ಜಿಲ್ಲೆಯ ನರ್ಸರಿಯೊಂದರ ಸಾಂಕೇತಿಕ ಚಿತ್ರ.
- ಸಾರ್ವಜನಿಕರಿಗೆ ವಿತರಿಸಲು ಕ್ರಮ
- ಹತ್ತು ಹಲವು ತಳಿಗಳು ಲಭ್ಯ
- ಸಬ್ಸಿಡಿ ದರ
ಪ್ರಸ್ತಕ್ತ ಮಳೆಗಾಲದಲ್ಲಿ ಅರಣ್ಯಪ್ರದೇಶ, ರಸ್ತೆ ಬದಿ, ಸರ್ಕಾರಿ ಕಚೇರಿ ಆವರಣ ಇನ್ನಿತರೆಡೆಗಳಲ್ಲಿ ಸಸಿ ನೆಡಲು ಹಾಗೂ ರೈತರಿಗೆ ವಿತರಿಸಲು ಅರಣ್ಯ(ರೇಗ್ಯುಲರ್ ಮತ್ತು ಸಾಮಾಜಿಕ)ಇಲಾಖೆ ಸಜ್ಜಾಗಿದೆ.
ಇದಕ್ಕಾಗಿ ಜಿಲ್ಲೆಯ ಅರಣ್ಯ,ಸಾಮಾಜಿಕ ವಿಭಾಗದ ವಿವಿಧ ಸಸ್ಯ ಕ್ಷೇ ತ್ರಗಳಲ್ಲಿ ೭.೨೨ ಲಕ್ಕಕ್ಕೂ ಅಽಕ ಸಸಿಗಳ ಅಭಿವೃದ್ಧಿಯೊಂ ದಿಗೆ ವಿತರಣೆಗೂ ಸಿದ್ಧತೆ ನಡೆಸಿದೆ.
ಅರಣ್ಯ ಇಲಾಖೆಯಿಂದ ಸಾರ್ವಜನಿಕ ವಿತರಣೆಗೆಂದು ೯೦ ಸಾವಿರ ಹಾಗೂ ಸಾಮಾಜಿಕ ಅರಣ್ಯವಿಭಾಗದಿಂದ ೧.೧೪ ಲಕ್ಷ ವಿವಿ ಧ ತಳಿಗಳ ಸಸಿಗಳನ್ನು ಜಿಲ್ಲೆಯ ಹಲವು ನರ್ಸರಿಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದAತೆ ಅರಣ್ಯ ಇಲಾಖೆ ಅರಣ್ಯ ಸೇರಿದಂತೆ ನಾನಾ ಕಡೆ ೩.೭೪ ಲಕ್ಷ ಸಸಿಗಳನ್ನು ನೆಡಲು ಪ್ಲಾ÷್ಯ ನ್ ಮಾಡಿಕೊಂಡಿದ್ದರೆ, ಸಾಮಾಜಿಕ ಅರಣ್ಯ ವಿಭಾಗದಿಂದ ೧.೪೪ ಲಕ್ಷ ಸಸಿ ಗಳನ್ನು ನೆಡಲು ಯೋಜಿಸಲಾಗಿದೆ.
ಸಬ್ಸಿಡಿ ದರದಲ್ಲಿ ಜೂನ್ ೧ರಿಂದ ಸಾರ್ವಜನಿಕರಿಗೆ ಸಸಿ ವಿತರಣೆ ಆರಂಭವಾಗಲಿದೆ. ನೀರಾವರಿ ಸೌಲಭ್ಯವಿರುವ ರೈತರಿಗೆ ತಕ್ಷಣದಿಂದಲೇ ಸಸಿಗಳ ವಿತರಣೆಗೆ ಸಾಮಾಜಿಕ ಅರಣ್ಯವಿಭಾಗ ಮುಂದಾಗಿದೆ.
ಕಸಿ ಮಾಡಿದ ಸಸಿಗಳೂ ಲಭ್ಯ ಇವೆ. ಆದರೆ, ಇವುಗಳ ಅಭಿವೃದ್ಧಿಗೆ ತಗಲುವ ವೆಚ್ಚದ ಶೇ.೫೦ನ್ನು ರೈತರು ಭರಿಸಬೇಕಾಗುತ್ತದೆ. ರೆಗ್ಯೂಲರ್ ವ್ಯಾಪ್ತಿಯ ೬ ನರ್ಸರಿಗಳಲ್ಲಿ ೪.೩೪ ಲಕ್ಷ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ೮ ನರ್ಸರಿಗಳಲ್ಲಿ ೨.೫೮ ಲಕ್ಷ ಸಸಿ ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ರೆಗ್ಯೂಲರ್ ವಿಭಾಗದ ನರ್ಸರಿಗಳು
ಚಿತ್ರದುರ್ಗ ತಾಲೂಕಿನ ಚಂದ್ರವಳ್ಳಿ ನರ್ಸರಿ, ಹಿರಿಯೂರಿನ ಶ್ರೀರಂಗ, ಹೊಸದುರ್ಗದ ವಜ್ರ, ಚಳ್ಳಕೆರೆ- ಚಳ್ಳಕೆರೆ- ಮೊಳಕಾ ಲ್ಮೂರು-ಎಂಡಿ ಮಹಾದೇವಪುರ ಹಾಗೂ ಹೊಳಲ್ಕೆರೆಯ ಟಿ.ನುಲೇನೂರು ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗಿದೆ.
