ಚಿತ್ರದುರ್ಗದ ಕಮ್ಯುನಿಸ್ಟ್ ಕಚೇರಿ ಬಳಿ ಶುಕ್ರವಾರ ಆಯೋಜಿಸಿದ್ದ ೪೯ನೇ ವರ್ಷದ ಹುತಾತ್ಮರ ಮೇ ದಿನಾಚರಣೆಯಲ್ಲಿ ಜಿ.ಸಿ. ಸುರೇಶ್‌ಬಾಬು, ಬಿ. ಬಸವರಾಜ್, ಜಾಫರ್‌ಷರೀಪ್ ಇತರರು ಇದ್ದರು.
- ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಹೇಳಿಕೆ
- ೧೯ ರಂದು ವಸತಿ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ
- ಮೇ ದಿನಾಚರಣೆ
ಚಿತ್ರದುರ್ಗ: ಕಾರ್ಮಿಕ ವಿರೋಽ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳನ್ನು ಚುನಾವಣೆಗಳಲ್ಲಿ ಸೋಲಿಸಿ ರೈತರ, ಕಾರ್ಮಿಕರ ಪಕ್ಷಗಳನ್ನು ಅಽಕಾರಕ್ಕೆ ತರಬೇಕಿದೆ ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಹೇಳಿದರು.
ಸಿಪಿಐ, ಎಐಟಿಯುಸಿ, ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಆಶ್ರಯದಲ್ಲಿ ಕಮ್ಯುನಿಸ್ಟ್ ಕಚೇರಿ ಬಳಿ ಶುಕ್ರವಾರ ಆಯೋಜಿಸಿದ್ದ ೪೯ ನೇ ಹುತಾತ್ಮ ಕಾರ್ಮಿಕರ ಮೇ ದಿನಾಚರಣೆಯಲ್ಲಿ ಮಾತನಾಡಿದರು. ೧೯೨೫ರ ಕಾಯ್ದೆಗಳನ್ನು ಸರ್ಕಾರ ಮಾರ್ಪಾಡು ಮಾಡಿದೆ. ಯುವಜನರಿಗೆ ಉದ್ಯೋಗವಿಲ್ಲದಂತಾಗಿದೆ.
ಚಿತ್ರದುರ್ಗದಲ್ಲಿ ಮನೆಗಳಿಗಾಗಿ ೭ ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಒಬ್ಬರಿಗೂ ಒಂದು ಮನೆ ಮಂಜೂರಾಗಿಲ್ಲ. ಈ ಹಿನ್ನೆಲೆಯಲ್ಲಿ ಮೇ ೧೯ರಿಂದ ನಗರಸಭೆ, ತಾಪಂ ಬಳಿ ಧರಣಿ ನಡೆಸಲಾಗುವುದು. ರಾಷ್ಟಿçÃಯ ಬ್ಯಾಂಕ್‌ಗಳ ಖಾಸಗೀಕರಣ ವಿರುದ್ಧ ಕಾರ್ಮಿಕರು, ರೈತರು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಬಸವರಾಜ್ ಮಾತನಾಡಿ, ಸರ್ಕಾರಗಳು ಹೊಸ, ಹೊಸ ಕಾಯ್ದೆ ಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕರು, ರೈತರನ್ನು ಬೀದಿಪಾಲು ಮಾಡುತ್ತಿವೆ ಎಂದು ಆರೋಪಿಸಿದರು.
ರಾಜ್ಯರೈತ ಸಂಘದ ವಲಯ ಉಪಾಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‌ಬಾಬು ಮಾತನಾಡಿ, ಸರ್ಕಾರಗಳು ರೈತರು ಮತ್ತು ಕಾರ್ಮಿಕ ರಿಗೆ ನ್ಯಾಯ ಒದಗಿಸುತ್ತಿಲ್ಲ. ನ್ಯಾಯಕ್ಕಾಗಿ ಸಂಘಟಿತ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಮೊಳಕಾಲ್ಮೂರು ಜಾ-Àರ್‌ಷರೀ-ï ಮಾತನಾಡಿ, ಅವೈಜ್ಞಾನಿಕ ಕಾನೂನುಗಳ ಜಾರಿಯಿಂದ ಕಾ ರ್ಮಿಕರು, ರೈತರ ಬದುಕು ದಿವಾಳಿಯಾಗುತ್ತಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಮಾತನಾಡಿ, ಹೋರಾಟದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು ಎಂದರು.
