ಜೀತ ಪದ್ಧತಿ ನಿರ್ಮೂಲನೆ ವಿರೋಽ ದಿನಾಚರಣೆ ಅಂಗವಾಗಿ ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಽÃಶ ಎಂ. ವಿಜಯ್ ಚಾಲನೆ ನೀಡಿ ಮಾತನಾಡಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ, ಅನಿಲ ಬಾಲಚಂದ್ರ ಬಗಟಿ, ಶಿದ್ರಾಮ ಮಾರಿಹಾಳ, ಎಂ.ಆರ್. ಮಂಜುನಾಥ್, ಚಿದಾನಂದ ಸ್ವಾಮಿ ಇತರರು ಇದ್ದರು.
- ಹಿರಿಯ ಸಿವಿಲ್ ನ್ಯಾಯಾಽÃಶ ಎಂ. ವಿಜಯ್ ಸಲಹೆ
- ಚಿತ್ರದುರ್ಗದಲ್ಲಿ ಜಾಗೃತಿ ಜಾಥಾ
- ಜಿಲ್ಲಾ ಕಾನೂನು ಸೇವಾ ಪ್ರಾಽಕಾರ
ಚಿತ್ರದುರ್ಗ: ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಜೀತ ಪದ್ಧತಿ ಪಡೆದುಕೊಂಡಿರುವ ಹೊಸ ಸ್ವರೂಪಗಳನ್ನು ಗುರುತಿಸಿ ನಿಯಂತ್ರಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಽÃಶ, ಜಿಲ್ಲಾ ಕಾನೂನು ಸೇವಾ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಽಕಾರ, ಜಿಪಂ, ಪೊಲೀಸ್, ಕಾರ್ಮಿಕ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಸೋಮವಾರ ಡಿಸಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಜೀತ ಪದ್ಧತಿ ಆಧುನಿಕ ಗುಲಾಮಗಿರಿ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದೆ ಕೃಷಿ, ಇಟ್ಟಿಗೆ ಗೂಡು ಇತ್ಯಾದಿ ಗಳೆಡೆ ಕಂಡುಬರುತ್ತಿದ್ದ ಸಾಂಪ್ರದಾಯಕ ಜೀತಪದ್ಧತಿ ಈಗ ಕಡಿಮೆಯಾಗಿದೆ. ಬದಲಾದ ಕಾಲಘಟ್ಟದಲ್ಲಿ ಡಿಜಿಟಲ್ ಪ್ಲಾಟ್-Áರ್ಮ್ಗಳು ಹಾಗೂ ಗಿಗ್ ಎಕಾನಮಿ ವಲಯಗಳಲ್ಲಿ ಹೊಸ ಮಾದರಿಯ ಶೋಷಣÉ ಶುರುವಾಗಿದೆ ಎಂದರು.
ಹಲವು ಸರ್ವೀಸ್ ಪ್ರೊವೈಡರ್ ಕಂಪನಿಗಳು ಮತ್ತು ಡಿಜಿಟಲ್ ಸಂಸ್ಥೆಗಳು ಉದ್ಯೋಗಿಗಳಿಗೆ ಸಾಲ ನೀಡಿ, ಆ ನೆಪದಲ್ಲಿ ಅವರನ್ನು ದೀರ್ಘ ಕಾಲದವರೆಗೆ ಕೆಲಸಕ್ಕೆ ಕಟ್ಟುಬೀಳುವಂತೆ ಮಾಡಿ ಅವರನ್ನು ಸಂಕಷ್ಟಕ್ಕೆ ನೂಕುತ್ತಿವೆ. ಬದಲಾಗಿರುವ ಈ ಸನ್ನಿವೇಶ ಎದುರಿಸಲು ಕಾರ್ಮಿಕ ಇಲಾಖೆ ತನ್ನ ಕಾರ್ಯವೈಖರಿ ಬದಲಿಸಿಕೊಳ್ಳಬೇಕಿದೆ. ಹಳೆಯ ಪದ್ಧತಿಗಳ ನಿಗಾದ ಜತೆಗೆ ಡಿಜಿಟಲ್ ಪ್ಲಾಟ್-Áರ್ಮ್ಗಳ ಮೇಲೂ ಕಣ್ಗಾವಲು ಅಗತ್ಯ. ತಾಂತ್ರಿಕ ತರಬೇತಿಯೊಂದಿಗೆ ಮಾಡ್ರನ್ ಸ್ಲೇವರಿ ಪತ್ತೆಹಚ್ಚಿ ನಿರ್ಮೂಲನೆ ಮಾಡಬೇಕಿದೆ ಎಂದರು.
ಅಪರ ಜಿಲ್ಲಾಽಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಜೀತ ಯಾವುದೇ ಪ್ರತಿ-Àಲವಿಲ್ಲದೇ ದುಡಿಸಿಕೊಳ್ಳುವ ಒಂದು ಅನಿಷ್ಠ ಪದ್ಧತಿಯಾಗಿದೆ. ಪ್ರತಿಯೊಬ್ಬ ಶ್ರಮಿಕ, ಕಾರ್ಮಿಕ ಮತ್ತು ರೈತರ ಬೆವರಿನ ಹನಿಗೆ ತಕ್ಕ ಪ್ರತಿ-Àಲ ಸಿಗಬೇಕು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಹಾಗೂ ಸಾರ್ವಜನಿಕರ ಕರ್ತವ್ಯವಾಗಿದೆ ಎಂದರು.
ಜಿಲ್ಲಾಽಕಾರಿ ಕಚೇರಿಯಿಂದ ಪ್ರಾರಂಭವಾದ ಜಾಥಾ ಓನಕೆ ಓಬವ್ವ ವೃತ್ತ, ಮದಕರಿ ನಾಯಕ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಒನಕೆ ಓಬವ್ವ ವೃತ್ತ ಸೇರಿತು. ಅಲ್ಲಿ ಮಾನವ ಸರಪಳಿ ರಚಿಸಲಾಯಿತು. ಜೀತ ಪದ್ಧತಿ ವಿರೋಽ ಘೋಷಣೆಗಳನ್ನು ಕೂಗುವ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಜಿಲ್ಲಾ ಕಾರ್ಮಿಕ ಅಽಕಾರಿ ಅನಿಲ್ ಬಗಟಿ ಪ್ರತಿಜ್ಞೆ ಬೋಽಸಿದರು.
ಡಿಡಿಪಿಐ ಎಂ.ಆರ್. ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಽಕಾರಿ ಚಿದಾನಂದಸ್ವಾಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ. ಸತೀಶ್ ಕುಮಾರ್ ಇತರರು ಇದ್ದರು.