ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟಿçÃಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಹಿರಿಯ ಸಿವಿಲ್ ನ್ಯಾಯಾಽÃಶ ಎಂ. ವಿಜಯ್ ಉದ್ಘಾಟಿಸಿದರು. ಬಿ.ಟಿ. ಕುಮಾರಸ್ವಾಮಿ, ಭೀಮನಗೌಡ ಪಾಟೀಲ್, ಭರತ್ ಎಂ. ಕಾಳಿಸಿಂಗೆ, ಆರ್.ನಾಗರಾಜ್ ಇತರರು ಇದ್ದರು. 
ಚಿತ್ರದುರ್ಗ

ವಾಹನ ಓಡಿಸುವ ಅಪ್ರಾಪ್ತರ ಪಾಲಕರಿಗೆ ಕಾದಿದೆ ದಂಡ, ಜೈಲು

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಿವಿಲ್ ನ್ಯಾಯಾಽÃಶ ಎಂ.ವಿಜಯ್ ಎಚ್ಚರಿಕೆ
  • ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ
  • ಸಡಕ್ ಸುರಕ್ಷಾ-ಜೀವ್ ರಕ್ಷಾ'
ಚಿತ್ರದುರ್ಗ: ಅಪ್ರಾಪ್ತರಿಗೆ ಮೋಟಾರ್ ವಾಹನ ಚಾಲನೆಗೆ ಅವಕಾಶ ನೀಡಿದರೆ ಭಾರಿ ದಂಡದೊAದಿಗೆ ಜೈಲು ಶಿಕ್ಷೆಗೆ ಗುರಿ ಯಾ ಗಬೇಕಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಽÃಶ, ಜಿಲ್ಲಾ ಕಾನೂನು ಸೇವಾ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಎಚ್ಚರಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಜಿಲ್ಲಾಡಳಿತ, ಪೊಲೀಸ್, ಸಾರಿಗೆ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ `ಸಡಕ್ ಸುರಕ್ಷಾ-ಜೀವ್ ರಕ್ಷಾ' ಘೋಷಣೆಯಡಿ ಆಯೋಜಿಸಿದ್ದ ೩೭ನೇ ರಾಷ್ಟಿçÃಯ ರಸ್ತೆ ಸುರಕ್ಷತಾ ಮಾಸಾಚರಣÉ ಉದ್ಘಾಟಿಸಿ ಮಾತನಾಡಿದರು.
ಅಪ್ರಾಪ್ತರ ವಾಹನ ಚಾಲನೆಯಿಂದ ಅಪಘಾತಗಳಾದಲ್ಲಿ ಅವರ ಪಾಲಕರಿಗೆ ಅಂದಾಜು ೨೫ ಸಾವಿರ ರೂ. ದಂಡ, ಜೈಲುಶಿಕ್ಷೆ ವಿಽಸಲಾಗುತ್ತದೆ. ೨೦೨೫ರ ಅಂಕಿ-ಅAಶಗಳ ಪ್ರಕಾರ ರಸ್ತೆ ಅಪಘಾತಗಳಲ್ಲಿ ಆಗುವ ಸಾವುಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಸಂಚಾರಿ ನಿಯಮಗಳನ್ನು ಕಡ್ಡಾಯ ಪಾಲಿಸಬೇಕು. ಅತೀ ವೇಗದ ಚಾಲನೆ, ಚಾಲನೆ ವೇಳೆ ಮೊಬೈಲ್ ಬಳಕೆ ಮತ್ತು ಮದ್ಯ ಸೇವಿಸಿ ವಾಹನ ಓಡಿಸುವುದು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಶಿಕ್ಷಣ ಇಲಾಖೆ ಮೂಲಕ ಶಾಲಾ ಮಕ್ಕಳಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗುವುದು. