ಚಿತ್ರದುರ್ಗ ತಾಲೂಕು ಹಂಪಯ್ಯನ ಮಾಳಿಗೆಯಲ್ಲಿ ಭಾನುವಾರ ಆಯೋಜಿಸಿದ್ದ ರೈತ ಸಂಘದ ಪುನಃಶ್ಚೇತನ ಕಾರ್ಯಕ್ರಮವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ, ಕೆ.ಪಿ. ಭೂತಯ್ಯ, ಮಲ್ಲಾಪುರ ತಿಪ್ಪೇಸ್ವಾ ಮಿ,ಉಗ್ರನರಸಿಂಹಗೌಡ,ಧನAಜಯ ಹಂಪಯ್ಯನಮಾಳಿಗೆ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ,ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಗೋವಿಂದರೆಡ್ಡಿ ಇತರರು ಇದ್ದರು.
- ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಳವಳ
- ರೈತ ಸಂಘದ ಪುನಃಶ್ಚೇತನ ಕಾರ್ಯಕ್ರಮ
- ಹಂಪಯ್ಯನಮಾಳಿಗೆ
ಚಿತ್ರದುರ್ಗ : ಬೆಳೆ ಮಾರಾಟದಲ್ಲಿ ಮಧ್ಯವರ್ತಿಗಳಿಂದ ರೈತರಿಗೆ ವಂಚನೆಯಾಗುತ್ತಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಹಂಪಯ್ಯನಮಾಳಿಗೆಯಲ್ಲಿ ಭಾನುವಾರ ಆಯೋಜಿಸಿದ್ದ ರೈತ ಸಂಘದ ಪುನಃಶ್ಚೇತನ ಕಾರ್ಯಕ್ರಮ ಉ ದ್ಘಾಟಿಸಿ ಮಾತನಾಡಿ, ರೈತರು ಬೆವರು ಸುರಿಸಿ ಬೆಳೆದ ಬೆಳೆಯಲ್ಲಿ ಮಧ್ಯವರ್ತಿಗಳು ಲಾಭ ಗಳಿಸುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತ ಸಾಲಗಾರನಾಗುತ್ತಿದ್ದಾನೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ.
ಹಾಗಾಗಿ ಸಾಲ ತೀರಿಸಲಾಗದಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ. ಇನ್ನಾದರೂ ನಾವೆಲ್ಲಿ ಎಡವುತ್ತಿದ್ದೇವೆ ಎಂಬುದರೆಡೆ ಆತ್ಮಾ ವಲೋಕನ ಮಾಡಿಕೊಳ್ಳದಿದ್ದರೆ ಇನ್ನಷ್ಟು ಕಷ್ಟದ ದಿನಗಳನ್ನು ರೈತರು ಎದುರಿಸಬೇಕಾಗುತ್ತದೆ ಎಂದರು.
ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ಭರ್ತಿ ಮಾಡುತ್ತದೆ ಎಂಬ ಭ್ರಮೆ ಬೇಡ. ನೇಮಕ ಮಾಡಿಕೊಂಡರೆ ಸಂಬಳ ಕೊಡಲು ಸರ್ಕಾರದಲ್ಲಿ ಹಣವಿಲ್ಲ. ಸಶಕ್ತ ದೇಶ ನಿರ್ಮಾಣಕ್ಕೆ ರೈತರ ಶ್ರಮ ಅಗತ್ಯವಿದೆ. ರೈತ ಸಂಘಟನೆ ಹೋಳಾಗಬಾರದು. ರೈತರಲ್ಲಿ ಒಗ್ಗಟ್ಟಿದ್ದರೆ ಸರ್ಕಾರಗಳನ್ನು ಮಣಿಸಲು ಸಾಧ್ಯ. ಸಂಘಟನೆ ದೊಡ್ಡ ಶಕ್ತಿಯಾದಾಗ ರೈತ ಕುಲ ಉಳಿಯುತ್ತದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ ಚಳವಳಿ ಜತೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದಾಗ ರೈತರ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಸಿಗುತ್ತದೆ.
ದುಡಿಯುವ ವರ್ಗ ಒಗ್ಗಟ್ಟಾಗದಿದ್ದರೆ ಕÊಷಿ ಭೂಮಿ ಸಹ ಕಳೆದು ಕೊಳ್ಳಬೇಕಾಗುತ್ತದೆ. ಹಸಿರು ಟವೆಲ್‌ನ ಶಕ್ತಿ ರೈತರಿಗಿಂತ ಬೇರೆಯವರಿಗೆ ಚೆನ್ನಾಗಿ ಗೊತ್ತಿದೆ. ದಂಧೆಕೋರರು ಹಸಿರು ಟವೆಲ್ ಬಳಸಿಕೊಳ್ಳುತ್ತಿರುವುದರ ವಿರುದ್ಧ ರೈತರು ಜಾಗÊತರಾಗಬೇಕು ಎಂದು ಕರೆ ನೀಡಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ಪ್ರಾಕೃತಿಕ ವಿಕೋಪದಗಳು,ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ರೈತ ಸಾಲಗಾರನಾಗುತ್ತಿದ್ದಾನೆ. ಚುನಾವಣೆ ಸಮಯದಲ್ಲಿ ಜಾತಿ ಆಧಾರದ ಮೇಲೆ ರೈತ ಸಂಘದಲ್ಲಿ ಒಡಕುಂಟಾಗುತ್ತಿದ್ದು, ಸಂಘಟನೆ ಶಕ್ತಿಯುತವಾಗಿದ್ದಾಗ ರೈತರಿಗೆ ನ್ಯಾಯ ಸಿಗಲಿದೆ ಎಂದರು.
ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ,ಜಿಲ್ಲಾ ಗೌರವಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ,ಉಗ್ರ ನರಸಿಂಹ ಗೌಡ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಜಿ. ಸುರೇಶ್‌ಬಾಬು, ಗೋವಿಂದರೆಡ್ಡಿ ಇತರರು ಇದ್ದರು.