ಎಐಟಿಯುಸಿ ಹೊಸದುರ್ಗ ತಾಲೂಕು ಕಾರ್ಯದರ್ಶಿ ಎನ್.ಸಿ. ಕುಮಾರಸ್ವಾಮಿ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಟಿ.ಆರ್. ಉ ಮಾಪತಿ, ತಿಪ್ಪಮ್ಮ,ಡಿ.ಮಹೇಶ್ವರಿ, ಬಿ.ಎಚ್. ಹನುಮಂತಪ್ಪ, ಕುಮಾರಣ್ಣ ಮಾತನಾಡಿದರು. ರಘುವೀರ್, ಎಂ.ಬಿ. ಜಯದೇವ ಮೂರ್ತಿ,ಡಿ.ಪೆನ್ನಯ್ಯ, ಭಾರ್ಗವ, ಅಮಿನಾಬಿ, ಈ.ಸತ್ಯಕೀರ್ತಿ, ಡಿ. ಪೆನ್ನಯ್ಯ ಮತ್ತಿತರರು ಇದ್ದರು.
ಶ್ರಮಿಕರ ವರ್ಗದ ಬದುಕಿನಲ್ಲಿ ಇಲ್ಲ ಭದ್ರತೆ
ದೇಶದಲ್ಲಿ ಬಡ ರೈತರು, ಕಾರ್ಮಿಕರ ಬದುಕಿನಲ್ಲಿ ಯಾವುದೇ ಭದ್ರತೆ ಕಾಣುತ್ತಿಲ್ಲ ಎಂದು ಕಾರ್ಮಿಕ ಮುಖಂಡ ರವಿಕುಮಾರ್ ಹೇಳಿದರು.
ಎಐಯುಟಿಯುಸಿ ನೇತೃತ್ವದಲ್ಲಿ ವಿಶ್ವ ಕಾರ್ಮಿಕರ ದಿನದ ಅಂಗವಾಗಿ ನಗರದ ಭಗತ್‌ಸಿಂಗ್ ಉದ್ಯಾನದ ಬಳಿ ಆಯೋಜಿಸಿದ್ದ ಮೇ ದಿನಾಚರಣೆಯಲ್ಲಿ ಮಾತನಾಡಿ, ಸುಭಾಷ್‌ಚಂದ್ರಬೋಸ್ ಮತ್ತು ಭಗತ್‌ಸಿಂಗ್ ಅವರು ನುಡಿದಂತೆ ಸ್ವಾತಂತ್ರ‍್ಯ ಬ್ರಿಟಿಷರಿಂದ ದೇಶದ ಶ್ರೀಮಂತರಿಗೆ ಹಸ್ತಾಂತರವಾಗಿದೆ.
ಪ್ರಜಾಪ್ರಭುತ್ವದ ಹೆಸರಲ್ಲಿ ಇಡೀ ದುಡಿಯುವ ವರ್ಗದ ಶ್ರಮ ಶಕ್ತಿಯನ್ನು ಬಂಡ ವಾ ಳಶಾಹಿ ಲಾಭ ಪಡೆಯುತ್ತಿದೆ. ಕಾರ್ಮಿಕರ ದುಡಿಮೆ ಅವಽಯನ್ನು ೮ ಗಂಟೆಗೆ ಬದಲಾಗಿ ೧೦-೧೨ ಗಂಟೆವರೆಗೆ ಹೆಚ್ಚಿಸುವ ಪ್ರಸ್ತಾವನೆ ಆಘಾತಕಾರಿಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಶ್ವದ ರೈತ ಕಾರ್ಮಿಕರ ಬದುಕಿಗೆ ಸ್ಪಷ್ಟ ಮುನ್ನುಡಿ ಬರೆದ ಮಹಾನ್ ನಾಯಕ ಕಾರ್ಲ್ಮಾರ್ಕ್ಸ್ ಅವರನ್ನು ಸ್ಮರಿಸಿ, ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಇಂದು ಸಂಕಲ್ಪ ಮಾಡೋಣ ಎಂದರು.
ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರಾದ ಗಿರಿಜಮ್ಮ, ಗುರುಶಾಂತ, ನಾಗವೇಣಿ ಹಾಗೂ ವಿಂಡ್ ಮಿಲ್ ಕಾರ್ಮಿಕರಾದ ಹೊನ್ನೂರಪ್ಪ, ನಾಗರಾಜಪ್ಪ, ಲೋಕಣ್ಣ, ಶಿವಲಿಂಗಪ್ಪ, ದಕ್ಷಿಣಮೂರ್ತಿ, ಸಾಗರ್, ಲಕ್ಷ್ಮಿ, ಲಕ್ಷಿ÷್ಮÃಬಾಯಿ ಮತ್ತಿತರರು ಇದ್ದರು.
ಕಾರ್ಮಿಕರ ಬೇಡಿಕೆಗೆ ಸ್ಪಂದಿಸಲಿ ಸರ್ಕಾರ