ಸಾಮಾಜಿಕ ಅರಣ್ಯವಿಭಾಗದ ನರ್ಸರಿಗಳು
ಚಿತ್ರದುರ್ಗ ತಾಲೂಕು ಐನಳ್ಳಿ ಸಸ್ಯಕ್ಷೇತ್ರ, ಹೊಳಲ್ಕೆರೆ-ಎಚ್.ಡಿ. ಕಣಿವೆ, ಹೊಸದುರ್ಗ-ಕುಂಬಾರಗಟ್ಟೆ, ಕಡವಿಗೆರೆ ವಜ್ರ, ಹಿರಿ ಯೂರು- ಮೇಟಿಕುರ್ಕೆ, ಚಳ್ಳಕೆರೆ- ಚಳ್ಳಕೆರೆ ಕಚೇರಿ ಸಸ್ಯಕ್ಷೇತ್ರ ಹಾಗೂ ಮೊಳಕಾಲ್ಮೂರು ತಾಲೂಕಿನ ಅರುಧಂತಿ(ಬಿಜಿ ಕೆರೆ) ಸಸ್ಯ ಕ್ಷೇತ್ರಗಳಲ್ಲಿ ಸಸಿಗಳನ್ನು ಬೆಳೆಸಲಾಗಿದೆ.
ತೇಗ, ಕರಿಬೇವು, ಶ್ರೀಗಂಧ, ಮಹಾಗಣಿ, ಸೊಗಸೆ, ನುಗ್ಗೆ, ಹೊಂಗೆ, ಹಲಸು, ಬೆಟ್ಟದನೆಲ್ಲಿ, ಕಾಡುಬದಾಮಿ,ನಿಂಬೆ, ಶ್ರೀಗಂಧ, ಸಿಲ್ವರ್, ಬೇವು, ಬುರುಗಾ, ಅಶೋಕ, ನೇರಳೆ, ರಕ್ತಚಂದನ, ಕಾಯ, ಬೀಟೆ, ತಪಸಿ, ಕಮರ, ಮತ್ತಿ, ಆಲ, ಅರಳಿ ಇತ್ಯಾದಿ ೨೫ ಕ್ಕೂ ಹೆಚ್ಚು ತಳಿಗಳ ಆರ್‌ಕೆವಿವೈ,ಹಸಿರು ಕರ್ನಾಟಕ, ಕೆಎಂಇಆರ್‌ಸಿ, ಆರ್‌ಎಸ್‌ಪಿಡಿ, ರಸ್ತೆ ಬದಿ ಯೋಜನೆಗಳಡಿ ಸಸಿಗಳನ್ನು ಇಲಾಖೆ ಬೆಳೆಸಿದೆ.
ಸಸಿಗಳ ಬ್ಯಾಗ್ ಸುತ್ತ ಮತ್ತು ಎತ್ತರದ ಅಳತೆ(ಇಂಚು)೨/೮ ಸಸಿಗೆ ೨.ರೂ., ೬/೯- ೩ರೂ ಹಾಗೂ ೮/೧೨ ಸಸಿಗೆ ೬ ರೂ. ದರ ನಿಗದಿಪಡಿಸಲಾಗಿದೆ. ಇನ್ನೂ ಹೆಚ್ಚಿನ ಅಳತೆ ಬ್ಯಾಗ್‌ನಲ್ಲಿರುವ ಸಸಿಗಳಿಗೆ ಪ್ರತ್ಯೇಕ ದರವಿದೆ.
"
"
ನೀರಾವರಿ ಸೌಲಭ್ಯವಿರುವ ರೈತರಿಗೆ ತಕ್ಷಣದಿಂದಲೇ ಸಸಿಗಳನ್ನು ವಿತರಿಸಲಾಗುವುದು. ಹೊಳಲ್ಕೆರೆ, ಹೊಸದುರ್ಗ ತಾಲೂಕಿನ ಇನ್ನು ೧೫ದಿನಗಳ ನಂತರ ಹಾಗೂ ಮಳೆ ಪರಿಸ್ಥಿತಿ ನೋಡಿಕೊಂಡು ಜಿಲ್ಲೆಯ ಇನ್ನೀತರ ತಾಲೂಕುಗಳಿಗೆ ಸಸಿಗಳ ಹಂಚಿಕೆ ಆರಂಭ ವಾಗಲಿದೆ.
— ಕೆ. ಹರೀಶ್, ಡಿಸಿಎಫ್(ಸಾಮಾಜಿಕ ಅರಣ್ಯ)ಚಿತ್ರದುರ್ಗ
ಹುಣಸೆ, ಮಾವು ಮೊದಲಾದ ತಳಿಗಳ ಕಸಿ ಮಾಡಿದ ಸಸಿಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಜೂನ್ ಒಂದರಿAದ ಸಾರ್ವಜನಿಕರಿಗೆ ಸಸಿಗಳನ್ನು ಕೊಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟಾರೆ ೧.೧೨ ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಮಳೆಗಾಲ ಆರಂಭವಾಗುತ್ತಿದ್ದAತೆ ಅರಣ್ಯ ಪ್ರದೇಶ, ಸರ್ಕಾರಿ ಕಚೇರಿ ಆವರಣ, ಸರ್ಕಾರಿ ಜಾಗ, ರಸ್ತೆ ಬದಿ ಮೊದಲಾದ ಕಡೆ ಸಸಿಗಳನ್ನು ನೆಡಲು ಸಿದ್ಧತೆ ನಡೆಸಲಾಗಿದೆ.
— ಜಿ. ಗೋಪ್ಯಾನಾಯ್ಕ್, ಡಿಸಿಎ-ï,(ರೆಗ್ಯೂಲರ್)ಚಿತ್ರದುರ್ಗ