ಹಿರಿಯೂರು: ಧರ್ಮಪುರ ಏತ ನೀರಾವರಿ 2 ನೇ ಹಂತದ ಯೋಜನೆ ಜಾರಿಗಾಗಿ ಪಕ್ಷಾತೀತ ಹೋರಾಟಕ್ಕೆ ಮಂಗಳವಾರ ತಾಲೂಕಿನ ಧರ್ಮಪುರದ ಲಕ್ಷ್ಮೀ ದೇಗುಲದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರೈತರು ಸರ್ವಾನುಮತದ ತೀರ್ಮಾನಕ್ಕೆ ಬಂದಿದ್ದಾರೆ.
ಸಭೆಯಲ್ಲಿ ಹೋಬಳಿಯ ನೂರಾರು ರೈತರು ಭಾಗವಹಿಸಿ ನೀರಿಗಾಗಿ ವಾಡು ಇಲ್ಲವೇ ಮಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಧರ್ಮಪುರ ಏತ ನೀರಾವರಿ ಮೊದಲ ಹಂತದ ಯೋಜನೆ ರೈತರಲ್ಲಿ ಭರವಸೆ ಮೂಡಿಸಿದ್ದು, ಈ ಯೋಜನೆಯಡಿ ನೀರಿನ ಅಲೋಕೇಷನ್ ಇಲ್ಲದೆ ಕೆರೆಗಳಿಗೆ ಪೂರ್ಣ ಪ್ರವಾಣದಲ್ಲಿ ನೀರು ತುಂಬಿಸಲು ಸಾಧ್ಯವಾಗಿಲ್ಲ. 2 ನೇ ಹಂತದ ಯೋಜನೆ ಜಾರಿಯಾದರೆ ವಾತ್ರ ರೈತರಿಗೆ ಅನುಕೂಲವಾಗಲಿದೆ. ಯೋಜನೆ ಕಾರ್ಯಗತಕ್ಕೆ ಸಿಎಂ ಬಳಿಗೆ ಪಕ್ಷಾತೀತವಾಗಿ ನಿಯೋಗ ತೆರಳುವುದು ಒಳಿತು ಎಂದು ರೈತರು ಸಲಹೆ ನೀಡಿದರು.
ಧರ್ಮಪುರ ಹೋಬಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಕ್ಕರ ಗಿರೀಶ್ ವಾತನಾಡಿ, ಹೋಬಳಿ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ಪೂರ್ಣ ಪ್ರವಾಣದಲ್ಲಿ ನೀರು ತುಂಬಿಸಬೇಕು. ನೀರಿನ ಹೋರಾಟ ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಸಿಎಂ ಭೇಟಿ ವಾಡಬೇಕಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ವಾಜಿ ಅಧ್ಯಕ್ಷ ರಾಕ್ ಮಂಜು ವಾತನಾಡಿ, ಜೆ.ಜಿ. ಹಳ್ಳಿ ಹೋಬಳಿಯ 17 ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ 244 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಧರ್ಮಪುರ ಏತ ನೀರಾವರಿ 2ನೇ ಹಂತದ ಯೋಜನೆಗೆ 35 ಕೋಟಿ ರೂ. ಅಗತ್ಯವಿದೆ. ನೂರಕ್ಕೆ ನೂರು ಈ ಯೋಜನೆಗೆ ಅನುದಾನ ಸಿಗಲಿದೆ. ಉಪ ಚುನಾವಣೆಗೂ ಮುನ್ನ ಯೋಜನೆ ಕಾರ್ಯಗತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಗೆ 50 ಹಳ್ಳಿಗಳ ರೈತರು ಭಾಗವಹಿಸಿದ್ದರು. ಜಿಲ್ಲಾ ರೈತ ಸಂದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ರೈತ ಮುಖಂಡರಾದ ಬಂಡೀ ಈರಣ್ಣ, ಹರಿಯಬ್ಬೆ ಮಹಂತೇಶ್, ತಾಪಂ ವಾಜಿ ಸದಸ್ಯ ಕೆ.ಎಸ್. ವೀರಣ್ಣ, ಜುಂಜೇಗೌಡ, ಚಿಕ್ಕೇಗೌಡ, ಖಂಡೇನಹಳ್ಳಿ ಮಂಜುನಾಥ್, ಶಿವಮೂರ್ತಿ, ವೆಂಕಟರಾಮು, ಶ್ರವಣಗೆರೆ ಗೌಡಪ್ಪ, ನಿವೃತ್ತ ಮುಖ್ಯ ಶಿಕ್ಷಕ ಹೊಸಕೆರೆ ಹನುಮಂತರಾಯಪ್ಪ, ಜಿಪಂ ಕೆಡಿಪಿ ಸದಸ್ಯ ತಿಮ್ಮಣ್ಣ, ಹಲಗಲದ್ದಿ ಕಷ್ಣಮೂರ್ತಿ, ರಾಮಣ್ಣ, ಮದ್ದಿಹಳ್ಳಿ ವೀರೇಂದ್ರ ಪಾಟೀಲ್, ನಿವೃತ್ತ ಯೋಧರಾದ ಶಿವಣ್ಣ, ಡಿ.ಎಂ. ಯೋಗೇಶ್, ಸಣ್ಣೀರಪ್ಪ, ರಾಮಚಂದ್ರಪ್ಪ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುವಾರ್ ಇದ್ದರು.
