ಸ್ವಾತಂತ್ರ‍್ಯಹೋರಾಟಗಾರರ ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸ ಲ್ಲಿಸಲಾಯಿತು. ಒ.ನರಸಿಂಹಮೂರ್ತಿ, ಟಿ.ಚಂದ್ರಶೇಖರ್,ಜಿ.ಟಿ.ಗುರುರಾಜೇAದ್ರ,ಎನ್.ಪರಮೇಶ್ವರಪ್ಪ, ಸಿ.ಎನ್. ಗೌರಮ್ಮ ಇತರರು ಇದ್ದರು. 
ಚಿತ್ರದುರ್ಗ

ಸ್ವಾತಂತ್ರ‍್ಯ ಹೋರಾಟಗಾರರಿಂದ ದುರ್ಗದಲ್ಲಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಗೌರವಧನ ೨೦ ಸಾವಿರ ರೂ. ಹೆಚ್ಚಳಕ್ಕೆ ಆಗ್ರಹ
  • ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ
  • ವಯೋ ಸಹಜ ಅನಾರೋಗ್ಯ
ಚಿತ್ರದುರ್ಗ : ಮಾಸಿಕ ಗೌರವ ಧನವನ್ನು ೨೦ ಸಾವಿರ ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿ ರಾಜ್ಯ ಸ್ವಾತಂತ್ರ‍್ಯಹೋರಾಟಗಾರರ ಹಿತರಕ್ಷಣಾ ವೇದಿಕೆಯಡಿ ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ಉತ್ತರಾಽಕಾರಿಗಳ ಸಂಘದಿAದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಪ್ರವಾಸಿ ಮಂದಿರದಿAದ ಜಿಲ್ಲಾಽಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ವೇದಿಕೆ ಹಾಗೂ ಸಂಘದ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸ್ವಾತಂತ್ರ‍್ಯಹೋರಾಟಗಾರರ ವಯಸ್ಸು ಈಗಾಗಲೇ ೯೫ ವರ್ಷ ಮೀರಿದ್ದು, ಅವರ ಪತ್ನಿಯರಿಗೆ ಅಂದಾಜು ೮೫ ವರ್ಷ ವಯಸ್ಸಾಗಿದೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಅಂದಾಜು ೨೪೦೦ ಹೋರಾಟಗಾರರಿದ್ದಾರೆ. ಅವರಿಗೆ ಕೊಡುತ್ತಿರುವ ಗೌರವಧನ, ಔಷಧ, ಚಿಕಿತ್ಸೆ, ಆಹಾರಕ್ಕೆ ಸಾಕಾಗದೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ.
ಆದ್ದರಿಂದ ಈಗ ನೀಡುತ್ತಿರುವ ೧೦ ಸಾವಿರ ರೂ. ಗೌರವಧನವನ್ನು ೨೦ ಸಾವಿರ ರೂ.ಗೆ ಹೆಚ್ಚಿಸಬೇಕು. ಬಾಕಿ ಇರುವ ಗೌರವ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸ್ವಾತಂತ್ರ‍್ಯಹೋರಾಟಗಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಒ. ನರಸಿಂಹಮೂರ್ತಿ, ಸಹ ಸಂಚಾಲಕರಾದ ಟಿ. ಚಂದ್ರಶೇಖರ್, ಸಂಘದ ಜಿಲ್ಲಾಧ್ಯಕ್ಷ ಜಿ.ಟಿ. ಗುರುರಾಜೇಂದ್ರ, ಉಪಾಧ್ಯಕ್ಷರಾದ ಎನ್. ಪರಮೇಶ್ವರಪ್ಪ,ಸಿ.ಎನ್. ಗೌರಮ್ಮ ಇತರರು ಇದ್ದರು.