ಅಂತಾರಾಷ್ಟಿçÃಯ ಅಗ್ನಿಶಾಮಕ ದಿನಾಚರಣÉ ಅಂಗವಾಗಿ ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಗ್ನಿ ಅವಘಡ ವಿಪತ್ತು ನಿರ್ವಹಣೆ ಕಲ್ಪಿತ ಪ್ರದರ್ಶನ ಜರುಗಿತು. ಸೋಮಶೇಖರ್ ವಿ. ಅಗಡಿ, ನರೇಂದ್ರ, ಮಜಹರ್ ಉಲ್ಲಾ, ಯು.ಸಿ. ಗಿರೀಶ್, ಡಾ. ಸಂತೋಷ್ ಉಜ್ಜನಪ್ಪ, ಭರತ್,ಪ್ರೊ. ತಾರಿಣಿ ಶುಭದಾಯಿನಿ, ಡಾ. ಪ್ರಸಾದ್ ಇತರರು ಇದ್ದರು. 
ಚಿತ್ರದುರ್ಗ

ಅಗ್ನಿ ಅವಘಡ ವಿಪತ್ತು ನಿರ್ವಹಣೆ ಕಲ್ಪಿತ ಪ್ರದರ್ಶನ

ಡಿ.ಪಿ.ನಾಗರಾಜ ಶ್ರೇಷ್ಠಿ
ಚಿತ್ರದುರ್ಗ :ಅಂತಾರಾಷ್ಟಿçÃಯ ಅಗ್ನಿಶಾಮಕ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಮಂಗಳ ವಾರ ಟ್ರಯೇಜ್ ಮಾಕ್ ಡ್ರಿಲ್ ಅಗ್ನಿ ಅವಘಡ ವಿಪತ್ತು ನಿರ್ವಹಣೆ ಕಲ್ಪಿತ ಪ್ರದರ್ಶನ ನಡೆಯಿತು.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಆರೋಗ್ಯ ಇಲಾಖೆ ಹಾಗೂ ಕಾಲೇ ಜಿನ ಎನ್ನೆಸ್ಸೆಸ್ ಘಟಕದ ಸಂಯುಕ್ತಾಶ್ರಯದಲ್ಲಿ ಅಗ್ನಿ ಅವಘಡಗಳಂಥ ತುರ್ತು ಸಂದರ್ಭಗಳಲ್ಲಿ ವಿಪತ್ತು ನಿರ್ವಹಣೆ ಕಾರ್ಯಕ್ಷಮತೆ ಹೆಚ್ಚಿ ಸುವ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ನಡೆಯಿತು.
ಜಿಲ್ಲಾ ಅಗ್ನಿಶಾಮಕ ಅಽಕಾರಿ ಸೋಮಶೇಖರ್ ವಿ.ಅಗಡಿ, ಅಗ್ನಿಶಾಮಕ ಠಾಣಾಽಕಾರಿ ನರೇಂದ್ರ ಹಾಗೂ ಸಿಬ್ಬಂದಿ ರಕ್ಷಣಾ ಕಾ ರ್ಯಾಚರಣೆ ವಿವಿಧ ತಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ವೈದ್ಯಾಽಕಾರಿಗಳು ಗಾಯಾಳುಗಳಿಗೆ ನೀಡಬೇಕಾದ ತುರ್ತು ಚಿಕಿತ್ಸೆ ಹಾಗೂ ಟ್ರಯೇಜ್ ವಿಧಾನದ ಕುರಿತಂತೆ ವಿವರಿಸಿದರು. ರೆಡ್ ಕ್ರಾಸ್, ಎನ್ನೆಸ್ಸೆಸ್ ಸ್ವಯಂಸೇವಕರು ಕಲ್ಪಿತ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಮಜಹರ್‌ ಉಲ್ಲಾ, ಜಂಟಿ ಕಾರ್ಯದರ್ಶಿಗಳಾದ ಯು.ಸಿ. ಗಿರೀಶ್, ಡಾ. ಸಂತೋಷ್‌ಉಜ್ಜನಪ್ಪ, ಭರತ್, ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯೆ ಪ್ರೊ. ತಾರಿಣಿ ಶುಭದಾಯಿನಿ, ಎನ್ನೆಸ್ಸೆಸ್ ಅಽಕಾರಿ ಡಾ. ಪ್ರಸಾದ್ ಇತರರು ಇದ್ದರು.