ಧರ್ಮಪುರ ಹೋಬಳಿಯ ಜಲ ಸಂಕಷ್ಟದ ಕುರಿತು ಸಚಿವ ಬಾಲಕೃಷ್ಣ ಅವರು ಸಿಎಂಗೆ ಮನವರಿಕೆ ವಾಡಿದ್ದು, ಅ.29 ರಂದು ನೀರಾವರಿ ಇಲಾಖೆ ತಾಂತ್ರಿಕ ಸಮಿತಿ ಸಭೆಯಲ್ಲಿ ಧರ್ಮಪುರ ಏತ ನೀರಾವರಿ 2 ನೇ ಹಂತದ ಯೋಜನೆ ಕುರಿತು ಚರ್ಚೆಯಾಗಲಿದೆ. ನಂತರ ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವ ಭರವಸೆ ಇದೆ ಎಂದು ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಹೇಳಿದರು.
ಕೆರೆಗಳನ್ನು ತುಂಬಿಸುವ ವಿಚಾರದಲ್ಲಿ ಸಂಟಿತ ಹೋರಾಟ ಅಗತ್ಯ. ರೈತರು ನೀರಿಗಾಗಿ ದಶಕದಿಂದ ಶಾಂತಿಯುತ ಹೋರಾಟ ವಾಡಿಕೊಂಡು ಬಂದಿದ್ದಾರೆ. ಬರ, ಮಳೆ ಕೊರತೆ, ಅಂತರ್ಜಲ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಹಿತವೇ ನಮ್ಮೆಲ್ಲರಿಗೂ ಮುಖ್ಯ. ಈ ಸಂಕಷ್ಟದ ಸ್ಥಿತಿಯಲ್ಲಿ ಪಕ್ಷ ರಾಜಕೀಯ ಬದಿಗೊತ್ತಿ ನಾಳಿನ ಭವಿಷ್ಯಕ್ಕಾಗಿ ಒಗ್ಗೂಡಿ ಹೋರಾಟ ವಾಡಬೇಕಾಗಿದೆ ಎಂದು ರೈತ ಮುಖಂಡ ಅರಳಿಕೆರೆ ರಂಗನಾಥ್ ಹೇಳಿದರು.
ಧರ್ಮಪುರ ಹೋಬಳಿ ಜನರ ಶತವಾನದ ನೀರಿನ ಬೇಡಿಕೆಯನ್ನು ವಾಜಿ ಶಾಸಕಿ ಕೆ.ಪೂರ್ಣಿವಾ ಅವರು ಸಾಕಾರಗೊಳಿಸಿದ್ದು, ಧರ್ಮಪುರ ಏತ ನೀರಾವರಿ ಯೋಜ ನೆ 1 -2ನೇ ಹಂತದ ಯೋಜನೆಗೆ ವಿವಿ ಸಾಗರ ಜಲಾಶಯ/ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕನಿಷ್ಠ 1 ಟಿಎಂಸಿ ಅಡಿ ನೀರು ಮೀಸಲಿಡಬೇಕು. ಉಪ ಚುನಾವಣೆ ೋಷಣೆಗೂ ಮುನ್ನ ಯೋಜನೆ ಕಾರ್ಯಗತಕ್ಕೆ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಬೇಕಾಗಿದೆ ಎಂದು ಜಿಪಂ ವಾಜಿ ಅಧ್ಯಕ್ಷ ಬಿ.ಎಸ್. ರುನಾಥ್ ತಿಳಿಸಿದರು.
ಧರ್ಮಪುರ ಏತ ನೀರಾವರಿ ಯೋಜನೆಗೆ 1 ಟಿಎಂಸಿ ಅಡಿ ನೀರು ಮೀಸಲಿಡುವುದು. 2ನೇ ಹಂತದ ಯೋಜನೆ ತ್ವರಿತ ಅನುಷ್ಠಾನ. ಭದ್ರಾ ಮೇಲ್ದಂಡೆ ಯೋಜನೆ ತುಮಕೂರು ನಾಲೆ ಕಾಮಗಾರಿ ಪೂರ್ಣಗೊಳಿಸಿ ಧರ್ಮಪುರ ಕೆರೆಗೆ ಪೂರ್ಣ ಪ್ರವಾಣದಲ್ಲಿ ನೀರು ತುಂಬಿಸಬೇಕು. ಧರ್ಮಪುರ ತಾಲೂಕು ಘೋಷಣೆಗೆ ಕ್ರಮ ವಹಿಸಬೇಕು. ಗಡಿ ಭಾಗದ ಹಲಗಲದ್ದಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಹೊಸಕೆರೆ, ಬೇತೂರು, ಬುಡರಕುಂಟೆ ಕೆರೆಗಳಿಗೆ ನೀರು ತುಂಬಿಸಬೇಕು.
ಧರ್ಮಪುರ ಹೋಬಳಿ ರೈತರು ಪಕ್ಷಾತೀತವಾಗಿ ಒಗ್ಗೂಡಿರುವುದು ನೀರಾವರಿ ಯೋಜನೆ ಸಾಕಾರಗೊಳ್ಳುವ ಶುಭ ಸೂಚನೆಯಾಗಿದೆ. ಸಿಎಂ ಡಿ.ಕೆ.ಶಿವಕುವಾರ್ ಬಳಿಗೆ ರೈತರ ನಿಯೋಗ ಕರೆದೊಯ್ದು ಯೋಜನೆ ಕಾರ್ಯಗತಕ್ಕೆ ಪ್ರವಾಣಿಕ ಪ್ರಯತ್ನ ವಾಡಲಾಗುವುದು.ಎಂ.ಎಸ್.ಈರಲಿಂಗೇಗೌಡ, ಬ್ಲಾಕ್ ಕಾಂಗ್ರೆಸ್ ಗ್ರಾವಾಂತರ ಘಟಕದ ಅಧ್ಯಕ್ಷ.