾವಣಗೆರೆ ಪರಿವರ್ತನ ವೇದಿಕೆಯ ಕರ‍್ಯಕರ್ತೆ ಡಾ.ಶಾಂತಭಟ್ ಹೇಳಿದರು.
ಸ್ವದೇಶಿ ಜಾಗರಣಮಂಚ್ ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಸ್ವದೇಶಿ ಮೇಳದ ೪ನೇ ದಿನ ಶನಿವಾರ ತಾರಸಿ ತೋಟ ತರಬೇತಿ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಕೈತೋಟದಿಂದ ಶುದ್ಧ ತರಕಾರಿ ಬೆಳೆದು ಉಪ ಯೋಗಿಸ ಬೇಕಿದೆ. ಉತ್ತಮ ಪರಿಸರಕ್ಕಾಗಿ ಜನರನ್ನು ಜಾಗೃತಗೊಳಿಸ ಬೇಕಿದೆ. ನಾವಿಂದು ಸೋಮಾರಿಗಳಾಗುತ್ತಿದ್ದೇವೆ, ಕೊಳ್ಳುಬಾಕು ಸಂಸ್ಕೃತಿ ಹೆಚ್ಚುತ್ತಿದೆ. ಅಗತ್ಯ ವಸ್ತುಗಳ ಬಳಕೆ ಮಿತವಾಗಿತ್ತು.ಆದರೆ ಇಂದು ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳ ಖರೀದಿ ನಡೆದಿದೆ.
ಹಿರಿಯರು, ಹೊಲ, ತೋಟಗಳಿಗೆ ಕರೆದುಕೊಂಡು ಹೋಗುವ ಮೂಲಕ ನಮಗೆ ಪರಿಸರ ಪರಿಚಯಿಸುತ್ತಿದ್ದರು. ಆದರೆ ಮಕ್ಕಳಲ್ಲಿ ಹಾಲು, ತರಕಾರಿಗಳ ಎಲ್ಲಿಂದ ಪೂರೈಕೆ ಆಗುತ್ತವೆ ಎಂಬುದರ ಮೂಲ ಅರಿವು ಇರುವುದಿಲ್ಲ. ಹೆಚ್ಚಿನ ಅಂಕಗಳನ್ನು ಗಳಿಸುವಂತೆ ಒತ್ತಾಯಿಸಿ ಮಕ್ಕಳನ್ನು ಆಟೋಟಗಳಿಂದ ದೂರವಿಡಲಾಗುತ್ತಿದೆ. ಹೆಚ್ಚಾದ ತಂತ್ರಜ್ಞಾನ ಬಳಕೆಯಿಂದ ಬುದ್ಧಿಗೆ ಮಂಕು ಹಿಡಿಯುತ್ತಿದೆ ಎಂದರು.
ತರಬೇತಿ ಉದ್ಘಾಟಿಸಿದ ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಬೆಳೆಗಳು ರಾಸಾಯನಿಕ ಯುಕ್ತವಾಗುತ್ತಿದ್ದು, ಇದರಿಂದಾಗಿ ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ. ತಾರಸಿಯಲ್ಲಿ ಕೈತೋಟ ಮಾಡಿ ಅಗತ್ಯ ಸೊಪ್ಪು,ತರಕಾರಿ ಬೆಳೆದು ಬಳಸಿದರೆ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದಾಗಿದೆ ಎಂದರು. ಸ್ವದೇಶಿ ಮೇಳದ ಸಂಚಾಲಕರಾದ, ರೀನಾವೀರಭದ್ರಪ್ಪ, ನಾಗರಾಜ್‌ ಬೇದ್ರೆ ಇದ್ದರು.