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ದೇಶದ ಜವಾ ಬ್ದಾರಿಯುತ ಪ್ರಜೆಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ವಿಜಯ್ ಕಿವಿಮಾತು ಹೇಳಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಕೇವಲ ಅರಿವಿದ್ದರೆ ಸಾಲದು, ಅವುಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಿದಾಗ ಅಪಘಾತ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್, ಕಾರು ಚಾಲಕರು ಸೀಟ್‌ಬೆಲ್ಟ್ ಧರಿಸುವುದು ದಂಡದಿAದ ತಪ್ಪಿಸಿಕೊಳ್ಳಲು ಅಲ್ಲ, ಪ್ರಾಣ ರಕ್ಷಣೆಗೆ ಎಂಬ ಅರಿವು ಇರಬೇಕು. ೧೮ ವ ರ್ಷ ತುಂಬದ ಮಕ್ಕಳು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆರ್‌ಟಿಒ ಭರತ್ ಎಂ. ಕಾಳಿಸಿಂಗೆ, ಮೊದಲು ಒಂದು ವಾರಕ್ಕೆ ಸೀಮಿತವಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹವನ್ನು ಈಗ ಒಂದು ತಿಂಗಳ ಕಾಲ ಹಮ್ಮಿಕೊಳ್ಳಲಾಗುತ್ತಿದೆ. ವಾಹನಗಳು ಹೆಚ್ಚಾದಂತೆ ಅಪಘಾತಗಳ ಸಂಖ್ಯೆಯೂ ಅಽಕವಾಗಿವೆ.
ದಂಡ ವಿಽಸುವುದರಿಂದ ಅಪಘಾತ ತಡೆಯಲು ಸಾಧ್ಯವಿಲ್ಲ. ಬದಲಾಗಿ ಪ್ರತಿಯೊಬ್ಬರೂ ಸ್ವಯಂ ಶಿಸ್ತಿನಿಂದ ಸಂಚಾರಿ ನಿಯಮ ಗಳನ್ನು ಪಾಲಿಸಬೇಕು. ರಾಷ್ಟಿçÃಯ ಹೆದ್ದಾರಿಗಳಲ್ಲಿ ನಿಗದಿಪಡಿಸಿದ ಪಥಗಳಲ್ಲಿ ಸಂಚರಿಸದ ಕಾರಣ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಚಾಲಕರು ಹೆಚ್ಚಿನ ಗಮನ ಹರಿಸಬೇಕು ಎಂದರು.
ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಭೀಮನಗೌಡ ಪಾಟೀಲ್ ಮಾತನಾಡಿದರು. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿತರಿಸಲಾಯಿತು. ರಸ್ತೆ ಸುರಕ್ಷತೆ ಕುರಿತ ಜಾಗೃತಿ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಎಸ್‌ಪಿ ಡಾ. ಶಿವ ಕುಮಾರ್, ಲೋಕೋಪಯೋಗಿ ಇಲಾಖೆ ಇಇಆರ್ ನಾಗರಾಜ್, ಹಿರಿಯ ಮೊಟಾರು ನಿರೀಕ್ಷಕ ಶಾನ್‌ಭಾಗ್, ಜಿ.ಬಿ.ತಿಪ್ಪೇಸ್ವಾಮಿ, ಮಹಾಂತೇಶ್ ಇತರರು ಇದ್ದರು.
"

ರಸ್ತೆ ಅಪಘಾತಗಳ ತಡೆಗೆ ಸಾರ್ವಜನಿಕರಲ್ಲಿ ಜಾಗÊತಿ ಮೂಡಿಸುವುದು ಮಾಸಾಚರಣÉ ಮುಖ್ಯ ಉದ್ದೇಶವಾಗಿದೆ. ೨೦೨೫ರಲ್ಲಿ ದೇಶದಾದ್ಯಂತ ೧.೮೦ ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧ ನೈಸರ್ಗಿಕ ವಿಕೋಪ, ಸಾಂಕ್ರಾಮಿಕ ಕಾಯಿಲೆಗಳಿಗಿಂತಲೂ ಹೆಚ್ಚು ಜನರನ್ನು ನಾವು ಅಪಘಾತದಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಅಪಘಾತದಿಂದ ಒಂದು ಜೀವ ಹೋದರೆ ಇಡೀ ಕುಟುಂಬ ಅನಾಥವಾಗುತ್ತದೆ. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವಾಹನ ಚಲಾಯಿಸಬೇಕು.