ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯವಿಭಾಗದ ವಿದ್ಯಾರ್ಥಿಗಳನ್ನು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಅವರು ಚಿತ್ರದುರ್ಗದಲ್ಲಿ ಶುಕ್ರವಾರ ಗೌರವಿಸಿದರು. ಸಂಸ್ಥೆ ಉಪಾಧ್ಯಕ್ಷ ಬಿ.ಎಲ್. ಅಮೋಘ್, ಆಡಳಿತಾಽಕಾರಿ ಡಾ.ಟಿ.ಎಸ್. ರವಿ, ಪ್ರಾಚಾರ್ಯ ಶೇಖರ್‌ರೆಡ್ಡಿ, ಉಪನ್ಯಾಸಕರಾದ ಮನೋಹರ್, ಅಣ್ಣಪ್ಪ ಇತರರು ಇದ್ದರು. 
ಚಿತ್ರದುರ್ಗ

ಎಸ್‌ಆರ್‌ಎಸ್ ಪಿಯು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಕ್ಕೆ ಆರನೆ ಮತ್ತು ಒಂಬತ್ತನೇ ಸ್ಥಾನ ಪಡೆದ ವಿದ್ಯಾರ್ಥಿಗಳು
  • ಸ್ಟೂಡೆಂಟ್ಸ್ಗಳ ಸಾಧನೆಗೆ ಬಿ.ಎ.ಲಿಂಗಾರೆಡ್ಡಿ ಹರ್ಷ
  • ದ್ವಿತೀಯ ಪಿಯು ಪರೀಕ್ಷೆ
ಚಿತ್ರದುರ್ಗ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಚಿತ್ರದುರ್ಗದ ಎಸ್‌ಆರ್‌ಎಸ್ ಪಿಯು ಕಾಲೇಜಿಗೆ ಈ ಬಾರಿ ಅತ್ಯುತ್ತಮ ಫಲಿತಾಂಶ ಬಂದಿದೆ.
ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕೆ.ಎಂ.ಸುದರ್ಶನ್ ೬೦೦ಕ್ಕೆ ೫೯೪ ಅಂಕಗಳೊAದಿಗೆ ರಾಜ್ಯದಲ್ಲೇ ೬ ನೇ, ಜಿಲ್ಲೆಗೆ ಪ್ರಥಮ ಸ್ಥಾನದೊಂದಿಗೆ ದಾಖಲೆ ಸಾಧನೆ ಮಾಡಿದ್ದಾರೆ. ಭಾಷಾ ವಿಷಯಗಳನ್ನು ಹೊರತುಪಡಿಸಿ ವಿಜ್ಞಾನದ ಎಲ್ಲ ವಿಷಯಗಳ ಲ್ಲೂ ಶೇ.೧೦೦ರಷ್ಟು ಅಂಕಗಳನ್ನು ಪಡೆದಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಗನಕಲ್ಲು ಗ್ರಾಮದ ಕೆ. ಮಲ್ಲಿಕಾರ್ಜುನ್- ಕೆ.ಅರುಣಾ ದಂಪತಿ ಪುತ್ರ ಸುದರ್ಶನ್, ಚಿಕ್ಕಜೋಗಿಹಳ್ಳಿ ಜೆಎನ್‌ವಿ ಯಲ್ಲಿ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೯೧ಅಂಕ ಪಡೆದಿದ್ದರು. ಎಂಬಿಬಿಎಸ್ ಓದುವ ಗುರಿ ಸುದರ್ಶನ್ ಅವರದು. ಆತನ ಸಹೋದರ ಕೆ.ಎಂ. ಮಧುಸೂದನ್ ಕೂಡ ಎಸ್‌ಆರ್‌ಎಸ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಇವರು ಬೆಂಗಳೂರಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವೈ.ಎಂ. ಮೇಘನಾ ಅವರು ೫೯೧ ಅಂಕಗಳೊAದಿಗೆ ರಾಜ್ಯಕ್ಕೆ ಒಂಬತ್ತನೇ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನದೊಂದಿಗೆ ಉತ್ತೀರ್ಣರಾಗಿದ್ದಾರೆ. ಬಳ್ಳಾರಿ ಜಿಲ್ಲೆ ತಾಳೂರು ಗ್ರಾಮದ ಕೆ. ಮಲ್ಲಿಕಾರ್ಜುನ್- ಶಾಂತಮ್ಮ ದಂಪತಿ ಪುತ್ರಿ ಮೇಘನಾ ಅವರು ಚಿಕ್ಕಜೋಗಿಹಳ್ಳಿ ಜೆಎನ್‌ವಿಯಲ್ಲಿ ಎಸ್ಸೆಸ್ಸೆಲ್ಲಿವರೆಗೆ ಓದಿದ್ದಾರೆ. ಇವರು ಕೂಡ ಎಂಬಿಬಿಎಸ್ ಓದುವ ಗುರಿ ಹೊಂದಿದ್ದಾರೆ.
ಇದೇ ವಿಭಾಗದ ಕೆ.ಎಸ್.ಪ್ರಮೋದ್‌ಹೆಬ್ಬಾಳ್ ೫೮೮, ವಿ. ಹರ್ಷಿತಾ ೫೮೪, ನಮಿತಾರಾಜ್ ೫೮೪. ನೂರ್‌ಸಬ ೫೮೨ ಹಾಗೂ ಎಂ.ಯಶ್ವAತ್ ೫೮೨ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅರ್‌ಹಮ್‌ಜೈನ್ ೫೮೯ ಅಂಕಗಳೊAದಿಗೆ ಉತ್ತೀರ್ಣರಾಗಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ವರ್ಷದ ಪರೀಕ್ಷೆಯಲ್ಲೂ ನಮ್ಮ ಕಾಲೇಜು ಜಿಲ್ಲೆಗೆ ಅಗ್ರಸ್ಥಾನ ಪಡೆಯುವುದರೊಂದಿಗೆ ನೆರೆಯ ಜಿಲ್ಲೆಗಳಲ್ಲೇ ಅತ್ಯುತ್ತಮ -Àಲಿ ತಾಂಶ ದಾಖಲಿಸಿದೆ ಎಂದು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಶುಕ್ರವಾರ ಗೌರವಿಸಿ ಮಾತನಾಡಿದ ಅವರು, ಕಾಲೇಜಿನ ೫೪೫ ವಿದ್ಯಾರ್ಥಿಗಳಲ್ಲಿ ೩೯೫ ಮಂದಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ೧೩೩ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕ ಪಡೆ ದಿರುವುದು ವಿಶೇಷವಾಗಿದೆ ಎಂದರು.
ಕಾಲೇಜಿನಲ್ಲಿರುವ ಬೋಧನಾ ವ್ಯವಸ್ಥೆ, ಮೂಲ ಸೌಕರ್ಯ ಹಾಗೂ ಬೋಧಕರು, ಆಡಳಿತ ಮಂಡಳಿ ಪ್ರೋತ್ಸಾಹ ಮತ್ತು ಕಾಳಜಿ ಗೆ ವಿದ್ಯಾರ್ಥಿಗಳು ತೃಪ್ತಿ ವ್ಯಕ್ತಪಡಿಸಿದರು.